I A S ಅಧಿಕಾರಿಯಾಗುವ ಗುರಿ P S I ಆದ ಹೂವು ಮಾರುವ ವ್ಯಾಪಾರಿ.
ರಾಜ್ಯದಲ್ಲಿ 520 ಜನ ಪಿ ಎಸ್ ಐ ಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ 17ನೇ ರಾಂಕ್ ಪಡೆದು ಕಲ್ಯಾಣ ಕರ್ನಾಟಕ ಭಾಗದ ಕುಕನೂರಿನ ಫರೀದಾ ಬೇಗಂ ಅವರು ಆಯ್ಕೆಯಾಗಿದ್ದಾರೆ. ಇವರು ಮೂಲತಹ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ನಿವಾಸಿಯಾಗಿದ್ದರು, ಫರೀದಾ ಬೇಗಂ ಅವರ ತಂದೆಗೆ ಒಟ್ಟು 12 ಜನ ಮಕ್ಕಳು ಇವರಲ್ಲಿ ಫರೀದಾ ಬೇಗಂ 9ನೇ ಯವರು ದಿ, ತಂದೆ ಮೌಲಾ ಹುಸೇನ್ ಪಟೇಲ್ ಅವರು ಈಗಷ್ಟೇ 7ತಿಂಗಳ ಹಿಂದೆ ಅನಾರೋಗ್ಯದಿಂದ ದಿವಂಗತರಾದರು ಇವರು 35ರಿಂದ 40 ವರ್ಷ ಹಣ್ಣು ಮತ್ತು ಹೂವಿನ ವ್ಯಾಪಾರ ಮಾಡುತ್ತಾ ಬಂದಿದ್ದಾರೆ, ನಂತರ ತಾಯಿ ಮಕ್ಕಳು ಸೇರಿ ಹಣ್ಣು ಹೂವಿನ ವ್ಯಾಪಾರ ಮಾಡುತ್ತಿದ್ದಾರೆ ಫರೀದಾ ಬೇಗಂ ಪ್ರೌಢಶಾಲೆಯ ಹಂತದಲ್ಲಿ ಹೂವಿನ ಬುಟ್ಟಿ ತೆಗೆದುಕೊಂಡು ಕುಕನೂರು ಇಟಗಿ ಮಂಡಲಗೇರಿ ಭಟಪ್ಪನಹಳ್ಳಿ ರಾಜೂರು ಅಡೂರು ಮಸಬಹಂಚಿನಾಳ ಹೀಗೆ ವಿವಿಧ ಗ್ರಾಮಗಳಿಗೆ ಬಸ್ನಲ್ಲಿ ಸಂಚರಿಸಿ ಮಾರಾಟ ಮಾಡಿಕೊಂಡು ಬರುತ್ತಿದ್ದರು ಶಾಲೆಯ ಬಿಡುವಿನ ವೇಳೆಯಲ್ಲಿ ತಮ್ಮ ಅಂಗಡಿಯಲ್ಲಿ ಹೂವಿನ ವ್ಯಾಪಾರ ಕೂಡ ಮಾಡುತ್ತಿದ್ದರು, ಶಿಕ್ಷಣ : ಫರೀದಾ ಬೇಗಂ ಅವರು ಕುಕನೂರ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 1-7ನೇ ತರಗತಿ ಮುಗಿಸಿ ವಿದ್ಯಾನಂದ ಗುರುಕುಲ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮತ್ತು ಕಲಾ ವಿಭಾಗದಲ್ಲಿ ಪಿಯು ಶಿಕ್ಷಣ ಪೂರೈಸಿದರು. ನಂತರ ಧಾರವಾಡದ ಅಂಜುಮನ್ ಕಾಲೇಜಿನಲ್ಲಿ ಬಿಬಿಎ ವಿಷಯದಲ್ಲಿ ಪದವಿ ಪೂರೈಸಿದ್ದಾರೆ, ಐ ಎ ಎಸ್ ಅಧಿಕಾರಿಯಾಗುವ ಗುರಿ ಕನಸು ಕಟ್ಟಿಕೊಂಡು ಪರಿದಾ ಬೇಗಂ ಹಗಲಿರುಳು ಎನ್ನದೇ ಪ್ರತಿದಿನ 8 ಗಂಟೆಗಳ ಕಾಲ ನಿರಂತರ ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಯಾರಿ ಮಾಡಿದ್ದಾರೆ, ಕಲ್ಯಾಣ ಕರ್ನಾಟಕ ಮೀಸಲಿನಲ್ಲಿ 17ನೇ ರಾಂಕ್ ಪಡೆದು, ಪಿ ಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದಾರೆ, ( ಕೋಟ ) ಮುಂದಿನ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ನೀವು ಓದುವುದನ್ನು ಎಂದಿಗೂ ನಿಂದಿಸಬೇಡಿ, ಸತತವಾಗಿ ಪ್ರಯತ್ನ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ, ಈ ಉನ್ನತ ಹುದ್ದೆಯನ್ನು ನೋಡಲು ನನ್ನ ತಂದೆ ಅವರಿಲ್ಲ ಆದರೆ ತಂದೆಯ ಆಸೆಯನ್ನು ಪೂರೈಸುತ್ತೇನೆ, ನನ್ನ ಸಾಧನೆ ಹಾದಿಯಲ್ಲಿ ನನ್ನ ಕುಟುಂಬದ ಪ್ರೋತ್ಸಾಹ ಸಾಕಷ್ಟು ಸಿಕ್ಕಿದೆ ಎಂದು ಹೇಳಿದರು, ಫರೀದಾ ಬೇಗಂ ಪಟೇಲ್ ನೂತನ ಪಿಎಸ್ಐ ಹುದ್ದೆಗೆ ಆಯ್ಕೆಯಾದ ಯುವತಿ..
ವರದಿ – ಹುಸೇನಬಾಷಾ ಮೊತೇಖಾನ್