ನಾಲತವಾಡ:’ ನೈಜ ಕಲೆಯಾಗಿರುವ ನಾಟಕಕಲೆಯನ್ನು ಉಳಿಸಿ ಬೆಳೆಸಬೇಕಿದೆ.
ಇದಕ್ಕಾಗಿ ವೃತ್ತಿ ರಂಗಭೂಮಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ’ಎಂದು ಶ್ರೀಗುರು ಕುಮಾರೇಶ್ವರ ನಾಟಕ ಸಂಘದ ಮಾಲೀಕ, ಕಲಾವಿದರಾದ ಪ್ರವೀಣ ಬಾಗಲಕೋಟ ಹೇಳಿದರು. ಪಟ್ಟಣದ ಕೆನರಾ ಬ್ಯಾಂಕ್ ಬಳಿ ಶ್ರೀಗುರು ಕುಮಾರೇಶ್ವರ ನಾಟಕ ಕಂಪನಿ ಹಮ್ಮಿಕೊಂಡಿರುವ ರತ್ನ ಮಾಂಗಲ್ಯ ಸೂಪರ್ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.’ಈ ಹಿಂದೆ ವಿವಿಧ ರಾಜರ ಸಾಮ್ರಾಜ್ಯದಲ್ಲಿ ಕಲೆಗೆ ಹೆಚ್ಚಿನ ಪ್ರೋತ್ಸಾಹವಿದ್ದಿತ್ತು. ಅದೇ ಮಾದರಿಯಲ್ಲಿ ಈಗಲೂ ಈ ಭಾಗದಲ್ಲಿ ಸಾಹಿತ್ಯ, ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಾಲತವಾಡ ಸೇರಿದಂತೆ ಹೋಬಳಿಯಾದ್ಯಂತ ಹೆಚ್ಚಿನ ಕಲಾವಿದರೂ ಇದ್ದಾರೆ. ನಾಟಕ ಕಲೆಗೆ ಈ ಭಾಗದಲ್ಲಿ ಪ್ರೇಕ್ಷಕರು ಇದ್ದಾರೆ. ಕಂಪನಿಯ ಕಲಾವಿದರಿಗೆ ಸ್ಥಳೀಯವಾಗಿ ಎಲ್ಲ ಥರದ ಸಹಾಯ ಮಾಡುವ ಮೂಲಕ ಕಲಾವಿದರ ತಂದೆ ತಾಯಿ ನೀವಾಗಿರಿ’ ಎಂದು ಕೋರಿಕೊಂಡರು. ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯರಾದ ಪೃಥ್ವಿರಾಜ ನಾಡಗೌಡ್ರ,ಬಸವರಾಜಮಗಡ್ಡಿ,ರಮೇಶ ಆಲಕೊಪ್ಪರ,ಪ್ರಮುಖರಾದ ಶಂಕರಾವ್ ದೇಶಮುಖ,ಬಸವರಾಜ ಚಿನಿವಾಲರ,ಖಾಜಾಹುಸೇನ ಎತ್ತಿನಮನಿ,ಬಸಣ್ಣ ವಡಗೇರಿ,ಮಹಾಂತೇಶ ಎ. ಗಂಗನಗೌಡರ,ಮಾಂತು ಗಂಗನಗೌಡ್ರ,
ವರದಿ – ಸೋಮನಥ ಹೆಚ್.ಎಮ್