ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶಾರದಾ ಮಾತಾ ಬುದ್ದಿ ಮಾಂದ್ಯ ಮಕ್ಕಳ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಿಸಲಾಯಿತು…
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶಾರದಾ ಮಾತಾ ಬುದ್ದಿ ಮಾಂದ್ಯ ಮಕ್ಕಳ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಭಾರತ ಮಾತೆಯ ಮಡಿಲಲ್ಲಿ ಸೇವೆ ಮಾಡುತ್ತಿರುವ ಯೋಧರು ನೆರವೇರಿಸಿ ಕಾರ್ಯನಿರತ ಎಲ್ಲಾ ಯೋಧರು ಕೂಡಿ ಹಣ ಸಂಗ್ರಹ ಮಾಡಿ ಬುದ್ದಿ ಮಾಂದ್ಯ ಮಕ್ಕಳ ಅರೋಗ್ಯ ದೃಷ್ಟಿ ಗಮನಿಸಿ ಶುದ್ಧ ನೀರಿನ ಘಟಕ ಯಂತ್ರ ನೀಡಿ ಎಲ್ಲಾ ಮಕ್ಕಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಮುಖ್ಯ ಅಥಿತಿಯಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಹಾಗೂ ವಿಷ್ಣು ಕಾಂಬಳೆ ಆಗಮಿಸಿದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶಾಂತಾ ಶಿಂದೆ ವಹಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಭಾರತೀಯ ಯೋಧರಾದ ಅಮಿತ ಅಭ್ಯಂಕರ,ಶಂಕರ ಮರಾಠೆ ,ಪ್ರಕಾಶ ಬಾಡಗಿ ,ಸಂತೋಷ ಅವಳೆ ,ಪ್ರದೀಪ ಅದಾಟೆ ,ಶಿವಾಜಿ ಕೊಡತೆ ,ಸಾಗರ ಭಂಡಾರೆ,ಬಾಬು ಉಮದಿ ,ಭರತೇಶ ಕೇಸ್ತಿ ,ಜ್ಯೋತಿಬಾ ಪೂಜಾರಿ,ಸದಾಶಿವ ರಾಜಮಾನೆ ,ಸುರೇಶ ಕುಟ್ಟೆ , ಯಲ್ಲಾಲಿಂಗ ಬಾಡಗಿ ,ಸಿದರಾಯ ಪಾಟೀಲ ,ಪ್ರಕಾಶ ಕಲ್ಲೋತಿ ,ನಂದ ಕುಮಾರ ,ಪರಸು ಬಾಡಗಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ ಅಥಣಿ