ದುರ್ಬಲ ಹಾಗೂ ಅವಕಾಶ ವಂಚಿತ ಸಮುದಾಯದ ಫಲಾನುಭವಿಗಳ ಕೋವಿಡ್ -19 ಲಸಿಕಾಕರಣ ಸಭೆ :ಗ್ರಾಮ ಪಂಚಾಯಿತಿ ಕಾರ್ಯಾಲಯ ಹಿರೇಮನ್ನಾಪುರ..

Spread the love

ದುರ್ಬಲ ಹಾಗೂ ಅವಕಾಶ ವಂಚಿತ ಸಮುದಾಯದ ಫಲಾನುಭವಿಗಳ ಕೋವಿಡ್ -19 ಲಸಿಕಾಕರಣ ಸಭೆ :ಗ್ರಾಮ ಪಂಚಾಯಿತಿ ಕಾರ್ಯಾಲಯ ಹಿರೇಮನ್ನಾಪುರ..

ಕುಷ್ಟಗಿ :Momentum Routine Immunization Transformation and Equity (M-RITE) ಯೋಜನೆಯಡಿ  Karnataka Health Promotion Trust (KHPT)ರವರು  ದುರ್ಬಲ ಹಾಗೂ ಅವಕಾಶ ವಂಚಿತ ಸಮುದಾಯದ ಫಲಾನುಭವಿಗಳ ಕೋವಿಡ್ -19 ನೀಡುವ  ಕುರಿತು ಗ್ರಾಮ ಪಂಚಾಯಿತಿ ಕಾರ್ಯಾಲಯ ಹಿರೇಮನ್ನಾಪುರ ದಲ್ಲಿ KHPT ಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಸಿದ್ದಲಿಂಗಯ್ಯ ಸರ್ ಇವರ ಸಹಕಾರ ದೊಂದಿಗೆ ಕಾರ್ಯ ಕರ್ತರು ಸ್ಥಳೀಯ ಆರೋಗ್ಯ ಸಿಬ್ಬಂದಿಗಳೊಂದಿಗೆ ಮತ್ತು ಸಮುದಾಯ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಲಸಿಕೆ ಹಾಕಿಸಿಕೊಳ್ಳಲು ವ್ಯಕ್ತಿಗಳು ಮತ್ತು ಅವರ ಕುಟುಂಬವನ್ನು ಸಂಪರ್ಕಿಸಿ ಮನೆಮನೆಗೆ ಭೇಟಿ ಮಾಡಿ ಅವರಿಗೆ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಪ್ರೇರೇಪಿಸಲಾಗುವುದು.ಈ ಸಂಸ್ಥೆಯು ಮುಖ್ಯವಾಗಿ ವ್ಯಕ್ತಿ ವ್ಯಕ್ತಿಗತ ಭೇಟಿ. ಸಮುದಾಯ ಮಧ್ಯಸ್ಥಿಕೆ ವಿವಿಧ ಪಾಲುದಾರರೊಂದಿಗೆ ಸಹಭಾಗಿತ್ವ ಹಾಗೂ ಪರಿಣಾಮಕಾರಿಯಾದ ಲಸಿಕಾ ಜಾಗೃತಿ ಅಭಿಯಾನ ಹೀಗೆ ವಿವಿಧ ಕಾರ್ಯತಂತ್ರಗಳೊಂದಿಗೆ ಕೆಲಸ ಮಾಡುವುದು ನಮ್ಮ ಸಂಸ್ಥೆಯ ಸ್ವಯಂಸೇವಕರ ಕೆಲಸವಾಗಿರುತ್ತದೆ. ಈ ವಿಷಯದ ಹಿನ್ನೆಲೆಯಲ್ಲಿ ಸ್ವಯಂಸೇವಕರಿಗೆ ತರಬೇತಿಯನ್ನು ಮಾಡಲಾಯಿತು. ಈ ತರಬೇತಿಯಲ್ಲಿ ತಾಲೂಕು ಸಂಯೋಜಕರಾದ ಲಕ್ಷ್ಮಣ್ ಹೊಮ್ಮಿನಾಳ ಹಾಗೂ ಸ್ವಯಂಸೇವಕರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *