6ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿಂದು ಶ್ರೀ ಗಾಳೇಮ್ಮ ಮಹಿಳಾ ಸ್ವಸಹಾರ ಸಂಘದವರಿಂದ ಬೆಂಬಲ…
6ನೇ ದಿನಕ್ಕೆ ಮುಂದುಡಿದ ಸಂವಿಧಾನ ಹಿತಾ ರಕ್ಷಣಾ ಸಮಿತಿ ಬೆಂಬಲಕ್ಕೆ ಶ್ರೀ ಗಾಳೆಮ್ಮ ಮಹಿಳಾ ಸ್ವಸಹಾಯ ಸಂಘ. ನಮ್ಮ ಸಂವಿಧಾನ ಹಿತಾ ರಕ್ಷಣಾ ಸಮಿತಿವತಿಯಿಂದ ನಮಗೆ ಬೆಂಬಲ ನೀಡಿದ ಇವರುಗಳಿಗೆ ಅಭಿನಂದನೆಗಳು ಸಲ್ಲಿಸಿದರ..
ತಾವರಗೇರಾ ಪಟ್ಟಣದಲ್ಲಿಂದು 6ನೇ ದಿನಕ್ಕೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು. ಈ ಹೋರಾಟವು ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚುತ್ತಿದ್ದು. ಈ ಹೋರಾಟದ ತೀವ್ರತೆಯಿಂದ ಇಂದು ಪಟ್ಟಣದ 16ನೇ ವಾರ್ಡಿನ ಶ್ರೀ ಗಾಳೇಮ್ಮ ಮಹಿಳಾ ಸ್ವಸಹಾಯ ಸಂಘದವತಿಯಿಂದ ಬೆಂಬಲ ನೀಡಿದರು. ಇಂದು ಇಬ್ಬರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, 1) ಶ್ರೀ ಲಕ್ಷ್ಮಣ ಮುಖಿಯಾಜಿ 2) ರಾಜಾನಾಯಕರವು. ಯಾವುದಕ್ಕೂ ಹಿಗ್ಗದೆ/ಕುಗ್ಗದೆ ನ್ಯಾಯ ಬದ್ದವಾಗಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಮಗೆ ನ್ಯಾಯ ಸಿಗುವವರೇಗೂ ನಾವು ಈ ಹೋರಾಟ ಮುಂದುವರೆಸುತ್ತೆವೆ ಎಂದು ಸಂವಿಧಾನ ಹಿತಾ ರಕ್ಷಣಾ ಸಮಿತಿಯು ಶಪತ ಮಾಡಿತು. ಈ ಹೋರಾಟಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಲಾಲ್ ಸಲಾಂ ಹೇಳುತ್ತ ಈ ಹೋರಾಟದ ಕಾರ್ಯಕ್ರಮವು ಮುಂದುವರೆಯಿತು.
ವರದಿ – ಸಂಪಾದಕೀಯ