ವಿಶ್ವ ಮಹಿಳಾ ದಿನಾಚರಣೆ ಶುಭಾಶಯಗಳು :- ಹೆಣ್ಣು ಮನುಜನ ಉಸಿರು…..
ನನಗೆ ಜನ್ಮ ಕೊಟ್ಟ ಅಮ್ಮಗೆ ಮೊದಲು ಶರಣು
ನನ್ನ ಅಕ್ಕಂದಿರಿಗೆ ಹೃದಯ ಪೂರ್ವಕ ಶರಣು
ನನ್ನ ಅರ್ಧಾಂಗಿನಿಗೆ ಕೋಟಿ ಕೋಟಿ ಶರಣು
ಹೆಣ್ಣು ಎಂಬು ಚಿನ್ನ ಈ ಭೂಮಿ ಕಾಣಣ್ಣ
ಹೆಣ್ಣು ನಮ್ಮ ಜನ್ಮಕ್ಕೆ ಸಂಜೀವಿನಿ ಕಾಣಣ್ಣ
ಹೆಣ್ಣಿನಿಂದಲೆ ಸೃಷ್ಟಿಯು ಮೊದಲು ಕೇಳಣ್ಣ
ಹೆಣ್ಣು ಹೊನ್ನು ಮಣ್ಣು ಮೂರು ದೇವತೆಯಣ್ಣ
ತುತ್ತು ಅನ್ನ ಕೊಟ್ಟಳಮ್ಮ ಹೆತ್ತ ತಾಯಿ
ನವಮಾಸವು ಹೊತ್ತು ಬೆಳೆಳೆಸಿದಳು ತಾಯಿ
ತಾಯಿ ಎಂಬ ಸಂಬಂಧ ಜಗಕ್ಕಿಂತ ದೊಡ್ಡದು
ತಾಯಿ ಇಲ್ಲದೆ ಮಾನವ ಬಾರನು ಮತ್ತೆಂದು
ಹೆಣ್ಣಿಗೆ ಮೊದಲು ಗೌರವ ಕೊಡಬೇಕು
ಹೆಣ್ಣು ನಮ್ಮ ಜೀವಕ್ಕೆ ಉಸಿರಾಗಿರಬೇಕು
ಹೆಣ್ಣಿ ಇಲ್ಲಿ ಸ್ವರ್ಗ ಹೆಣ್ಣು ಹುಟ್ಟಿಗೆ ದೇವತೆ
ಹೆಣ್ಣು ನಮ್ಮ ಬಾಳಿಗೆ ಜ್ಞಾನಕ್ಕೆ ಹಣತೆ
ಅಮ್ಮ ಎನ್ನುವ ಪದದಲ್ಲಿ ಬ್ರಹ್ಮಾಂಡ ತುಂಬಿದೆ
ಅಮ್ಮ ಎನ್ನುವ ಎರಡಕ್ಷರದಲ್ಲಿ ಮಮಕಾರವಿದೆ
ಅಮ್ಮ ಎನ್ನುವ ಮಾತಲ್ಲಿ ಶ್ರೀಮಂತಿಕೆ ಇದೆ
ಅಮ್ಮ ಜಗಕೆ ದೊಡ್ಡವಳು ನಮ್ಮೆಲ್ಲರ ಬಾಳಿಗೆ ಸ್ಪೂರ್ತಿಯು ಲಾಲಾಲಾಲಾ ಲಾಲಾಲಾಲಾ
ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ