ಉಕ್ರೇನ್‌ನ ಖಾರ್ಕಿವ್‌ನಲ್ಲಿ ನಗರದ ಮೇಲೆ ನಡೆದ ಶೆಲ್ ಬಾಂಬ್ ದಾಳಿಯಲ್ಲಿ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ಸಾವು, ಇನ್ನೂ ಸಾವಿರಾರು ವಿದ್ಯಾಥಿಗಳ ಅಳಲು….
ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗುಡಾಯಿಸುತ್ತಿದ್ದು ರಷ್ಯಾ ಉಕ್ರೇನ್‌ನ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ. ಇಂದು ಉಕ್ರೇನ್‌ನ ಖಾರ್ಕಿವ್‌ನಲ್ಲಿ (Cerkiew) ನಗರದ ಮೇಲೆ ನಡೆದ ಶೆಲ್ ಬಾಂಬ್ ದಾಳಿಯಲ್ಲಿ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮೃತ ದುರ್ದೈವಿಯನ್ನು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್‌ಶೇಖರಪ್ಪ ಎಂದು ಗುರುತಿಸಲಾಗಿದೆ. ಈ ವಿಚಾರವನ್ನು ಕೇಂದ್ರ ವಿದೇಶಾಂಗ ಇಲಾಖೇ ಅಧಿಕೃತಗೊಳಿಸಿದ್ದು ವಿದೇಶಾಂಗ ಇಲಾಖೆಯ ಹರೀಂದಾವತ್ ಟ್ವೀಟ್ ಮಾಡಿದ್ದು ವಿದ್ಯಾರ್ಥಿಯ ಹೆಸರನ್ನು ಬಹಿರಂಪಡಿಸಿಲ್ಲ. ಉಕ್ರೇನ್‌ನಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳು ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿರುವುದು ನವೀನ್ ಎಂದು ಖಚಿತಪಡಿಸಿದ್ದಾರೆ.
“ಉಕ್ರೇನ್ ರಾಜಧಾನಿ ಕೀವ್ ಅನ್ನು ಈಗಿಂದೀಗಲೇ ತೊರೆಯಿರಿ” : ಭಾರತದ ನಾಗರಿಕರಿಗೆ ರಾಯಭಾರಿ ಕಚೇರಿ ಟ್ವೀಟ್..!!
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತದ ಮೂಲದ ಪ್ರಜೆಗಳಿಗೆ ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ ರಾಜಧಾನಿ ಕೀವ್ ಅನ್ನು ಈಗಿಂದೀಗಲೇ ತೊರೆಯಿರಿ ಎಂದು ಭಾರತದ ನಾಗರಿಕರಿಗೆ ರಾಯಭಾರಿ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ. ಉಕ್ರೇನ್ ರಾಜಧಾನಿಯಲ್ಲಿರುವ ಭಾರತೀಯ ಮೂಲದವರು ಈ ಕೂಡಲೇ ಕೀವ್ ಅನ್ನು ತೊರೆಯಿರಿ. ರೈಲು ಅಥವಾ ಇನ್ನಿತರ ಲಭ್ಯ ಸಾರಿಗೆ ವ್ಯವಸ್ಥೆ ಮೂಲಕ ರಾಜಧಾನಿಯಿಂದ ಹೊರಡಿ ಎಂದು ಉಕ್ರೇನ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ ಎನ್ನಲಾಗಿದೆ. ಕೀವ್‌ನ ವಾಯುವ್ಯ ರಸ್ತೆಗಳಲ್ಲಿ ರಷ್ಯಾ ಸೇನಾ ವಾಹನಗಳಿರುವ ಉಪಗ್ರಹ ಚಿತ್ರಗಳು ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಈ ಸಲಹೆಯನ್ನು ಪೋಸ್ಟ್ ಮಾಡಲಾಗಿದೆ. ಯುಎಸ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ನೂರಾರು ಟ್ಯಾಂಕ್‌ಗಳು, ಫಿರಂಗಿಗಳು, ಶಸ್ತ್ರಸಜ್ಜಿತ ಮತ್ತು ಲಾಜಿಸ್ಟಿಕ್ ವಾಹನಗಳಿವೆ ಎಂದು ತಿಳಿಯಲಾಗಿದೆ.ಯುದ್ಧಪೀಡಿತ ರಾಷ್ಟ್ರ ಉಕ್ರೇನ್‌ನಲ್ಲಿ 16,000 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಉಕ್ರೇನ್ ಬಂಕರ್‌ಗಳು, ಮೆಟ್ರೋ ನಿಲ್ದಾಣಗಳು, ಬಾಂಬ್ ಸೆಲ್ಟರ್‌ಗಳಲ್ಲಿ ಅಡಗಿರುವ ವಿದ್ಯಾರ್ಥಿಗಳು ಸಹಾಯಕ್ಕಾಗಿ ಬೇಡಿಕೆ ಇಡುತ್ತಿರುವ ಫೋಟೋ, ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದುವರೆಗೆ 8,000 ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಉಕ್ರೇನ್‌ನ ಪೂರ್ವ ಭಾಗಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ಕೆಲವು ವಿದ್ಯಾರ್ಥಿಗಳು ಹೆದರಿ ಭಯದಿಂದ ನಮ್ಮನ್ನು ರಕ್ಷಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಬೇಡಿಕೊಳ್ಳುತ್ತಿದ್ದಾರೆ.ನಮಗೆ ಯಾರು ಭಾರತದ ರಾಯಭಾರಿಗಳು ಸಹಾಯ ಮಾಡುತ್ತಿಲ್ಲವೆಂದು ಆರೋಪ ಕೂಡ ಮಾಡಿದ್ದಾರೆ.
ವರದಿ – ಸಂಪಾದಕೀಯ