ಜುಮಲಾಪೂರ ಪ್ರೌಢ ಶಾಲೆಯ ಮಕ್ಕಳ ಅಂಗೈಯಲ್ಲಿ ಅರಳಿದ, ಮೆಹಂದಿ, ಹಾಗೂ ರಂಗೋಲಿ ವಿಜ್ಞಾನ ಚಿತ್ರಗಳು….
ತಾವರಗೇರ ಹೋಬಳಿಯ ಜುಮಲಾಪೂರ ಗ್ರಾಮದ ಪ್ರೌಡ ಶಾಲೆಯಲ್ಲಿ ವಿಭಿನ್ನವಾಗಿ ಬಾಲಕಿಯರ ಅಂಗೈಯಲ್ಲಿ ಮೆಹಂದಿ ಹಾಕಿವಿಜ್ಞಾನ ಚಿತ್ರಗಳನ್ನು ಬಿಡಿಸಿ ಮಾದರಿಯಾಗಿದ್ದಾರೆ. ವಿಜ್ಞಾನದ ಅನುಗುಣವಾಗಿ ಹಲವಾರು ಚಿತ್ರಗಳನ್ನು ರಂಗೋಲಿ ಬಿಡಿಸುವ ಮೂಖಾಂತರ ವಿಧ್ಯಾರ್ಥಿಗಳ ಕಲಿಕೆಗೆ ಹಾಗೂ ಕಲಿಕೆ ವಿಷಯ ಮಕ್ಕಳ ಮನದಲ್ಲಿ ಉಳಿಯುವ ಸಲುವಾಗಿ. ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕರು ಆಯೋಜನೆ ಮಾಡಿ ಪ್ಲಾನ್- 75 ರ ಅಡಿಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಗಳಿಗಾಗಿ ವಿಜ್ಞಾನ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. 08 ತಂಡಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿಜ್ಞಾನ ಚಿತ್ರಗಳ ರಂಗೋಲಿ ಚಿತ್ರ ಬಿಡಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿತರಿಸಲಾಯಿತು… ಮುಖ್ಯ ಗುರುಗಳಾದ ಶ್ರೀ ಸೋಮನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಶಶಿಧರ್ ಗೊರೆಬಾಳ ಮಾರ್ಗದರ್ಶನ ನೀಡಿದ್ದರು. ವಿದ್ಯರ್ಥಿಗಳಾದ ಸುಕನ್ಯಾ ರಾಜೇಶ್ವರಿ ಶಶಿಕಲಾ ನಿಂಗಮ್ಮ ಅಮರೇಶ್ ಸುರೇಶ ಮಲ್ಲಿಕಾ ಸೇರಿ ಎಲ್ಲರೂ ಭಾಗವಹಿಸಿದ್ದರು. ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ – ಸಂಪಾದಕೀಯ