ಬಿದಿ ಬದಿ ವ್ಯಾಪಾರಸ್ಥರಿಗೆ ಹೋರಾಟದಲ್ಲಿ ಪಾಲುಗೊಳ್ಳಿ ಎಂದು ನೀತಿ ಪಾಠ ಹೇಳಿದ ಸಂವಿಧಾನ ಹಿತಾ ರಕ್ಷಣಾ ಸಮಿತಿ.
ತಾವರಗೇರಾ ಪಟ್ಟಣದಲ್ಲಿ ನ್ಯಾಯಧೀಶರ ವಿರುದ್ದ ನಡೇದ 7ನೇ ದಿನದ ಉಪವಾಸ ಸತ್ಯಾಗ್ರಹ, ಈ ಹೋರಾಟದ ಬೆನ್ನೆಲುಬಾಗಿ ತಾವರಗೇರಾ ಪಟ್ಟಣದ ಬಿದಿ ಬದಿ ವ್ಯಾಪಾರಸ್ಥರು ಇಂದು ಬೆಂಬಲ ನೀಡುವುದರ ಜೊತೆಗೆ ಹಲವು ಸಮಸ್ಯಗಳನ್ನು ಒತ್ತು ತಂದ ಬಿದಿ ಬದಿ ವ್ಯಾಪಾರಸ್ಥರು. ಬಿದಿ/ಬದಿ ವ್ಯಾಪಾರಸ್ಥರ ಮುಖಂಡರಾದ ಹನುಮೇಶ ಕಲಾಲ ಹಾಗೂ ನಭೀ ಎಲಿಗಾರ ಇವರು ಬಿದಿ ಬದಿ ವ್ಯಾಪಾರಸ್ಥರಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಂದ ಹಲವು ಸಮಸ್ಯಗಳು ಆಗುತ್ತಿದ್ದು, ನಮಗೆ ವ್ಯಾಪಾರ ಮಾಡಲು ಸೂಕ್ತವಾದ ಜಾಗೇ ನೀಡುತ್ತಿಲ್ಲ, ಪ್ರತಿ ಶನಿವಾರದೊಂದು ನಮಗೆ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಎಂದು ಹೇಳುತ್ತಿದ್ದಾರೆ. ನಮಗೆ ಸದ್ಯ ನಾವು ಮಾಡುವ ಬಜಾರ ಮುಖ್ಯ ರಸ್ತೆಯಲ್ಲಿ ವ್ಯಾಪಾರ ನಡೆಯುತ್ತಿದ್ದು, ಸದ್ಯ ವ್ಯಾಪಾರ ಮಾಡುವುದನ್ನು ಬಜಾರ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದು ತುಂಬ ಕಷ್ಠಕರವಾದ ಜೀವನ, ಹಾಗಾಗಿ ನಾವೆಲ್ಲರು ಈ ಸಂವಿಧಾನ ಹಿತಾ ರಕ್ಷಣಾ ಸಮಿತಿಯ ಮುಖಂಡರ ಬಳಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದೆವೆ ಎಂದರು. ಇದರ ಕುರಿತಾಗಿ ದಲಿತ ಹಿರಿಯ ಮುಖಂಡರಾದ ಆನಂದ ಬಂಡಾರಿಯವರು ತಮ್ಮ ಸಮಸ್ಯಗಳಿಗೆ ನಾವು ಸದಾ ನಿಮ್ಮ ಜೊತೆಗೆ ಇರುತ್ತೆವೆ. ಯಾವುದಕ್ಕೂ ಮನನೊಂದದೆ ಧೈರ್ಯದಿಂದ ಮುನ್ನುಗ್ಗಿ ಎಂದರು. ನಿಮ್ಮ ಬಿದಿ ಬದಿ ವ್ಯಾಪಾರಸ್ಥರು ಒಗ್ಗಟ್ಟಾಗಿ ಇರುವುದು ಕಲಿಯಿರಿ. ಯಾವುದೇ ಅಧಿಕಾರಿಗಳು ಬಂದು ನಿಮ್ಮ ಮೇಲೆ ದೌರ್ಜನ್ಯ ಮಾಡಲು ಅಧಿಕಾರವಿಲ್ಲ. ಅದಕ್ಕೆ ಆದಂತ ಕೆಲವು ನಿಯಮಗಳು ಇವೆ. ಹಾಗಾಗಿ ಪ್ರತಿಯೊಬ್ಬರು ಹೋರಾಟದಲ್ಲಿ ಪಾಲುಗೊಳ್ಳಿ. ಹೋರಾಟದಿಂದ ಮಾತ್ರ ನಮ್ಮ ಹಕ್ಕನ್ನು ನಾವು ಪಡೆಯಲು ಸಾದ್ಯ ಎಂದರು. ಇದರ ಜೊತೆ ಜೊತೆಗೆ ಇನ್ನೂಳಿದ ಮುಖಂಡರ ಜೊತೆ ಹಲವು ಬಿದಿ ಬದಿ ವ್ಯಾಪಾರಸ್ಥರ ಸಮಸ್ಯಗಳ ಬಗ್ಗೆ ಚರ್ಚೆಯು ನಡೆಯಿತು. ಹೋರಾಟದ ಕಿಚ್ಚಿನ ಹಾಡುಗಳ ಜೊತೆಗೆ ನ್ಯಾಯಧೀಶರ ವಿರುದ್ದ ಘೋಷಣೆ ಕೂಗುತ್ತ ಕಾರ್ಯಕ್ರಮ ಮುಂದುವರೆಸಿದರು. ಯಾವುದಕ್ಕೂ ಹಿಗ್ಗದೆ/ಕುಗ್ಗದೆ ನಿಮ್ಮ ನಿಮ್ಮ ವ್ಯಾಪಾರ ಮಾಡಿ ಆಗೇನಾದರು ಸಮಸ್ಯಗಳು ಬಂದಲ್ಲಿ ನಮಗೆ ಕರೆ ನೀಡಿ ಸಮಸ್ಯೆ ಬಂದ್ರೇ ಮಾತ್ರ ಹೋರಾಟಗಾರರು ನೇನಪಾಗಬಾರದು. ಪ್ರತಿಯೊಂದು ಹೋರಾಟದಲ್ಲಿ ಪಾಲುಗೊಳ್ಳಿ ಎಂದು ನೀತಿ ಪಾಠ ಹೇಳಿದರು. ನಾವು ಇಂದಿಗೆ 7ದಿನಗಳ ಕಾಲ ನ್ಯಾಯ ಬದ್ದವಾಗಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಮಗೆ ನ್ಯಾಯ ಸಿಗುವವರೇಗೂ ನಾವು ಈ ಹೋರಾಟ ಮುಂದುವರೆಸುತ್ತೆವೆ ಎಂದು ಸಂವಿಧಾನ ಹಿತಾ ರಕ್ಷಣಾ ಸಮಿತಿ ತೀರ್ಮಾನ ಕೈಗೊಂಡರು. ಈ ನಮ್ಮ ಹೋರಾಟಕ್ಕೆ ತಾವರಗೇರಾ ಹಾಗೂ ತಾವರಗೇರಾ ಹೋಬಳಿಯ ಜನರು ಸಹಕರಿಸುತ್ತಾದ್ದಾರೆ. ಎಲ್ಲಾರೀಗೂ ಲಾಲ್ ಸಲಾಂ ಹೇಳುತ್ತ ಈ ಹೋರಾಟದ ಕಾರ್ಯಕ್ರಮವು ಮುಂದುವರೆಯಿತು.
ವರದಿ – ಸಂಪಾದಕೀಯ