ರಾಮತ್ನಾಳ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲ್ಯೆ ವಿರೋದಿಸಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಖಂಡನೆ…..
ಲಿಂಗಸಗೂರು ತಾಲೂಕಿನ ರಾಮತ್ನಾಳ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲ್ಯೆಗೆ ಮೀಸಲು ಕ್ಷೇತ್ರದ ಶಾಸಕರ ನಿರ್ಲಕ್ಷ್ಯ ! ಮುದುಗಲ್ ಪಿಎಸ್ ಐ ಡಾಕೇಶ್ನ ವೈಪಲ್ಯವೇ ಘಟನೆಗೆ ನೇರ ಕಾರಣ ! ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಖಂಡನೆ ! ಲಿಂಗಸಗೂರು ತಾಲೂಕಿನ ಸಣ್ಣ ಗ್ರಾಮ ರಾಮತ್ನಾಳದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲ್ಯೆಗೆ ಶಾಸಕ ಡಿ.ಎಸ್.ಹೂಲಿಗೇರಿ ಹಾಗೂ ಪೋಲಿಸ್ ಇಲಾಖೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿರುವುದರಿಂದ ಕೂಡಲೇ ಮೀಸಲು ಕ್ಷೇತ್ರದ ಶಾಸಕ ಹೂಲಿಗೇರಿ ರಾಜೀನಾಮೆಯನ್ನು ಸಲ್ಲಿಸಬೇಕೆಂದು ಹಾಗೂ ಘಟನೆಗೆ ಮುದುಗಲ್ ಪೋಲಿಸರ ಕರ್ತವ್ಯ ವೈಫಲ್ಯವೇ ಕಾರಣವಾಗಿರುವುದರಿಂದ ಮುದುಗಲ್ ಪಿಎಸ್‌ಐ ಡಾಕೇಶನ ಮೇಲೆ ಎಫ್‌ಐಆರ್ ದಾಖಲಿಸಿ, ವಜಾಗೊಳಿಸಲು ಸರಕಾರಕ್ಕೆ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ-ಸಿಂಧನೂರು ಆಗ್ರಹಿಸುತ್ತದೆ.
ಒಕ್ಕೂಟದ ನಿಯೋಗ ಹಲ್ಲ್ಯೆಗೊಳಗಾದವರನ್ನು ಚಿಕಿತ್ಸೆಗಾಗಿ, ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದರಿಂದ ಅವರ ಆರೋಗ್ಯದ ಯೋಗಕ್ಷೇಮವನ್ನು ವಿಚಾರಿಸಿದ ತಂಡ ಪ್ರಕರಣದ ವಿವರವನ್ನು ಹಲ್ಲ್ಯೆ ನಡೆಸಿದವರಿಂದ ಮತ್ತು ಹಲ್ಲ್ಯೆಗೊಳಗಾದವರಿಂದ ಪಡೆದುಕೊಂಡಿತು. ಉದ್ಯೋಗ ಖಾತ್ರಿಯ ಅನುದಾನದಲ್ಲಿ ಮರಂ ಸಾಗಿಸುವ ನಿಮಿತ್ಯ, ಗ್ರಾಮದ ದಲಿತ ಕೇರಿಯ ರಸ್ತೆ ಮೂಲಕ ಹಾದು ಹೋಗಬೇಕಾದ ಮರಂ ತುಂಬಿದ ಟ್ರ್ಯಾಕ್ಟರ್‌ನ ಕರ್ಕಸ ಧ್ವನಿ, ಅತೀ ಹೆಚ್ಚಿನ ಸೌಂಡ್, ವೇಗದ ಚಾಲನೆಯನ್ನು ಕಂಡ ದಲಿತ ಕೇರಿಯ ಜನರು ಟ್ರ್ಯಾಕ್ಟರ್‌ನ್ನು ತಡೆದು ಯಾಕೆ ಅಡ್ಡದಿಡ್ಡಿಯಾಗಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತೀರಿ, ಟೆಪ್ರಿಕಾರ್ಡ ಸೌಂಡ್ ಕಡಿಮೆ ಮಾಡಿ, ನಿಧನವಾಗಿ ಚಲಿಸಿ, ನಮ್ಮ ಕೋಳಿಗಳು, ದನಕರುಗಳು, ಚಿಕ್ಕಮಕ್ಕಳು ರಸ್ತೆಯಲ್ಲಿ ತಿರುಗಾಡುತ್ತಿರುತ್ತವೆ ಎಂದು ದಲಿತರು ಪ್ರಶ್ನೆ ಮಾಡಿ, ಈ ಕುರಿತು ಮುದುಗಲ್ ಠಾಣೆಯ ಪಿಎಸ್‌ಐ ಡಾಕೇಶರವರಿಗೆ ಮಾಹಿತಿ ತಿಳಿಸಿದ ನಂತರ, ಸಹಿಸದ ಸವರ್ಣೀಯರು ಎಲೇ ಕೀಳು ಜಾತೀಯ ಮಾದಿಗ-ಬ್ಯಾಗರ್ ಮಕ್ಕಳೇ, ನಮ್ಮ ವಿರುದ್ಧ ಪೋಲಿಸರಿಗೆ ದೂರು ಕೊಡಲು ಹೋಗುತ್ತೀರಾ? ಎಷ್ಟು ಸೊಕ್ಕು ನಿಮಗೆ ಎಂದು ಏಕಾ ಏಕೀಯವಾಗಿ ಗುಂಪುಕಟ್ಟಿಕೊಂಡು ಬಡಿಗೆ, ಬೆತ್ತಗಳೊಂದಿಗೆ ಕೇರಿಗೆ ನುಗ್ಗಿ, ಮಹಿಳೆ ಮಕ್ಕಳೆನ್ನದೆ, ಮನಸೋ ಇಚ್ಚೆ ಮಾರಣಾಂತಿಕ ದಾಳಿಯನ್ನು ನಡೆಸಿದ್ದಾರೆ. ಈ ಘಟನೆಯ ಮುಂಚಿತವಾಗಿ ಮುದುಗಲ್ ಪೋಲಿಸರಿಗೆ ಟ್ರ್ಯಾಕ್ಟರ್‌ಗಳನ್ನು ನಿಧಾನವಾಗಿ ಚಲಿಸಲು ಹಾಗೂ ಶಬ್ದ ಕಡಿಮೆ ಮಾಡಿ ಓಡಿಸಲು ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದೆ, ಮುದುಗಲ್ ಠಾಣೆಯ ಪಿಎಸ್‌ಐ ಡಾಕೇಶ್ ಸವರ್ಣೀಯರ ಪರವಾಗಿ, ವಕಾಲತ್ತು ವಹಿಸಿ, ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರಿಂದಲೇ ದಲಿತರ ಮೇಲೆ ಮಾರಣಾಂತಿಕ ಹಲ್ಲ್ಯೆಗೆ ಪ್ರಮುಖ ಕಾರಣವೆಂದು ಸಾಬೀತಾಗಿದೆ.
ಮೇಲಿಂದ ಮೇಲೆ ಲಿಂಗಸಗೂರು ತಾಲೂಕಿನ ಅದರಲ್ಲೂ ಮುದುಗಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪಿಎಸ್‌ಐ ಡಾಕೇಶ್‌ರವರು ಸವರ್ಣೀಯರ ಜೊತೆಗೆ ಶ್ಯಾಮೀಲಾಗಿರುವ ಕಾರಣದಿಂದಲೇ ದಲಿತ ಹಿಂದುಳಿದವರ ಮೇಲೆ ಹತ್ಯೆ, ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಲಿವೆ. ಕಿಲಾರಹಟ್ಟಿ ಬೈಲಪ್ಪನ ಮೇಲೆ ಸರ್ವರ್ಣೀಯರು ಥಳಿಸಿದ ಪ್ರಕರಣ, ನಿಲೋಗಲ್ ಸೈನಿಕನ ತಾಯಿಯ ಕೊಲೆ ಪ್ರಕರಣಗಳು ಹಸಿರಿರುವಾಗಲೇ ರಾಮತ್ನಾಳ ದಲಿತರ ಮೇಲೆ ಹಲ್ಲ್ಯೆ ನಡೆದಿದೆ. ಮೀಸಲು ಕ್ಷೇತ್ರದ ಶಾಸಕರ ನಡೆ ಹಾಗೂ ಪೋಲಿಸ್ ಅಧಿಕಾರಿಗಳ ಕುಮ್ಮಕ್ಕು ಇದರಲ್ಲಿ ಎದ್ದು ಕಾಣುತ್ತಿದೆ. ಕಾರಣ ನೈತಿಕ ಹೊಣೆ ಹೊತ್ತು, ಶಾಸಕ ಸ್ಥಾನಕ್ಕೆ ಹೂಲಿಗೇರಿಯವರು ತಮ್ಮ ರಾಜೀನಾಮೆಯನ್ನು ಸಲ್ಲಿಸಬೇಕು. ಕೂಡಲೇ ಹಲ್ಲ್ಯೆಗೊಳಗಾದ, ದಲಿತರಿಗೆ ರಕ್ಷಣೆ ಕೊಡುವ ಬದಲಾಗಿ, ನಿಮ್ಮನ್ನು ಬಂಧಿಸುತ್ತೇನೆಂದು ದಲಿತ ಕುಟುಂಬಗಳಿಗೆ ಬೆದರಿಕೆ ಹಾಕಿ, ಮಾನಸಿಕ ಚಿತ್ರಹಿಂಸೆ ನೀಡಿ, ಕುಟುಂಬದ ಸದಸ್ಯರು ಗ್ರಾಮ ತೊರೆಯುವಂತೆ ಮಾಡುತ್ತಿರುವ ಪಿಎಸ್‌ಐ ಡಾಕೇಶನ ಮೇಲೆ ಎಫ್‌ಐಆರ್ ದಾಖಲಿಸಿ, ಸೇವೆಯಿಂದ ಅಮನಾತ್‌ಗೊಳಿಸಿ, ನೊಂದ ಕುಟುಂಬಗಳಿಗೆ ಸರಕಾರದಿಂದ ಪರಿಹಾರವನ್ನು ಒದಗಿಸಬೇಕೆಂದು ಮತ್ತು ದಲಿತರ ಮೇಲೆ ದಾಖಲುಮಾಡಿದ ಸುಳ್ಳು ಪ್ರತಿ ದೂರುಗಳನ್ನು ವಾಪಸ್ ಪಡೆಯಬೇಕೆಂದು ನಮ್ಮ ಒಕ್ಕೂಟದ ವಿನಂತಿಯಾಗಿದೆ. ಸಂಚಾಲಕರು : ಎಂ.ಗಂಗಾಧರ, ಹನುಮಂತಪ್ಪ ಹಂಪನಾಳ, ಭೀಮೇಶ ಕವಿತಾಳ, ಪ್ರಶಾಂತ ದಾನಪ್ಪ ನಿಲೋಗಲ್, ಶಿವರಾಜv ಉಪ್ಪಲದೊಡ್ಡಿ, ಸುರೇಶ ಎಲೇಕೂಡ್ಲಿಗಿ, ನಾಗರಾಜ ಸಿಂಧನೂರು, ಬಸವರಾಜ ಕಡಬೂರು, ಮೌನೇಶ ಜಾಲವಾಡ್ಗಿ.
ವರದಿ – ಸಂಪಾದಕೀಯ