ಬದುಕು,,,,,,,,,,,,,,,,,,,?
ಕಲ್ಲು ಮಣ್ಣು ಗಿಡ
ಮನುಜ ಮರಗಳಿಗೆ
ಜನುಮವಿತ್ತವರ್ಯಾರು….?
ಸೂರ್ಯ ಚಂದ್ರ ಗ್ರಹ
ನಕ್ಷತ್ರ ಇತ್ಯಾದಿಗಳಿಗೆ
ಜನುಮವಿತ್ತವರ್ಯಾರು….
ನೀನಾ… ನಾನಾ…?
ಬೇಳಕ ನೀಡುವನೊಬ್ಬ ಅಣ್ಣ
ಕತ್ತಲೆ ತಣಿಸುವನೊಬ್ಬ ತಮ್ಮ
ಹಸಿವ ನೀಗಿಸುವಳೋಬ್ಬಳು ತಾಯಿ
ಆದರೂ….
ಸೃಷ್ಠಿಯ ಚರಾ ಚರಾ
ಅಣುರೇಣು ತೃಣಕಾಷ್ಠಗಳಿಗೆ
ಅಧಿಪತಿ ನಾನೆಂಬ
ಹುಲು ಮಾನವ ನಿನಗೇಕೆ…?
ಅಲ್ಲೊಂದು ಯುದ್ದ
ಇಲ್ಲೊಂದು ಬಂಡಾಯ
ಮತ್ತೆಲ್ಲೋ ಧರ್ಮ ಸಂಘರ್ಷ
ಅಮಾಯಕ ಜೀವಗಳ ಬಲಿ
ಇದ್ದದ್ದನ್ನ ಬಿಟ್ಟು
ಇರದುದರೆಡೆ ತುಡಿವ
ಈ ಜೀವನ ಎಷ್ಟು ದಿನಕೆ….?
ಬದುಕಲು ಬಿಡು
ಅವರವರ ತಾಳಕ್ಕೆ ತಕ್ಕಂತೆ
ಉಗುರು ಮಣ್ಣಿಗೂ ಸೋಲದ
ಮನುಜ ನೀನೆಷ್ಟು ದಿನ.
ಮತ್ತದೆ ಪ್ರಳಯ ಭೂಕಂಪ
ಪ್ರಕೃತಿ ವಿಕೋಪ
ಮಣ್ಣಲ್ಲಿ ಮಣ್ಣಾಗುವ ಕಾಲ
ತಪ್ಪಿಸಬಹುದೆ ನೀ….?
ತಕ್ಕಡಿಯ ಮೇಲಿನ ಬದುಕಿದು
ಹೆಚ್ಚಾದರೆ ಪಾತಾಳ
ಕಡಿಮೆಯಾದರೆ ವೈಕುಂಠ
ಸಮತಲದಲ್ಲಿದ್ದರೆ ಬದುಕು ಸ್ವರ್ಗ….
ಫುಷ್ಫತನಯ….