ಯುವ ಪರಿವರ್ತಕರ ತರಬೇತಿಗಾಗಿ ಅರ್ಜಿ ಆಹ್ವಾನ…..

Spread the love

ಯುವ ಪರಿವರ್ತಕರ ತರಬೇತಿಗಾಗಿ ಅರ್ಜಿ ಆಹ್ವಾನ…..

 ಜನ ಆರೋಗ್ಯ ಸಂಸ್ಥೆ ಎಪಿಡೀಮಿಯಾಲಜಿ ವಿಭಾಗ ನಿಮಾನ್ಸ್ ಬೆಂಗಳೂರು ಇವರಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ಯುವ ಜನ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆಯಡಿಯಲ್ಲಿ 2 ( ಇಬ್ಬರು ) ಯುವ ಪರಿವರ್ತಕ ರ ತರಬೇತಿಗಾಗಿ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ, ಅಭ್ಯರ್ಥಿಗಳು ಯಾವುದೇ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು ವಯಸ್ಸು 21 ರಿಂದ 35 ವರ್ಷದೊಳಗಿನ ವರಾಗಿರಬೇಕು, ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅತ್ಯವಶ್ಯಕ ವಾಗಿರುತ್ತದೆ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಅನುಭವ ಹೊಂದಿರುವವರಿಗೆ ಮತ್ತು ಉತ್ತಮ ಅಂತರ್ ವ್ಯಕ್ತಿ ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು ಈ ಸಮುದಾಯದಲ್ಲಿ ಯುವಜನರಿಗೆ ತರಬೇತಿ ಅಂತಹ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯಕವಾಗಿರುತ್ತದೆ, ಕೊಪ್ಪಳ ಜಿಲ್ಲೆಯಲ್ಲಿ ವಾಸಿಸುತ್ತಿರುವ ಕಾಯಂ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ, ಯಲಬುರ್ಗಾ ತಾಲೂಕ ಕುಷ್ಟಗಿ ತಾಲೂಕ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು, ಭಾರ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಸ್ವ-ವಿವರದೊಂದಿಗೆ ಕುದ್ದಾಗಿ ಫೆಬ್ರುವರಿ 11 ರಂದು ಸಂಜೆ 5 ಗಂಟೆ ಒಳಗಾಗಿ ಸಹಾಯಕ ನಿರ್ದೇಶಕರ ಕಚೇರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಅರ್ಜಿ ಸಲ್ಲಿಸಬೇಕು, ಫೆಬ್ರುವರಿ 14 ಹಾಗೂ 15ರಂದು 11.00 ಗಂಟೆಯಿಂದ ನೇರ ಸಂದರ್ಶನಕ್ಕೆ ಹಾಜರಾಗಬೇಕು ಹೆಚ್ಚಿನ ವಿವರಗಳಿಗೆ ಈ ಕಚೇರಿಯ ಮೊ, 9483748499-96635945555 ಅಥವಾ ಯುವಸ್ಪಂದನ ಕಚೇರಿಯ ಇ-ಮೇಲ್ –yuvaspandana. Koppal@gmail.com ಮೂಲಕ ಸಂಪರ್ಕಿಸಬಹುದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯ ಮೂಲಕ ಮಾಹಿತಿ ತಿಳಿಸಿದ್ದಾರೆ. 

ವರದಿ – ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *