ಸಮಾಜದ ಸಾಮರಸ್ಯ ಕಾಪಾಡಲು ಸಾಹಿತಿಗಳು ಮುಖ್ಯ-ಕೆ.ಶ್ರೀಧರ
ಮೊಹಾಲಿ ಪ್ರಕಾಶನ ಮದ್ದೂರು ವತಿಯಿಂದ ಶ್ರೀಮತಿ ರಜಿಯಾ.ಕೆ. ಭಾವಿಕಟ್ಟಿರವರ ಚೊಚ್ಚಲ ಪುಸ್ತಕ ಅಂಕುರ(ಕವನ ಸಂಕಲನ) ದಿನಾಂಕ 6/02/2022 ರಂದು ಕುಷ್ಟಗಿಯ ಬಸವ ಭವನದಲ್ಲಿ ಲೋಕಾರ್ಪಣೆಗೊಂಡಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಸಾಹಿತಿ ಕೆ.ಶ್ರೀಧರ್ (ಕೆ.ಸಿರಿ) ಸಾಹಿತ್ಯ ಜ್ಞಾನದ ಜೊತೆಗೆ ನೆಮ್ಮದಿಯನ್ನು ನೀಡುತ್ತದೆ. ಭಾರತ ದೇಶಕ್ಕೆ ಕರ್ನಾಟಕದ ಜಾನಪದ ಸಾಹಿತ್ಯ, ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಕೊಟ್ಟ ಕೊಡುಗೆ ಅಪಾರ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತದ ಸಂವಿಧಾನವನ್ನೇ ಧರ್ಮಗ್ರಂಥವಾಗಿ ಜನರು ಸ್ವೀಕರಿಸಬೇಕು ಭಾರತದ ಸಂವಿಧಾನದ ಪೀಠಿಕೆ ಯಂತೆ ಸಾಮರಸ್ಯದಿಂದ ಬದುಕಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ಇದೇ ಸಂಧರ್ಭದಲ್ಲಿ ಪುಸ್ತಕದ ಲೇಖಕರಾದ ಶ್ರೀಮತಿ ರಜಿಯಾ ಕೆ.ಭಾವಿಕಟ್ಟೆ ರವರು ಸನ್ಮಾನಿಸಿದರು, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶೇಖರ್ ಗೌಡ ಮಾಲಿಪಾಟೀಲ್, ಹಾಲಿ ಕಸಾಪ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ವೈ.ಜೆ ಮಹಿಬೂಬ್ , ಕಲ್ಲೇಶ್ ನಂದಕಲಾ ಇತ್ಯಾದಿ ಗಣ್ಯರು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ