(ಮದ್ಯ ಕುಡಿತಕ್ಕೆ ಸಮಾಜ ನಾಶ )
ಕುಡುಕರಿಂದ ಕೆಟ್ಟಿತು ಕಲಿಯುಗ
ಕುಡಿದು ಬೀಳುತ್ತಾರೆ ಚರಂಡಿ ಒಳಗ
ಇವರು ಕುಡಿದ ನಶೆಒಳಗ
ಹಾಡುತಾರೆ ಬಾಯಿಗೆ ಬಂದಂಗ
ದೊಡ್ಡ ದೊಡ್ಡವರು ಕುಡಿತಾರಿಗ
ದೊಡ್ಡತನ ಮಾಡುತ್ತಾರ ಊರೊಳಗ
ಹೆಚ್ಚು ಆಗ್ಯಾರ ಇಂಥವರಿಗ
ಕೆಟ್ಟುಹೋಯಿತು ಕಲಿಯುಗ
ಶಾಸ್ತ್ರ ಹೇಳುವರು ಕುಡಿತಾರಿಗ
ಪುರಾಣ ಓದುವರು ಸರಾಯಿಒಳಗ
ಭಜನೆ ಮಾಡುವರು ಕುಡುಕರಿಗ
ಲಿಂಗ ಬಿಟ್ಟು ಕೂಡುವರು ಕೋಳಿ ಊಟದೊಳಗ
ಸರಾಯಿ ಕುಡಿಯುವರು ಹುಡುಗರ ಬಳಗ
ಮೀಸೆ ಬಂದಿಲ್ಲ ಇವರ ಯಾರಿಗ
ಕಾಲೇಜಿಗೆ ಹೋಗುತ್ತಾರ ದಿನಬೆಳಗ
ಸರಾಯಿ ಕುಡಿದು ಬರುತ್ತಾರ ಊರೊಳಗ
ರಾಜಕೀಯ ಮಾಡುವರು ಸರಾಯದೊಳಗ
ಸರಾಯಿ ಇಲ್ಲದಿದ್ದರೆ ಬರುವುದಿಲ್ಲ ಪಂಚಾಯತಿ ಒಳಗ
ಬಿಲ್ಲು ಮಾಡುತ್ತಾರೆ ರೈತರ ಹೆಸರಿನ ಮ್ಯಾಗ
ಮೆಂಬರ್ ಮನೆಒಳಗ ತುಂಬುತ್ತಾರೆ ಒಳಗೊಳಗ
ಹೆಣ್ಣುಮಕ್ಕಳು ಕುಡಿತಾರೆ ಸರಾಯಿ ಈಗ
ಕದ್ದು ಮುಚ್ಚಿ ತರುವರು ಜಂಪರದೊಳಗ
ನಾರಿಯರ ಧರ್ಮ ಕೆಟ್ಟಿತು ಈಗ
ನಾರಿನಾಳ ದೇವರ ಮೇಲೆಇಲ್ಲ ಭಕ್ತಿ ಈಗ
ಮೌನೇಶ ಇಟಗಿ.. ತಾ.. ಕುಷ್ಟಗಿ. ಜಿಲ್ಲಾ ಕೊಪ್ಪಳ