ಯಲ್ಲಾಲಿಂಗೇಶ್ವರ ಪುಷ್ಪಾರೋಣ,ಜಿಲ್ಲಾ ಚುಟುಕು ಸಮ್ಮೇಳನಕ್ಕೆ ತೆರೆ.
ಚುಟುಕು ಸಂಸ್ಕೃತಿ ಬೆಳೆಸುತ್ತದೆ- ಡಾ.ಪೆರ್ಲ.ಬಸವಕಲ್ಯಾಣ: ಚುಟುಕು ಪಾಸ್ಟ ಪುಡ್ನಂತೆ ಸಿಗುತ್ತದೆ.ಮಾನವೀಯ ಮೌಲ್ಯಗಳ ಪ್ರತಿಪಾದನೆ ಮಾಡುತ್ತಿವೆ. ಹೀಗಾಗಿ ಸುಧೀರ್ಘ ಪರಂಪರೆ ಹೊಂದಿದಂತೆ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಬೆಳೆಸಬೇಕಾಗಿದೆ. ಚುಟುಕ ಅಧ್ಯಯನ ಮಾಡಬೇಕು, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಚುಟುಕು ಮಾದರಿ ಆ ಮೂಲಕ ನಮ್ಮ ಸಂಸ್ಕ್ರತಿ ಬೆಳೆಸಬೇಕಾಗಿದೆಯೆಂದು ಸಾಹಿತಿ ,ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ನುಡಿದರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಪ್ರಥಮ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಚುಟುಕು ಸಾಹಿತ್ಯ ಮನೆಯಲ್ಲಿ ಇಡಬೇಕೆಂದರು.ಪೂಜ್ಯ ಸದಾನಂದ ಅಪ್ಪಗಳು ಶಿವಲಿಂಗೇಶ್ವರ ಮಠ ಸಸ್ತಾಪೂರ,ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಉರಿ ಲಿಂಗ ಪೆದ್ದಿಮಠ,ಹೊಳಿ ಭಾಸ್ಕಿಯ ಪೂಜ್ಯ ಹಣಮಂತ ಮಹಾರಾಜರು,ಪೂಜ್ಯಮಹಾದೇವಿ ತಾಯಿ ಶರಣೆ ಸಾನಿಧ್ಯ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ,ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ,ವಿಕಾಸ್ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣ್ಣಸಿದ್ಧಪ್ಪಾ ಜಲಾದೆ, ಪುರಸಭೆ ಅಧ್ಯಕ್ಷೆ ಕಸ್ತೂರಾಬಾಯಿ ಪರಸನೂರ,ರಾಜಮತಿ ಕೊರಾಳೆ,ಎಂ.ಜಿ.ದೇಶ ಪಾಂಡೆ,ಡಾ.ಜಯದೇವಿ ಗಾಯಕವಾಡ ಸಿದ್ರಾಮಪ್ಪ ಗುದಗೆ, ಕಚುಸಾಪ ಜಿಲ್ಲಾಧ್ಯಕ್ಷ ಸಂಗಮೇಶ ಜವಾದಿ ವೇದಿಕೆಯಲ್ಲಿದರು. ಯಲ್ಲಾಲಿಂಗ ಪ್ರಶಸ್ತಿ ಪುರಸ್ಕೃತರಾದ: ಡಾ.ಶರಣಬಸಪ್ಪ ವಡ್ಡನಕೇರಿ,ಮಾಣಿಕ ಭುರೆ,ಮಲ್ಲಿಕಾರ್ಜುನ ಪಾಲಾಮೂರ,ಭೀಮಸೇನ ಗಾಯಕವಾಡ,ಅರವಿಂದ ಕುಲಕರ್ಣಿ,ಸಂತೋಷ ಕುಮಾರ ಕರಹರಿ,ಜ್ಯೋತಿ ಬಿರಾದಾರ ಕಲ್ಯಾಣ ರತ್ನ ಪ್ರಶಸ್ತಿ ಪುರಸ್ಕೃತ: ರೇವಣಸಿದ್ಧಪ್ಪಾ ಜಲಾದೆ,ಗುರುಲಿಂಗಪ್ಪ ಮೇಲ್ದೊ ಡೆ,ಸಂಜುಕುಮಾರ ಗಾರಂಪಳ್ಳಿ,ದಿನೇಶ ಮೈಲನ ಹಳ್ಳಿ,ರಾಜಕುಮಾರ ಟಿ.,ಉತ್ತಮ ದೊಡ್ಡಮನಿ. ಸೇವಾರತ್ನ ಪುರಸ್ಕೃತರಾದ: ಜೀವನ ಜೈವಂತ,ಸು ರೇಶ ಕೊರವಿ, ಗುಂಡಯ್ಯ ತೀರ್ಥ,ಸತೀಶ ನೆನ್ನೂರ,ಕೆ.ಪ್ರಭಾಕರ,ಸಿದ್ಧಲಿಂಗ ಕೊನೇಕ್ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಚುಟುಕು ಸಾಹಿತಿ ಡಾ. ಉಮೇಶ ಬಾಬು ಮಠದ ಮಾತನಾಡಿ ನಮ್ಮ ಚುಟುಕು ಬದುಕಿನ ಅವಿಭಾಜ್ಯ ಅಂಗವಾಗಿವೆ.ನಾವು ಅವುಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಬೇಕು.ಸರಕಾರ,ಪರಿಷತ್ತು,ಅಕಾಡೆಮಿಗಳು ಇತ್ತ ಗಮನ ಹರಿಸಲು ಸೂಚಿಸಿದರು. ಸ್ವಾಗತವನ್ನು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ,ಡಾ.ವಿಜಯಕುಮಾರ ಮತ್ತು ಡಾ.ಸಂಜೀವಕುಮಾರ ನಿರೂಪಿಸಿದರು. ಕಚುಸಾಪ ಜಿಲ್ಲಾಧ್ಯಕ್ಷ ಸಂಗಮೇಶ ಜವಾದಿ ವಂದಿಸಿದರು.
ವರದಿ – ಸಂಗಮೇಶ ಎನ್ ಜವಾದಿ.