ಜುಮಲಾಪೂರ ಪ್ರೌಢ ಶಾಲೆಯಲ್ಲಿ ಎಸ್ ಡಿ ಎಂ ಸಿ ರಚನೆ ಅಧ್ಯಕ್ಷರಾಗಿ ಕನಕಪ್ಪ ಹುಡೇಜಾಲಿ ಆಯ್ಕೆ..
ಕುಷ್ಟಗಿ ತಾಲೂಕಿನ ತಾವರಗೇರ ಹೋಬಳಿಯ ಸರಕಾರಿ ಪ್ರೌಢಶಾಲೆ ಜುಮಲಾಪುರ ದಲ್ಲಿ ಇಂದು ನೂತನವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಎಲ್ಲ ಗ್ರಾಮಗಳ ಪಾಲಕರ ಸಭೆ ಆಯೋಜಿಸಲಾಗಿತ್ತು. ಹಿಂದಿನ ಸಭೆಯಲ್ಲಿ ನಿರ್ದಿಷ್ಟ ಕೋರಂ ಕೊರತೆಯಿಂದ ಮುಂದೂಡಿದ್ದು ಇಂದು ಹಾಜರಿರುವ ಪಾಲಕರ ಸಂಖ್ಯೆಯನ್ನೇ ಕೋರಂ ಎಂದು ಭಾವಿಸಿ ರಚಿಸಲಾಯಿತು. ನೂಡಲ್ ಅಧಿಕಾರಿಯಾಗಿ ಬಿ ಆರ್ ಪಿ ಜಿವನಸಾಬ್ ಬಿನ್ನಾಳ ಎಸ್ ಡಿ ಎಂ ಸಿ ರಚನೆಯ ಉದ್ದೇಶ ನಿಯಮಗಳನ್ನು ತಿಳಿಸಿದರು. ನಂತರ ಸಭೆಯಲ್ಲಿ ಹಾಜರಿದ್ದ ಪಾಲಕರ ಕುಲಂಕುಷವಾಗಿ ಆಲೋಚನೆ ಮಾಡಿ ನಿಯಮಾನುಸಾರ ಒಂಭತ್ತು ಜನ ಪಾಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಮುರು ಜನ ಮಹಿಳೆಯರು ಆರು ಜನ ಪಾಲಕರು ಪ್ರತಿನಿಧಿಗಳು ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಅಧ್ಯಕ್ಷರಾಗಿ ಕನಕಪ್ಪ ಹುಡೇಜಾಲಿ ನಾಯಕ ಆಯ್ಕೆಯಾದರು. ನಂತರ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಎಲ್ಲಾ ಎಸ್ಡಿಎಂಸಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಗ್ರಾಮದ ಪ್ರಮುಖರಾದ ಈರಣ್ಣ ದಂಡಿನ , ನಿಂಗಪ್ಪ ನಾಯಕ್,ಶಂಕರಪ್ಪ ನಾಯಕ ದೊಡ್ಡನಗೌಡ ಮಳೆಗೌಡ್ರು ದೆವಪ್ಪ ಮಡಿವಾಳರ ದೊಡ್ಡಪ್ಪ ಆನೆಗುಂದಿ ಶಂಕರಪ್ಪ ಬೋದುರು ಶಿವುಪುತ್ರ ಬಪ್ಪೂರ ಗ್ರಾಮ ಪಂಚಾಯತ್ ಸದಸ್ಯರಾದ ಶರಣಪ್ಪ ನಾಯಕ ಬಾಳಪ್ಪ ಕೊಡಗಲಿ ಹಾಗೂ ಹುಸೇನ್ ಸಾಬ್ ಕಲಾಲ ನೇತೃತ್ವ ವಹಿಸಿದ್ದರು. ಮಲ್ಲಪ್ಪ ಎಎಸ್ಐ ಪೊಲೀಸ್ ಬಂದೋಬಸ್ತ್ ಒದಗಿಸಿದರು.
ಗ್ರಾಮ ಪಂಚಾಯತ್ ಪಿಡಿಒ ದೊಡ್ಡಪ್ಪ ಹಾಗೂ ಕಾರ್ಯದರ್ಶಿ, ಶಾಲಾ ಮುಖ್ಯಗುರುಗಳಾದ ಸೋಮನಗೌಡ ಪಾಟೀಲ್ ಉಪಸ್ಥಿತರಿದ್ದರು. ಎಲ್ಲಾ ಪ್ರಕ್ರಿಯೆಯ ಉಸ್ತುವಾರಿಯನ್ನು ಜೀವನ್ ಸಾಬ್ ವಾಲಿಕಾರ್ ಬಿ ಆರ್ ಪಿ ವಹಿಸಿ.ಅತ್ಯಂತ ಹಾಸ್ಯ ಚಟಾಕಿ ಹಾಗೂ ಜನಪದ ಗೀತೆ ಹಾಡುವುದರ ಮುಖಾಂತರ ಎಲ್ಲರನ್ನೂ ರಂಜಿಸಿದರು. ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಗೌರವಿಸಿದರು. ಆಯ್ಕೆಯಾದ ಸದಸ್ಯ ಮಹಾದೇವಪ್ಪ ಗಂಗಾಮತ ಶಾಲಾ ಮಕ್ಕಳ ಕಲಿಕೆ ಹಾಗೂ ಅಭಿವೃದ್ಧಿಗೊಸ್ಕರ ಸತತವಾಗಿ ಸೇವೆ ಮಾಡಲು ಸಿದ್ದನಿದ್ದೆನೆ. ಎಂದರು. ನಂತರದಲ್ಲಿ ಶಾಲಾ ಅಭಿವೃದ್ಧಿಗಾಗಿ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ಸಹಕರಿಸಲು ಮುಖ್ಯಗುರುಗಳು ವಿನಂತಿಸಿದರು. ಚಿದಾನಂದಪ್ಪ ಶಿಕ್ಷಕರು ವಂದಿಸಿದರು.. ಸುತ್ತ ಮುತ್ತ ಗ್ರಾಮದ ಪಾಲಕರು ಹಾಜರಿದ್ದರು..
ವರದಿ – ಸಂಪಾದಕೀಯ