ತಾವರಗೇರಾ ಪಟ್ಟಣದಲ್ಲಿಂದು ಸಂವಿಧಾನ ಹಿತಾ ರಕ್ಷಣಾ ಸಮಿತಿ ಐವರಿಂದ ಉಪವಾಸ ಸತ್ಯಗ್ರಾಹ 3ನೇ ದಿನಕ್ಕೆ.
ತಾವರಗೇರಾ ಪಟ್ಟಣದ ಸಂವಿಧಾನ ಹಿತ ರಕ್ಷಣಾ ಸಮೀತಿವತಿಯಿಂದ ತಾವರಗೇರಾ ಬಂದ ಕಾರ್ಯಕ್ರಮ ಮುಂದುಡಿಸಿ ಇಂದು ಡಾ॥ಬಿ.ಆರ್. ಅಬೇಡ್ಕರ್ ವೃತ್ತದಲ್ಲಿ ಸರಣಿ ಉಪವಾಸ ಸತ್ಯಗ್ರಾಹ ಐವರಿಂದ ಪ್ರಾರಂಭಿಸಿದರು. ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ದೂರು ಕೋರಿ. ದಿನಾಂಕ 26-01-20 22 ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ–ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ, ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಇವರು ನ್ಯಾಯದೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ. ಇದು ರಾಯಚೂರ್ ಜಡ್ಜ್ ರ ದೇಶ ದ್ರೋಹ ಕೃತ್ಯ. ಈ ಕೂಡಲೇ ರಾಷ್ಟ್ರದ್ರೋಹ ಪ್ರಕರಣವನ್ನ ದಾಖಲೀಸಬೇಕು. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂವಿಧಾನ ಹಿತ ರಕ್ಷಣಾ ಸಮಿತಿವತಿಯಿಂದ ಮೊದಲನೇ ದಿನದೊಂದು ತಾವರಗೇರಾ ಪಟ್ಟಣದ ವಿವಿದ ಕಡೆ ಸಾಮಾಜಕ್ಕೆ ಕೊಡುಗೆ ನೀಡಿದ ಮಹನಿಯರ (ವೃತ್ತಾ) ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡಿ. ಶ್ರೀ ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಅಂಬೇಡ್ಕರ್ ಹಾಗೂ ಮಹತ್ಮಾ ಗಾಂಧಿಜಿಯವರ ಮೂರ್ತಿಗೆ ಮಾಲರ್ಪಣೆ ಮಾಡಿ ಐವರಿಂದ ಉಪವಾಸ ಸತ್ಯಗ್ರಾಹ ಹಮ್ಮಿಕೊಂಡರು 1) ಹೇಮರಾಜ್ ವೀರಾಪೂರು, ರಾಜಾನಾಯಕ, ಗೌತಮ್ ಬಂಡಾರಿ, ಸಂಜೀವು ಚಲುವಾದಿ, ಶಂಕ್ರಪ್ಪ ಜುಮಾಲಾಪೂರ, ಇವರು ಉಪವಾಸ ಸತ್ಯಗ್ರಾಹ ಹಮ್ಮಿಕೊಂಡು ಪ್ರಭಲವಾದ ಬೇಡಿಕೆಯನ್ನು ಮುಂದಿಟ್ಟುಕೊಂಡ ವಿಷಯ ಶ್ರೀ ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ಕೂಡಲೆ ದೂರು ದಾಖಲಾಗುಬೇಕು. ಇಲ್ಲದಿದ್ದರೆ ನಿರಂತರ ಉಪವಾಸ ಸತ್ಯಗ್ರಾಹ ಧರಣಿ ಹಮ್ಮಿಕೊಳ್ಳುತ್ತೆವೆ ಎಂದು ಹೇಳಿಕೆ ನೀಡಿದರು. ನ್ಯಾಯಧೀಶರ ವಿರುದ್ದ ಹಲವು ಘೋಷಣೆ ಕೂಗಿದರು, ಜೊತೆಗೆ ಹೋರಾಟದ ಗೀತೆಗಳನ್ನ ಹಾಡುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಈ ಹೋರಾಟಕ್ಕೆ ತಾವರಗೇರಾ ಪಟ್ಟಣದ ಹಿರಿಯ ನಾಯಕರು ಹಾಗೂ ಬುದ್ದಿ ಜೀವಿಗಳು ಜೊತೆಗೆ ಸಾರ್ವಜನಿಕರು ಸಹ ಬೆಂಬಲ ನೀಡಿದರು. ಈ ಉಪವಾಸ ಸತ್ಯಗ್ರಾಹ ಇಂದು 3ನೇ ದಿನಕ್ಕೆ ಕಾಲಿಟ್ಟಿದ್ದು, ಈ ಉಪವಾಸ ಸತ್ಯಗ್ರಾಹದಲ್ಲಿ ಪುನಃಹ ಐವರು ಪಾಲುಗೊಂಡಿದ್ದು ಇರುತ್ತದೆ, ಹೇಮರಾಜ ವೀರಾಪುರ, ಸಂಜೀವು ಚಲುವಾದಿ, ಗೌತಮ್ ಬಂಡಾರಿ, ಶಂಕ್ರಪ್ಪ ಜುಮಲಾಪುರ, ವಿಜೇಯಕುಮಾರ ಇಂದು ಹೊಸದಾಗಿ ಈ ಹೋರಾಟಗಾರರಿಗೆ ಸಾತ್ ನೀಡುವುದರ ಜೊತೆಗೆ ಉಪವಾಸ ಸತ್ಯಗ್ರಾಹದಲ್ಲಿ ಪಾಲುಗೊಂಡಿರುವುದು ವಿಶೇಷವಾಗಿದೆ. ಆರ್.ಕೆ.ದೇಸಾಯಿ, ಹೆಚ್,ಎನ್,ಬಡಿಗೇರ್, ನಜೀರಸಾಬ ಮೂಲಿಮನಿ, ಚಂದಲಿಂಗ್ ಕಲಾಲ್ ಬಂಡಿ ದುರಗೇಶ ನವಲಹಳ್ಳಿ ಹಾಗೂ ವೀರಭದ್ರಪ್ಪ ಮಾಜಿ ಅಧ್ಯಕ್ಷರು, ಮಾಂತಮ್ಮ ಪಾಟೀಲ್ ರವರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದವರಿಗೆ ಹಾಗೂ ಹೋರಾಟಕ್ಕೆ ಮುಂದಾದವರಿಗೆ ದೈರ್ಯ ತುಂಬುವ ಮೂಲಕ ಶಕ್ತಿ ನೀಡಿದರು. ಸಂಬಂದಪಟ್ಟ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಈ ಹೋರಾಟವು ಮುಂದಿನ ದಿನಮಾನಗಳಲ್ಲಿ ಹಿಗೇ ಉಪವಾಸ ಸಂತ್ಯಗ್ರಾಹ ಮುಂದುವರೆಯುತ್ತದೆ ಎಂದು ತಾವರಗೇರಾ ಪಟ್ಟಣದ ಸಂವಿಧಾನ ಹಿತಾ ರಕ್ಷಣಾ ಸಮೀತಿಯು ಸಂಬಂದಪಟ್ಟ ಅಧಿಕಾರಿಗಳಿಗೆ ಎಚ್ಚರ ನೀಡಿದರು.
ವರದಿ – ಸಂಪಾದಕೀಯ