ಅಮ್ಮನಕೆರೆ ಎಸ್ಕೆಡಿಆರ್ಡಿಪಿ: “ನಮ್ಮೂರು ನಮ್ಮ ಕೆರೆ“ಯೋಜನೆಯಡಿ,ಕೆರೆ ಅಭಿವೃದ್ಧಿ…
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನಕೇರಿ ಗ್ರಾಮದ ಹೊವಲಯದಲ್ಲಿರುವ, ಕೆರೆಯನ್ನು ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಅಮ್ಮನಕೆರೆ ಕೆರೆ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ. “ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಅಭಿವೃದ್ಡಿಗೊಳಿಸಲಾಗಿದೆ, ಈ ಮೂಲಕ ಗ್ರಾಮದ ಕೆರೆ ಪುನರ್ಚೇತನಗೊಂಡಿದೆ. ಕರೆ ಅಭಿವೃದ್ಡಿಯಿಂದಾಗಿ ಅಮ್ಮನಕೆರೆ ಗ್ರಾಮ ಹಾಗೂ ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರಲ್ಲಿ ಹರ್ಷ ತಂದಿದೆ,ದನಕರುಗಳಿಗೆ ಪಂಪ್ ಸೆಟ್ ಗಳಿಗೆ ಹಾಗೂ ಜಲವನ್ನೇ ಹುಸಿರನ್ನಾಗಿಸಿಕೊಂಡಿರುವ ಸಕಲ ಜೀವ ಸಂಕುಲಕ್ಕೆ ಮರುಜೀವ ಬಂದಂತಾಗಿದೆ.ಕೆಲ ತಿಂಗಳುಗಳಿಂದ ನಿರಂತರವಾಗಿ ಸುಮಾರು ನಲವತ್ತು ದಿನಗಳ ಕಾಲ ನಡೆಸಲಾಗಿದೆ,ಕೆರೆ ಅಭಿವೃದ್ಧಿಗೆ16ಲಕ್ಷ₹ ವ್ಯೆಚ್ಚದ ಯೋಜನೆ ರೂಪಿಸಿದ್ದು ಸ್ಥಳೀಯ ಇತರೆ ಸ್ಪನ್ಮೂಲಗಳೊಂದಿಗೆ ಕಾಮಗಾರಿ ನೆರವೇರಿಸಲಾಗುತ್ತಿದೆ ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.ಈಗಾಗಲೇ ಶೇ 90ರಷ್ಟು ಕಾಮಗಾರಿ ಮುಗಿದಿದ್ದು ಇನ್ನು ಶೇ10ರಷ್ಟು ಬಾಕಿಯಿದ್ದು ಕೆಲವೇ ದಿನಗಳಲ್ಲಿ,ಕಾಮಗಾರಿ ಸಂಪೂರ್ಣ ಮುಗಿಯಲಿದೆ ಗ್ರಾಮಸ್ಥರು ಹಾಗೂ ಕೆರೆ ಅಭಿವೃದ್ಧಿ ಸಮಿತಿಯವರ ಪಾತ್ರ ಹೆಚ್ಚಿದೆ ಎಂದು ಸಂಸ್ಥೆ ಅಧಿಕಾರಿಗಳಾದ ಹರೀಶ್ ಮತ್ತು ಮಹಾಲಿಂಗಯ್ಯ ತಿಳಿಸಿದ್ದಾರೆ. ಅಮ್ಮನಕೆರೆಗೆ ಮಾತ್ರವಲ್ಲ ಅಮ್ಮನಕೆರೆ ಗ್ರಾಮಕ್ಕೆ ಎಸ್ಕೆಡಿಆರ್ಡಿಪಿ ಸಂಸ್ಥೆಯ ಕೊಡುಗೆ ಅಪಾರವಾದ್ದು,ಅವರು ಗ್ರಾಮಕ್ಕೆ ಮಾತ್ರವಲ್ಲ ಗ್ರಾಮದ ನೆರೆಹೊರೆ ಜೀವರಾಶಿಗಳಿಗೆ ಜೀವನೋತ್ಸಾಹ ತುಂಬಿದ್ದಾರೆ ಅದಕ್ಕಾಗಿ ಸಂಸ್ಥೆಗೆ ಕೃತಜ್ಞತೆಗಳನ್ನ ಸಲ್ಲಿಸುತ್ತೆವೆ ಎಂದು ಗ್ರಾಮದ ಮುಖಂಡರು ಹಾಗೂ ಕೆರೆ ಅಭಿವೃದ್ಧಿ ಸಮಿತಿ ಮತ್ತು ಜನಪ್ರತಿನಿಧಿಗಳು ತಿಳಿಸಿದ್ದಾರೆ.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428