ಪಿಂಜಾರ್ ನಧಾಫ್ ಸಮಾಜದ ಒಳಿಗಾಗಿ ಸರಕಾರ ಪ್ರತ್ಯೇಕ ನಿಗಮ ಮಂಡಳಿ ನೀಡುವಂತೆ ಪಿಂಜಾರ್ ಸಮಾಜದಿಂದ ಸರಕಾರಕ್ಕೆ ಆಗ್ರಹ.
ಕುಷ್ಟಗಿ:- ಕರ್ನಾಟಕ ರಾಜ್ಯದಲ್ಲಿ ಪಿಂಜಾರ ನಧಾಫ್ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಾಗೂ ಬಹಳ ಬಡತನದಿಂದ ಬಳುಲುತ್ತಿದ್ದು ಸರಕಾರ ಈ ಕೂಡಲೇ ಪಿಂಜಾರ್ ನಧಾಫ್ ಸಮಾಜದ ಒಳಿತಿಗಾಗಿ ನಿಗಮ ಮಂಡಳಿ ಸ್ಥಾಪಿಸಿಸಬೇಕು ಎಂದು ಕುಷ್ಟಗಿ ತಾಲೂಕು ಪಿಂಜಾರ ನಧಾಫ್ ಸಂಘ ಸರಕಾರಕ್ಕೆ ಆಗ್ರಹಿಸುವ ಮೂಲಕ ಇಲ್ಲಿನ ಗ್ರೇಡ್-೨ ತಹಶೀಲ್ದಾರ ಮುರಳಿಧರ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಿಂಜಾರ ನಧಾಫ್ ಸಂಘದ ತಾಲೂಕು ಪ್ರಧಾನಕಾರ್ಯಧರ್ಶಿ ಮೈಬುಸಾಬ ನೆರೆಬೆಂಚಿ, ಬಾಲೆಸಾಬ ನಧಾಫ್, ಎಂ.ಕೆ.ಶೆಕ್ಕೇರ್ ವಕೀಲರು, ರಫಿಕ್ ನಧಾಫ್, ಯಮನೂರಸಾಬ ನಧಾಫ್, ಹಸನಸಾಬ, ಖಾಸಿಂಸಾಬ, ಲಾಡಸಾಬ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ