ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಿಂಧನೂರು ಇವರುಗಳಿಂದ ಮಾನ್ಯ ತಹಶೀಲ್ದಾರರು ಇವರ ಮುಖಾಂತರ ಮಾನ್ಯ ರಾಷ್ಟ್ರಪತಿಗಳು ಹಾಗೂ ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು….
ಸಿಪಿಐ(ಎಂಎಲ್) ರೆಡ್ ಸ್ಟಾರ್ ತಾಲೂಕು ಸಮಿತಿ ಸಿಂಧನೂರು ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ-ಟಿಯುಸಿಐ ತಮಗೆ ಒತ್ತಾಯಿಸುವುದೇನಂದರೆ, ನಿನ್ನೆ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಂಬೇಡ್ಕರ್ ಫೋಟೊ ತೆಗೆದು ಹೊರಗಿಟ್ಟರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ರಾಯಚೂರು ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ನಡೆಯ ಬಾರದ ಅವಮಾನ ಘಟನೆ ನಡೆದಿದೆ. ಈ ಘಟನೆಯನ್ನು ನಮ್ಮ ಪಕ್ಷ ಹಾಗೂ ಎಲ್ಲಾ ದಲಿತ, ಪ್ರಗತಿಪರ ಸಂಘಟನೆಗಳು ಉಗ್ರವಾಗಿ ಖಂಡಿಸುತ್ತೇವೆ. ನ್ಯಾಯಾಧಿಶ ಮಲ್ಲಿಕಾರ್ಜುನಗೌಡನ ಮೇಲೆ ಸೂಕ್ತ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ನಮ್ಮ ಒತ್ತಾಯವಾಗಿದೆ. ಸಂವಿಧಾನ ಶಿಲ್ಪಿ ಭಾರತದ ಭಾಗ್ಯವಿಧಾತ ಡಾ. ಬಾಬಾಸಾಹೇಬ ಅಂಬೇಡ್ಕರವರ ಫೋಟೊವನ್ನು ಕಾರ್ಯಕ್ರಮದ ಆಚರಣೆಯಿಂದ ತೆಗೆದು ಹಾಕದ ಹೊರತು ತಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಮಲ್ಲಿಕಾರ್ಜುನಗೌಡ ಎಂಬ ಹೆಸರಿನ ಜಿಲ್ಲಾ ನ್ಯಾಯಧೀಶನು ವಕೀಲರು ನೌಕರರು ಸಾರ್ವಜನಿಕರು ತುಂಬಿದ ಸಭೆಯಲ್ಲಿ ಜಾತಿವಾದವನ್ನು ಪ್ರದರ್ಶಿಸಿದ್ದಾನೆ. ಅಲ್ಲಿದ್ದ ವಕೀಲರು ವಾದ / ವಿವಾದ ಮಾಡಿದರೂ ಆತ ಒಪ್ಪದೆ ಫೋಟೊ ತೆಗೆದ್ಹಾಕಿಸಿ ಜಂಡಾ ಏರಿಸಿದ್ದಾನೆ. ಇದು ಇಡೀ ದೇಶ ಅದರಲ್ಲೂ ಭಾರತದ ನ್ಯಾಯಾಂಗ ವ್ಯವಸ್ಥೆ ನಾಚಿಕೆಯಿಂದ ತಲೆತಗ್ಗಿಸುವಂತ ಘಟನೆಯಾಗಿದೆ. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿ ವರ್ಗ ಅಲ್ಲಿದ್ದರೂ, ಈ ಮನುವಾದಿ ಮಲ್ಲಿಕಾರ್ಜುನಗೌಡ ಭಾರತ ರಾಜ್ಯಾಂಗದ ನಿರ್ಮಾತೃ, ನ್ಯಾಯಶಾಸ್ತ್ರದ ಮೇರು ಪರ್ವತವಾದ ಬಾಬಾ ಸಾಹೇಬರ ಮೇಲೆ ಅಸ್ಪ್ರುಶ್ಯತೆ ಆಚರಣೆ ಮಾಡಿದ್ದಾನೆ. ಕೂಡಲೇ ಮಾನ್ಯ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಸೂಕ್ತ ಕಾನೂನು ಕಠಿಣ ಪ್ರಕರಣವನ್ನು ಈತನಮೇಲೆ ಕೇಸ್ ದಾಖಲಿಸಿ, ಬಂಧಿಸಿ, ಉಗ್ರ ಶಿಕ್ಷೆಯನ್ನು ನೀಡಬೇಕೆಂದು ನಮ್ಮ ಪಕ್ಷದ, ಶ್ರಮಜೀವಿ ಹಮಾಲರ ಸಂಘ ಹಾಗೂ ಎಲ್ಲಾ ದಲಿತ, ಪ್ರಗತಿಪರ ಸಂಘಟನೆಗಳ ಒತ್ತಾಯವಾಗಿದೆ. ಇಂದು ನಡೆದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಗರದ ಪ್ರವಾಸಿ ಮಂದಿರದಿಂದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ಮೇಲೆ ಕೇಸ್ ಹಾಕಿ ಕೂಡಲೇ ಬಂಧಿಸಿ ! ಬಂಧಿಸಿ ! ಜೈ ಭೀಮ್ ಘೋಷಣೆಗಳ ಮೂಲಕ ಗಾಂಧಿ ವೃತ್ತ ಹಾಗೂ ಬಸವೇಶ್ವರ ವೃತ್ತದಿಂದ ಪುನಃ ಗಾಂಧಿ ವೃತ್ತಕ್ಕೆ ಪ್ರತಿಭಟನಾಕಾರರು ಆಗಮಿಸಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ, ಹೆ.ಎನ್.ಬಡಿಗೇರ, ಎಂ.ಗಂಗಾಧರ, ಶೇಖರಪ್ಪ ವಕೀಲರು, ಆರ್.ಅಂಬ್ರೂಸ್, ರಾಮಣ್ಣ ಮಾಸ್ತಾರ, ಮಾಬುಸಾಬ ಬೆಳ್ಳಟ್ಟಿ, ಹನುಮಂತಪ್ಪ ಹಂಪನಾಳ, ಹೆಚ್.ಆರ್.ಹೊಸಮನಿ, ನರಸಪ್ಪ ಕಟ್ಟಿಮನಿ, ಹನುಮಂತ ಗೋಮರ್ಸಿ, ಅಶೋಕ ನಂಜಲದಿನ್ನಿ, ಹುಸೇನಪ್ಪ, ಮಹಾದೇವಪ್ಪ ದುಮುತಿ, ಅಮರೇಶ ಗಿರಿಜಾಲಿ, ಮರಿಯಪ್ಪ ಸುಕಾಲಪೇಟೆ, ಶಿವರಾಜ ಉಪ್ಪಲದೊಡ್ಡಿ, ಯಲ್ಲಪ್ಪ, ಬಸವರಾಜ ಬಾದರ್ಲಿ, ಹುಲುಗಪ್ಪ ಮಲ್ಕಾಪೂರ, ಬಸವರಾಜ ಮಲ್ಲಾಪೂರ, ಪಂಪಾಪತಿ ಬೂದಿವಾಳ, ಬಸವರಾಜ ಕುನ್ನಟಗಿ, ಮುದಿಯಪ್ಪ ಹನುಮನಗರಕ್ಯಾಂಪ್, ಪರಸಪ್ಪ, ಸೇರಿದಂತೆ ಇನ್ನೂ ನೂರಾರು ದಲಿತ ಪ್ರಗತಿಪರ ಸಂಘಟನೆಗಳ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ಬಾಬಾಸಾಹೇಬ್ /ಸಾವರ್ಕರ ಹೋರಾಟ ! ಭಾರತ /ಹಿಂದೂ ರಾಷ್ಟ್ರ ಹೋರಾಟ ! ಎಂ.ಗಂಗಾಧರ ಸಿಪಿಐ-ಎಂಎಲ್ ರಾಜ್ಯ ಸಮಿತಿ ಸದಸ್ಯರು.
ವರದಿ – ಸಂಪಾದಕೀಯ