ಮಾನ್ಯ ಡಿ.ವಾಯ್.ಎಸ್.ಪಿ. ಹಾಗೂ ಸಿ.ಪಿ.ಐ ಜೊತೆಗೆ ತಹಶೀಲ್ದಾರ ನೇತೃತ್ವದಲ್ಲಿ 5ನೇ ದಿನದ ಉಪವಾಸ ಸತ್ಯಾಗ್ರಹ ಹಿಂದಕ್ಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಈ ಮನವಿಗೆ ಜಗ್ಗದ ಸಂವಿಧಾನ ಹಿತಾ ರಕ್ಷಣಾ ಸಮಿತಿ.

Spread the love

ಮಾನ್ಯ ಡಿ.ವಾಯ್.ಎಸ್.ಪಿ. ಹಾಗೂ ಸಿ.ಪಿ. ಜೊತೆಗೆ ತಹಶೀಲ್ದಾರ ನೇತೃತ್ವದಲ್ಲಿ 5ನೇ ದಿನದ ಉಪವಾಸ ಸತ್ಯಾಗ್ರಹ ಹಿಂದಕ್ಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಮನವಿಗೆ ಜಗ್ಗದ ಸಂವಿಧಾನ ಹಿತಾ ರಕ್ಷಣಾ ಸಮಿತಿ.

ತಾವರಗೇರಾ ಪಟ್ಟಣದಲ್ಲಿಂದು 5ನೇ ದಿನಕ್ಕೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು. ಈ ಹೋರಾಟವು ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚುತ್ತಿದ್ದು. ಈ ಹೋರಾಟದ ತೀವ್ರತೆಯಿಂದ ಇಂದು ಸಂಜೆ ಮಾನ್ಯ ಡಿ.ವಾಯ್.ಎಸ್.ಪಿ. ಹಾಗೂ ಸಿ.ಪಿ.ಐ ಜೊತೆಗೆ ತಹಶಿಲ್ದಾರರ ತಂಡದೊಂದಿಗೆ ಈ ಹೋರಾಟದಲ್ಲಿ ಪಾಲುಗೊಂಡು ಹೋರಾಟಗಾರರಲ್ಲಿ ಈ ಹೋರಾಟವನ್ನು ತಾವು ಹಿಂದಕ್ಕೆ ತೆಗೇದುಕೊಳ್ಳಿ. ನಾವು ತಮ್ಮ ಮನವಿಯನ್ನು ಸ್ವೀಕರಿಸುತ್ತೆವೆ. ತಹಶೀಲ್ದಾರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೆವೆ ಎಂದರು. ಇದರ ಕುರಿತಾಗಿ ದಲಿತ ಹಿರಿಯ ಮುಖಂಡರಾದ ಆನಂದ ಬಂಡಾರಿಯವರು ನಮ್ಮ ಸಮಿತಿಯಿಂದ ನ್ಯಾಯಧೀಶರ ವಿರುದ್ದ ದೂರು ನೀಡುತ್ತೇವೆ. ತಾವುಗಳು ನಮಗೆ ಹಿಂಬರಹ ನೀಡಬೇಕು. ಇಲ್ಲದಿದ್ದರೆ ನಮ್ಮ ಈ ಹೋರಾಟ ಹೀಗೆ ಮುಂದುವರೆಯೂತ್ತದೆ ಎಂದು ತಮಗೆ ಆದ ನೋವಿನ ಅಳಲನ್ನ ಆಕ್ರೋಶದ ಮೂಲಕ ವ್ಯಕ್ತಪಡಿಸಿದರು. ಇದರ ಜೊತೆ ಜೊತೆಗೆ ಇನ್ನೂಳಿದ ಮುಖಂಡರ ಜೊತೆ ಚರ್ಚೆಯು ನಡೆಯಿತು. ಇನ್ನೂ ನಾಲ್ಕು ದಿನ ನಮಗೆ ಅವಕಾಶ ನೀಡಿ ನಮ್ಮೆಲ್ಲರ ಸಮಾಜದ ಹಿರಿಯ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೆವೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಕೊನೆಗೂ ಈ ಹೋರಾಟಗಾರರಲ್ಲಿ ಹಲವು ರೀತಿಯಲ್ಲಿ ಫೊಲೀಸ್ ಇಲಾಖೆ ಜೊತೆಗೆ ತಹಶಿಲ್ದಾರರ ಮನವಿಗೂ ಜಗ್ಗದೆ ಈ ಹೋರಾಟ ಮುಂದುವರೆಯುವುದು ಎಂದು ಪಟ್ಟು ಹಿಡಿದರು. ಯಾವುದಕ್ಕೂ ಹಿಗ್ಗದೆ/ಕುಗ್ಗದೆ ನ್ಯಾಯ ಬದ್ದವಾಗಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಮಗೆ ನ್ಯಾಯ ಸಿಗುವವರೇಗೂ ನಾವು ಈ ಹೋರಾಟ ಮುಂದುವರೆಸುತ್ತೆವೆ ಎಂದು ಸಂವಿಧಾನ ಹಿತಾ ರಕ್ಷಣಾ ಸಮಿತಿ ತೀರ್ಮಾನ ಕೈಗೊಂಡರು. ಈ ನಮ್ಮ ಹೋರಾಟಕ್ಕೆ  ತಾವರಗೇರಾ ಹಾಗೂ ತಾವರಗೇರಾ ಹೋಬಳಿಯ ಜನರು ಸಹಕರಿಸುತ್ತಾದ್ದಾರೆ. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತರು ಈ ಹೋರಾಟಕ್ಕೆ ಬೆಂಬಲ ನೀಡುವುದರ ಜೊತೆಗೆ ತನು/ಮನ/ಧನ ಸಹಾಯ ನೀಡಿದರು. ಎಲ್ಲಾರೀಗೂ ಲಾಲ್ ಸಲಾಂ ಹೇಳುತ್ತ ಈ ಹೋರಾಟದ ಕಾರ್ಯಕ್ರಮವು ಮುಂದುವರೆಯಿತು.

ವರದಿಸಂಪಾದಕೀಯ

Leave a Reply

Your email address will not be published. Required fields are marked *