ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸದೆ ಕೆಲಸವನ್ನೆ ಕಳೆಯುವ ಸರ್ಕಾರದ ನಿರ್ಧಾರ- ಎಸ್‌ಎಫ್‌ಐ ವಿರೋಧ.

Spread the love

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸದೆ ಕೆಲಸವನ್ನೆ ಕಳೆಯುವ ಸರ್ಕಾರದ ನಿರ್ಧಾರಎಸ್ಎಫ್ ವಿರೋಧ.

ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ….

ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ತಾಲೂಕು ಸಮಿತಿ ಲಿಂಗಸ್ಗೂರು ತಮಗೆ ತಿಳಿಸುವುದೇನೆಂದರೆ, ೩೪ ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ವಿಧಾನಸಭೆ ನಡೆದ ಸಮಯದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಕೆಲವು ಅಧಿಕಾರಿಗಳನ್ನು ಮಾತ್ರ ಒಳಗೊಂಡ ಸಮಿತಿಯನ್ನು ರಚಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಕುಮಾರ ನಾಯಕರ ನೇತೃತ್ವದಲ್ಲಿನ ಈ ಸಮಿತಿಯಲ್ಲಿ ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಯಾರೂ ಇರಲಿಲ್ಲ. ಈ ಸಮಿತಿಯ ಶಿಫಾರಸ್ಸುಗಳು ಶಿಕ್ಷಣದ ಗುಣಮಟ್ಟ, ಶಿಕ್ಷಕರ ಸಾಮರ್ಥ್ಯದ ಸದ್ಭಳಿಕೆ, ಶಿಕ್ಷರಿಗೆ ಖಾತರಿಪಡಿಸಬೇಕಾದ ಸೇವಾ ನಿಯಮಗಳು-ಕೆಲಸದ ಭದ್ರತೆ-ತರಬೇತಿ, ನಿಯಮಕಾಲದಲ್ಲಿ ವೇತನ ಪಾವತಿ ಈ ಶಿಕ್ಷಕರಿಗೆ ನೀಡಬೇಕಾದ ಸಮಾಜಿಕ ರಕ್ಷಣಾ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ಯಾವುದೇ ಅಧ್ಯಯನವನ್ನು ಮಾಡಿರುವುದಿಲ್ಲ. ಬದಲಾಗಿ ಅತಿಥಿ ಉಪನ್ಯಾಸಕರ ಮೇಲೆ ಅವೈಜ್ಞಾನಿಕ ಕೆಲಸದ ಹೊರೆಯನ್ನು ಹೇರುವ ಬೇಜವಾಬ್ದಾರಿ ಶಿಫಾರಸ್ಸನ್ನು ನೀಡಿರುತ್ತದೆ. ಯುಜಿಸಿ ನಿಯಮಗಳ ಪ್ರಕಾರ ಖಾಯಂ ಉಪನ್ಯಾಸಕರಿಗೆ ನೀಡಲಾಗುತ್ತಿರುವ ಕೆಲಸದ ಗುರಿಗೆ ಸಮಾನವಾದ ಕೆಲಸವನ್ನು ಅತಿಥಿ ಉಪನ್ಯಾಸಕರಿಗೂ ನೀಡುವುದಾದರೆ, ಖಾಯಂ ಉಪನ್ಯಾಸಕರಿಗೆ ಸಮನಾದ ವೇತನ ಹಾಗೂ ಇತರ ಸವಲತ್ತುಗಳನ್ನು ಈ ಶಿಕ್ಷಕರಿಗೂ ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆದರೆ ಶ್ರೀ ಕುಮಾರನಾಯಕ್ ರವರ ನೇತ್ರತ್ವದ ಸಮಿತಿ ಕೆಲಸದ ಹೊರೆಯನ್ನು ಹೆಚ್ಚಿಸಿ, ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವವರ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಕೆಲಸದ ಹೊರೆ ಹೆಚ್ಚು ಮಾಡಿ ವೇತನ ಹೆಚ್ಚಳದ ಬರವಸೆ ನೀಡುವುದು ನಿಜವಾಗಿಯೂ ಕೆಲಸದ ಅಭದ್ರತೆಗೆ ಕಾರಣವಾಗುವುದು ಮಾತ್ರವಲ್ಲದೆ, ಸರ್ಕಾರಕ್ಕೆ ಆಗುವ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸುವ ನೌಕರ ವಿರೋಧಿ ನೀತಿಯ ಆಧಾರದ ಏಕಮುಖ ಶಿಫಾರಸ್ಸು ಆಗಿರುತ್ತದೆ.ಈಗಾಗಲೇ ಇರುವ ೧೪,೫೦೦ ಅತಿಥಿ ಉಪನ್ಯಾಸಕರಲ್ಲಿ ೭೨೦೦ ಜನರನ್ನು ಕೆಲಸದಿಂದ ತೆಗೆಯಲಾಗುವುದು. ಜನವರಿ ೧೭ರಿಂದ ೧೫೦೦ ಉಪನ್ಯಾಸಕರ ಹುದ್ದೆಗಳನ್ನು ತುಂಬಲು ನೋಟಿಫಿಕೇಷನ್ ಮಾಡಲಾಗಿದೆ. ಹಲವು ವರ್ಷಗಳಿಂದ ಅತಿಥಿಉಪನ್ಯಾಸಕರಾಗಿ ಕೆಲಸ ನಿರ್ವಹಿಸುವ ಜನರಿಗೆ ಅವರ ಸೇವಾವಧಿಯ ಆಧಾರದಲ್ಲಿ ವಿಶೇಷ ಅವಕಾಶಗಳನ್ನು ನೀಡಿ ಖಾಯಂಗೊಳಿಸಬೇಕು. ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವÀ ಬದಲು ಅವರ ಉದ್ಯೋಗವಂಚಿತರನ್ನಾಗಿ ಮಾಡುವ ಸರ್ಕಾರದ ಕ್ರಮಗಳು “ಸಂಕ್ರಾಂತಿ ಹಬ್ಬದ ಸಹಿ ಉಡುಗೊರೆಯಲ್ಲ.. ನವಉದಾರೀಕರಣದ ಶಾಪ” ಇದಾಗಿರುತ್ತದೆ. ರಾಜ್ಯ ಸರ್ಕಾರದ ಶಿಕ್ಷಕ ವಿರೋಧಿ-ಶಿಕ್ಷಣವಿರೋಧಿ ನೀತಿಯನ್ನು ಎಸ್ಎಫ್ಐ ಲಿಂಗಸ್ಗೂರು ತಾಲೂಕು ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಪಶ್ಚಿಮ ಬಂಗಾಳ, ತ್ರಿಪುರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿರುವ ಮಾದರಿಯಂತೆ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತ್ಯೇಕವಾದಂತಹ `ಸೇವಾ ಭದ್ರತೆಯ ನಿಯಮಾವಳಿ’ಗಳನ್ನು ರಚಿಸಿ ಸೇವಾ ಭದ್ರತೆ, ರಜೆಗಳು, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ಖಾಯಂ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತದೆ. ಸರ್ಕಾರದ ಈ ನಿರ್ಧಾರವನ್ನು ಒಪ್ಪದೇ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಟವನ್ನು ಮುಂದುವರೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟವನ್ನು ಅಭಿನಂದಿಸುತ್ತದೆ ಮತ್ತು ಬೆಂಬಲಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ಉದ್ಯೋಗದಿಂದ ಅತಿಥಿ ಉಪನ್ಯಾಸಕರನ್ನು ತೆಗೆಯುವುದನ್ನು ಹಾಗೂ ೧೭೦೦ ಖಾಯಂ ಹುದ್ದೆಗಳಿಗೆ ಕರೆದಿರುವ ನೋಟಿಫಿಕೇಷನನ್ನು ತಿದ್ದುಪಡಿಗೊಳಿಸಿ ಈ ಅತಿಥಿ ಉಪನ್ಯಾಸಕರ ಸೇವಾಖಾಯಮಾತಿಗೆ ಮೊದಲ ಆದ್ಯತೆ ಕೊಡಬೇಕೆಂದು ಒತ್ತಾಯಿಸುತ್ತದೆ.

ಹಕ್ಕೋತ್ತಾಯಗಳು:

ಬಳಸಿ ಬಿಸಾಡುವ ನೀತಿಯನ್ನು ಕೈಬಿಟ್ಟು ಸೇವಾ ನಿಯಮಾವಳಿಗಳನ್ನು ರಚಿಸಬೇಕು.

ಕಾಲೇಜು ಶಿಕ್ಷಣವನ್ನು ಬೋಧಿಸಲು ಖಾಯಂ ಉಪನ್ಯಾಸಕರು ಇಲ್ಲದ ಕೊರತೆಯನ್ನು ತುಂಬಿದ ಅತಿಥಿ ಉಪನ್ಯಾಸಕರನ್ನು ಹಂತ ಹಂತವಾಗಿ ಖಾಯಂ ಮಾಡಬೇಕು.

ಖಾಯಂ ಉಪನ್ಯಾಸಕರ ಹುದ್ದೆಗಳನ್ನು ಭರ್ತಿಮಾಡುವಾಗ ಗ್ರಾಮ ಪಂಚಾಯತಿ, ಅಂಗನವಾಡಿ ಮತ್ತು ಮುನಿಸಿಪಾಲಿಟಿಗಳಲ್ಲಿ ಆಧ್ಯತೆ ಕೊಟ್ಟ ಹಾಗೆ ಅತಿಥಿ ಉಪನ್ಯಾಸಕರಿಗೂ ಆಧ್ಯತೆ ಕೊಡಬೇಕು.

ಈಗಾಗಲೇ ಕೆಲಸ ಮಾಡುತ್ತಿರುವ ೧೪೫೩೮ ಅತಿಥಿ ಉಪನ್ಯಾಸಕರನ್ನು ಕೆಲಸದಲ್ಲಿ ಮುಂದುವರೆಸಿ ನಿಯಮಾವಳಿಗಳನ್ನು ರಚಿಸಬೇಕು.

ಯುಜಿಸಿ ಪ್ರಕಾರ ೪೦ ರಿಂದ ೬೦ ಮಕ್ಕಳಿಗೆ ಒಂದು ವಿಭಾಗ ಎಂದು ರಚಿಸಿ ಈಗಿರುವ ೧೪೫೩೮ ಅತಿಥಿ ಉಪನ್ಯಾಸಕರನ್ನು ಉಳಿಸಿಕೊಳ್ಳಬೇಕು.

೨೦೨೨ ಜನವರಿ ೧೮ ರಿಂದ ನಡೆದಿರುವ ಪೋರ್ಟಲ್‌ನಲ್ಲಿ ಮೊದಲ ಆಧ್ಯತೆಯಾಗಿ ಸೇವಾವಧಿ ಪರಿಗಣಿಸಿ ಈಗಿರುವ ೧೪೫೩೮ ಅತಿಥಿ ಉಪನ್ಯಾಸಕರನ್ನು ಮುಂದುವರೆಸಬೇಕು. ಶಾಸನಬದ್ಧ ಸೌಲಭ್ಯಗಳನ್ನು ಕೊಡಬೇಕು. ರಮೇಶ ವೀರಾಪೂರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *