ಅನಾಥ ಶವಗಳ ಒಡೆಯ ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ ಸಂಸ್ಥಾಪಕ ಕಿರಣ್ ಗೌಡ್ರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು ವರ್ಷಗಳಿಂದ ಅನಾಥ ಶವಗಳನ್ನು ದತ್ತು ಪಡೆದು ಅವುಗಳ ಅಂತ್ಯ ಕ್ರಿಯೆ ಯನ್ನು ಸಂಪ್ರದಾಯದಂತೆ ಅವರ ಸ್ವಂತ ಖರ್ಚಿನಲ್ಲಿ ಮಾಡುತ್ತಾ ಬಂದಿರುವುದು ಮಾನವ ಕುಲದ ಪ್ರತಿಯೊಬ್ಬರ ಮನ ಮುಟ್ಟುವಂತಿದೆ
ಆ ನಿಟ್ಟಿನಲ್ಲಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ ವತಿಯಿಂದ ಇಡಿ ಬೆಂಗಳೂರು ನಗರದಾದ್ಯಂಥ ಯಾವುದೇ ಮೂಲೆಯಿಂದ ಕರೆ ಬಂದರೆ ಸಾಕು ಟ್ರಸ್ಟ್ ನ ಎಲ್ಲ ಸದಸ್ಯರು ಸೇರಿ ಯಾರು ಇಲ್ಲದ ಅನಾಥ ಶವಗಳನ್ನು ವಿಧಿ ವಿಧಾನದಂತೆ ಅದರ ಅಂತ್ಯ ಕ್ರಿಯೆ ಯನ್ನು ಅಚ್ಚುಕಟ್ಟಾಗಿ ಮಾಡುವವಲ್ಲಿ ಯಶಸ್ವಿಯಾಗಿ ನಗರದ ಜನರ ಮನಸ್ಸಿನಲ್ಲಿ ಮನೆ ಮಾತಾಗಿ ಉಳಿದಿದ್ದಾರೆ
ಈ ಕ್ಷಣದಲ್ಲಿ ಕರೋನ ಎಂಬ ಮಹಾ ಮಾರಿ ರೋಗ ಬಂದವರನ್ನು ನೋಡಲು ಒಂದು ಕ್ಷಣ ಹಿಂಜರಿಯುವ ಈ ಸಮಯದಲ್ಲಿ ಕರೋನ ರೋಗ ಬಂದು ಮರಣ ಹೊಂದಿರುವವರನ್ನು ಕೂಡ
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಆಯುಕ್ತರನ್ನು ಸಂಪರ್ಕ ಮಾಡಿ
ಕಾನೂನಿನ ಚೌಕಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿಯಮದಂತೆ ಕರೋನ ರೋಗದ ದಿಂದ ಮರಣ ಹೊಂದಿರುವವರನ್ನು ಅಂತ್ಯ ಕ್ರಿಯೆ ಮಾಡುವದರ ಮುಖೇನ ಒಂದು ಹೆಜ್ಜೆ ಮುಂದೆ ಸಾಗಿ ಯಾವುದೇ ಅನಾಥ ಶವಗಳಿರಲಿ ನಾವು ಇರುವ ತನಕ ಅವು ಅನಾಥ ಶವಗಳು ಆಗುವದಕ್ಕೆ ನಾವು ಬಿಡುವುದಿಲ್ಲ
ಕೊನೆಯಲ್ಲಿ ನಮ್ಮ ಪತ್ರಿಕೆಯ ಜೋತೆ ಮಾತನಾಡಿ ಯಾರು ದಿಕ್ಕು ದಸೆ ಇಲ್ಲದೆ ಮರಣ ಹೊಂದಿರುವವರನ್ನು ನಾವು ಶವಗಳು ಎನ್ನುವುದಿಲ್ಲ ಅದರ ಬದಲಿಗೆ ತಿಮ್ಮಕ್ಕ ಮಡಿಲು ಸೇವಾ ಟ್ರಸ್ಟ್ ನ ಆಧರ ಸ್ತಂಭಗಳು ಎನ್ನುತ್ತೇವೆ ಎಂದು ಟ್ರಸ್ಟ್ ನ ಸಂಸ್ಥಾಪಕ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು.
ವರದಿ – ಅಮಾಜಪ್ಪ ಹೆಚ್. ಜುಮಾಲಾಪೂರ