ತಾವರಗೇರಾ ಪಟ್ಟಣ ಬಂದ ಮುಂದುಡಿಕೆ ಸರಣಿ ಉಪವಾಸ ಸತ್ಯಗ್ರಾಹಕ್ಕೆ ಮುಂದಾದ ಸಂವಿಧಾನ ಹಿತ ರಕ್ಷಣಾ ಸಮಿತಿ.
ತಾವರಗೇರಾ ಪಟ್ಟಣ ಬಂದ ಮುಂದುಡಿಕೆ ಸರಣಿ ಉಪವಾಸ ಸತ್ಯಗ್ರಾಹಕ್ಕೆ ಮುಂದಾದ ಸಂವಿಧಾನ ಹಿತ ರಕ್ಷಣಾ ಸಮಿತಿ. ತಾವರಗೇರಾ ಪಟ್ಟಣದ ಸಂವಿಧಾನ ಹಿತ ರಕ್ಷಣಾ ಸಮೀತಿವತಿಯಿಂದ ತಾವರಗೇರಾ ಬಂದ ಕರೆ ಹಲವು ಕಾರಣಗಳಿಂದ ಮಾಡಲಾಗಿದ್ದು. ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ದೂರು ಕೋರಿ. ದಿನಾಂಕ 26-01-20 22 ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ,(ಲಿಂಗಾಯತ ಗೌಡ) ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಇವರು ನ್ಯಾಯದೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ. ಇದು ರಾಯಚೂರ್ ಜಡ್ಜ್ ರ ದೇಶ ದ್ರೋಹ ಕೃತ್ಯ. ಈ ಕೂಡಲೇ ರಾಷ್ಟ್ರದ್ರೋಹ ಪ್ರಕರಣವನ್ನ ದಾಖಲೀಸಬೇಕು. ಉಚ್ಚನ್ಯಾಯಾಲಯವೂ ಸ್ವಯಂಪ್ರೇರಿತವಾಗಿ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂವಿಧಾನ ಹಿತ ರಕ್ಷಣಾ ಸಮಿತಿವತಿಯಿಂದ ಶನಿವಾರದಿನದೊಂದ ಹಮ್ಮಿಕೊಂಡ ತಾವರಗೇರಾ ಬಂದ್ ಕರೆಗೆ ಮಾನ್ಯ ಸಿ.ಪಿ.ಐ ಸಾಹೇಬರಾದ ನಿಂಗಪ್ಪ ಎಸ್.ಆರ್ ಕುಷ್ಟಗಿ ಹಾಗೂ ಪಟ್ಟಣದ ಪಿ.ಎಸ್.ಐ ಗಳಾದ ಶ್ರೀಮತಿ ವೈಶಾಲಿ ಝಳಕಿಯವರ ನೇತೃತ್ವದಲ್ಲಿ ಸಂವಿಧಾನ ಹಿತ ರಕ್ಷಣಾ ಸಮೀತಿಯವರೊಂದಿಗೆ ಸಭೆ ಕಾರ್ಯಕ್ರಮವು ಜರುಗಿತು. ಈ ಸಭೆಯಲ್ಲಿ ವಾದ/ವಿವಾದಗಳಾದ ನಂತರ ಒಂದು ತೀರ್ಮಾನ ಕೈಗೊಳಲು ಮನವಿ ಮಾಡಿ ಈ ಸಭೆ ಹಂತ್ಯಗೊಳಿಸಿದರು. ಆದರೆ ಇಂದು ಸಂವಿಧಾನ ಹಿತ ರಕ್ಷಣಾ ಸಮೀತಿಯು ತಾವರಗೇರಾ ಇವರು ಕೈಗೊಂಡ ಹಂತೀಮ ತೀರ್ಮಾನ ನಾಳೆ ಅಂದರೆ ಶನಿವಾರ ಬೆಳಗ್ಗೆ 09 ಘಂಟೆ ಸುಮಾರಿಗೆ ಶ್ರೀ ಡಾ॥ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸರಣಿ ಉಪವಾಸ ಸತ್ಯಗ್ರಾಹ ಹಮ್ಮಿಕೊಳ್ಳಲು ತೀರ್ಮಾನ ಕೈಗೊಂಡಿದ್ದು. ಸುಮಾರು 5 ರಿಂದ 6 ಜನರು ಈ ಉಪವಾಸ ಸತ್ಯಗ್ರಾಹದಲ್ಲಿ ಪಾಲುಗೊಳ್ಳುವ ಸಾದ್ಯತೆಗಳಿವೆ. ನಮ್ಮ ಬೇಡಿಕೆ ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ದೂರು ದಾಖಲಾಗುವತನಕ ನಿರಂತರ ಉಪವಾಸ ಸತ್ಯಗ್ರಾಹ ಧರಣಿ ಹಮ್ಮಿಕೊಳ್ಳಲಾಗುವುದು, ಆದ್ದರಿಂದ ತಾವರಗೇರಾ ಪಟ್ಟಣದ ಸಾರ್ವಜನಿಕರು ಸ್ವಯಂ ಪೇರಿತರಾಗಿ ಈ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ವರದಿ – ಸಂಪಾದಕೀಯ