ತಾವರಗೇರಾ ಪಟ್ಟಣದ ಪ್ರಗತಿ ಪರ ಸಂಘಟನಕಾರರಿಂದ ನ್ಯಾಯಧೀಶರನ್ನು ವಜಾಗೊಳಿಸುವಂತೆ ಉಪ ತಹಶೀಲ್ದಾರ ಮುಖಾಂತರ ಮಾನ್ಯ ರಾಜ್ಯ ಪಾಲಕರಿಗೆ ಮನವಿ….

Spread the love

ತಾವರಗೇರಾ ಪಟ್ಟಣದ ಪ್ರಗತಿ ಪರ ಸಂಘಟನಕಾರರಿಂದ ನ್ಯಾಯಧೀಶರನ್ನು ವಜಾಗೊಳಿಸುವಂತೆ ಉಪ ತಹಶೀಲ್ದಾರ ಮುಖಾಂತರ ಮಾನ್ಯ ರಾಜ್ಯ ಪಾಲಕರಿಗೆ ಮನವಿ….

ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ನ್ಯಾಯಾಧೀಶರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಲು ಹಿಂದೇಟು ಹಾಕಿದರೆ, ಉಗ್ರವಾದ  ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತ,

ತಾವರಗೇರಾ ಪಟ್ಟಣದ ಪ್ರಗತಿ ಪರ ಸಂಘಟನೆಗಳಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಧ್ವಜಾರೋಹಣಾ ನೆರವೇರಿಸಿದ ರಾಯಚೂರು ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ.. ತಾವರಗೇರಾ ಪಟ್ಟಣದ ನಾಡ ಕಾರ್ಯಲಯದ ಮುಂದೆ. ಪಟ್ಟಣದ ಪ್ರಗತಿ ಫರ ಸಂಘಟನೆಗಳಿಂದ ಪ್ರತಿಭಟಿನೆ ಮಾಡಿದ ಪ್ರಗತಿ ಪರ ಸಂಘಟನೆಗಳ ಮುಖಂಡರಾದ ನಾಗರಾಜ ನಂದಾಪೂರ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆಗೆಸಿ ಧ್ವಜಾರೋಹಣ ನೇರವೇರಿಸಿರುವುದು ಡಾ. ಅಂಬೇಡ್ಕರ್ ಅವರನ್ನು ಅವಮಾನ ಮಾಡಿದಂತೆ. ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಹೇಮರಾಜ್ ವೀರಾಪುರರವರು ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಟ್ಟು ಗಣರಾಜ್ಯೋತ್ಸ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ ರಾಯಚೂರು ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರ ತೆಗೆಸಿ ಧ್ವಜಾರೋಹಣ ಮಾಡಿದ್ದಾರೆ. ಇದು ದೇಶದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕೂಡಲೇ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಹಾಗೂ ರಾಜಾನಾಯಕರವರು ನ್ಯಾಯಧೀಶರ ವಿರುದ್ದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು, ಇದರ ಜೊತೆ ಜೊತೆಗೆ ಸಂಜೀವ್ ಚಲುವಾಧಿ ಹಾಗೂ ಗೌತಮ್ ಬಂಡಾರಿಯವರು ಈ ದೇಶಕ್ಕೆ ಕಾನೂನಿನ ಫರವಾಗಿ ಧ್ವನಿಯತ್ತಿದ ಮಹಾನಾಯಕರಿ ಅವಾಮಾನ ಮಾಡಿದರೆ ಪ್ರತಿಯೊಬ್ಬರಿಗೆ ಅವಮಾನ ಮಾಡಿದಂತೆ ಹಾಗಾಗಿ ಈ ಕೂಡಲೆ ಆ ನ್ಯಾಯ ಧೀಶರನ್ನು ವಜಾಗೋಳಿ ಇಲ್ಲಾವಾದಲ್ಲಿ ಮುಂದಿನ ದಿನಮಾನಗಳಲ್ಲಿ ನಾಡಿನಾದ್ಯಾಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಹೋರಾಟದಲ್ಲಿ 16ನೇ ವಾರ್ಡಿನ ಸದಸ್ಯರಾದ ಶ್ಯಾಮೂರ್ತಿ ಅಂಚಿ, ಶ್ಯಾಮೀದಸಾಬ ಮೆಣೇದಾಳ, ವಿಜೇಯ ಚಲುವಾದಿ, ಯಮನೂರಪ್ಪ ಬಿಳೆಗುಡ್ಡ, ದುರಗೇಶ ದೇವರಮನಿ, ಸಿದ್ದಪ್ಪ ಉಪ್ಪಾರ್, ಮಹೇಶ ಧಾಸರ್, ಸುರೇಶ ದಾಸನೂರು,ದೇವೇಂದ್ರ ಹುನುಗುಂದ, ರವಿ ಆರೇರ್, ಖಾಜಾಖಾನ್, ಹನ್ಮಂತ ಮುಳ್ಳೂರು, ಇತರರು ಪಾಲುಗೊಂಡಿದ್ದರು.

 (ಇದರ ಜೊತೆಗೆ ಈ ಹೋರಾಟದ ಕುರಿತು ನಾಡ ಕಚೇರಿಗೆ ಮನವಿ ಪತ್ರ ಸಲ್ಲಿಸಲು ನಾಡ ಕಾರ್ಯಲಯಕ್ಕೆ ಬಂದಾಗ ನಾಡ ಕಾರ್ಯಲಯದಲ್ಲಿ ಯಾವಬ್ಬ ಅಧಿಕಾರಿಗಳು ಇಲ್ಲದ ಕಾರಣ ಅಧಿಕಾರಿಗಳ ವಿರುದ್ದ ಧಂಗೆ ಎದ್ದರು.) ತದ ನಂತರ ನಾಡ ಕಾರ್ಯಲಯದ ಅಧಿಕಾರಿಗಳಾದ ಶರಣಪ್ಪ ದಸರ್, ಹಾಗೂ ಸೂರ್ಯಕಾಂತ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿಕೊಂಡರು. ಇದೇ ಸಂದರ್ಭದಲ್ಲಿ ಯಾವುದೇ ಅ ಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಜವಬ್ಧಾರಿಯುತವಾಗಿ ಕಾರ್ಯನಿರ್ವಹಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *