ಮಣ್ಣಿನಡಿಯಲಿರುವ ಬೃಹತ್ ದೇವಾಲಯ ತುಂಡಾದ ಅವಶೇಷಗಳು, ಉತ್ಖನನವಾದರೆ ಇತಿಹಾಸ ಬಯಲು..!!?

Spread the love

ಮಣ್ಣಿನಡಿಯಲಿರುವ ಬೃಹತ್ ದೇವಾಲಯ ತುಂಡಾದ ಅವಶೇಷಗಳು, ಉತ್ಖನನವಾದರೆ ಇತಿಹಾಸ ಬಯಲು..!!?

ಲಿಂಗಸಗೂರು ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಬೃಹತ್ ದೇವಾಲಯವೊಂದು ಮಣ್ಣಿನಲಿ ಹುದುಗಿದ್ದು ಅವಶೇಷಗಳು ತುಂಡುತುಂಡಾಗಿದ್ದು ಉತ್ಕನನವಾದರೆ ಬೃಹತ್ ದೇವಾಲಯದ ಹೊರಬಿದ್ದು ಇತಿಹಾಸ ಬಯಲಾಗಬಲ್ಲದು ಎನ್ನಲಾಗುತ್ತಿದೆ. ಕರಡಕಲ್ ಗ್ರಾಮದ ವಿಜಯಮಹಾಂತೇಶ್ವರ ಮಠದ ಹತ್ತಿರವಿರುವ ಜನತಾಕಾಲೋನಿಯಲ್ಲಿ ಸದರಿ ಪಾಳುದೇವಾಲಯವಿದ್ದು ಅದರ ವಿಸ್ತಾರ ನೋಡಿದರೆ ಜಿಲ್ಲೆಯಲ್ಲಿಯೆ ಬೃಹತ್ ಆದ ದೇವಾಲಯ ಇದಾಗಿತ್ತೆಂದು ಕಂಡುಬರುತ್ತದೆ ಅಷ್ಟೊಂದು ವಿಸ್ತಾರವಾದ ಜಾಗೆಯಲ್ಲಿ ದೇವಾಲಯದ ತುಂಡು ತುಂಡಾದ ಭಗ್ನವಾದ ಅವಶೇಷಗಳು ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊಡ್ಡಗುಡ್ಡೆಯಾಗಿಯೆ ಕಂಡುಬರುತ್ತದೆ ಹಂಸದ ಮೇಲೆ ಕುಳಿತ ಮೂರುಮುಖದ ಸುಂದರವಾದ ಮೂರ್ತಿಇದ್ದು ಇದನ್ನು ಸ್ಥಳಿಯರು ಲಕ್ಷ್ಮೀ ಎಂದು ಈಗಲೂ ಪೂಜಿಸುತ್ತಿದ್ದು ಈ ದೇವಾಲಯಕ್ಕೆ ಲಕ್ಷ್ಮೀ ದೇವಾಲಯವೆಂದು ಕರೆಯುತ್ತಾರೆ ಆದರೆ ನಾವು ಭೇಟಿಕೊಟ್ಟ ಸಂದರ್ಭದಲ್ಲಿ ದೊರೆತ ಶಾಸನದಂತೆ ಕಮ್ಮಟೇಶ್ವರ ದೇವರಿಗೆ ಕೇತೋಜನೆಂಬುವವನು ದಾನ ನೀಡಿರುವ ಅಂಶ ಬೆಳಕಿಗೆ ಬರುತ್ತದೆ ಅಲ್ಲದೆ ಟಂಕಸಾಲೆಯು ಇರಬಹುದು ಎಂಬುದನು ಶಾಸನ ಹೊರಹಾಕುತ್ತಿದ್ದು ಶಾಸನದ ಪ್ರಕಾರ ಇದು ಕಮ್ಮಟೇಶ್ವರ ದೇವಾಲಯವಾಗಿತ್ತೇ ಎನ್ನುವ ಸಂಶಯಗಳು ಬಲವಾಗುತ್ತವೆ ಹಂಸಗಳು,ಧ್ಯಾನಸ್ಥ ಯತಿಗಳ ಮೂರ್ತಿಗಳು ಕಂಬಗಳು ಬೋಧಿಗೆಗಳು,ತಳಪಾಯಗಳು ಸುರುಳಿಚಿತ್ರಗಳು ಪಾಣಿಪೀಠಗಳು ನಾಗಶಿಲೆಗಳು ಸೇರಿದಂತೆ ಹಲವಾರು ಭಗ್ನಗೊಂಡಿರುವ ಮೂರ್ತಿಗಳು ಗುಡ್ಡೆಗುಡ್ಡೆಯಾಗಿ ಬಿದ್ದಿರುವುದು ಕಂಡುಬರುತ್ತಿದ್ದು ಉತ್ಖನನವಾದರೆ ಬೃಹತ್ ದೇವಾಲಯವೊಂದು ಹೊರಬಹುದು ಎನ್ನಲಾಗುತ್ತಿದೆ. ದೇವಾಲಯದ ಸ್ಥಿತಿಯನ್ನು ಕಂಡರೆ ಕರಡಕಲ್ ರಾಜಧಾನಿಯ ಮೇಲೆ ಶತೃಗಳು ದಾಳಿ ಮಾಡಿದಾಗ ಈ ದೇವಾಲಯವನ್ನು ಸಂಪೂರ್ಣವಾಗಿ ನಾಶವಾಯಿತೆ ಎನ್ನುವ ಸಂಶಯಗಳು ಬರುತ್ತಿದ್ದು ಅದನ್ನು ರಕ್ಷಿಸಲು ಮಣ್ಣಿನಲ್ಲಿ ಹೂತಿರುವಂತಿದೆ ಈಗಲೂ ಈ ಸ್ಥಳವು ಎತ್ತರವಾಗಿದ್ದು ಗರ್ಭಗುಡಿ, ಸಭಾಮಂಟಪ, ಪ್ರವೇಶದ್ವಾರ ಮೇಲುನೋಟಕ್ಕೆ ಕಂಡುಬರುತ್ತಿದೆ ಅಲ್ಲಿರುವ ಭಗ್ನಗೊಂಡ ಅವಶೇಷಗಳು ಸಹಿತ ಬಹಳ ಸುಂದರವಾಗಿದ್ದು ನಾಜೂಕಿನ ಕುಸುರಿನ ಕೆಲಸದಿಂದ ಕಂಗೊಳಿಸುತ್ತಿವೆ ಅವುಗಳನ್ನು ರಕ್ಷಿಸುವ ಕೆಲಸಗಳು ನಡೆಯಬೇಕೆಂಬುದು ಇತಿಹಾಸ ಪ್ರಿಯರ ಒತ್ತಾಯವಾಗಿದೆ ಹೇಳಿಕೆ: ಕರಡಕಲ್ಲಿನ ಸದರಿ ದೇವಾಲಯವನ್ನು ಸ್ಥಳಿಯರು ಲಕ್ಷ್ಮೀ ದೇವಾಲಯವೆನ್ನುತ್ತಿದ್ದು ಇತ್ತೀಚೆಗೆ ದೊರೆತಿರುವ ಶಾಸನದ ಪ್ರಕಾರ ಕಮ್ಮಟೇಶ್ವರ ದೇವಸ್ಥಾನವಾಗಿದೆ ಬೃಹತ್ ದೇವಾಲಯವು ಅವಸಾನದ ಅಂಚಿನಲ್ಲಿದ್ದು ರಕ್ಷಿಸುವುದು ಅಗತ್ಯವಾಗಿದೆ ಇಂತಹ ಐತಿಹಾಸಿಕ ಸ್ಮಾರಕಗಳು ತಾಲೂಕಿನಲ್ಲಿದ್ದು ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆಡಾ ಶಿವರಾಜ ಯತಗಲ್ ಉಪನ್ಯಾಸ ಕರು ರಾಯಚೂರು ವಿ,ವಿ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *