ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಬೇಕು– ಕೆ.ಹೆಚ್.ಎಮ್.ಶೈಲಜಾ…..
ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದಲ್ಲಿ,ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯಾಲಯ ಇಲಾಖೆ,ವಕೀಲರ ಸಂಘ ಮತ್ತು ಮಹಿಲಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ.ಮಾ8 ಅಂತರರಾಷ್ಟ್ರೀಯ ಮಹಿಳಾದಿನಾಚರಣೆ ಜರುಗಿತು,ಹಿರಿಯ ಮಹಿಳಾ ನ್ಯಾಯವಾದಿ ಕೆ.ಹೆಚ್.ಏಮ್.ಶೈಲಜಾರವರು ಮಾತನಾಡಿದರು, ಶೇ30ಮೀಸಲಾತಿ ಸಾಲದಾಗಿದ್ದು ಶೇ50ರಷ್ಟು ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಬೇಕಿದೆ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು. ಮಹಿಳೆಗೆ ಕಾನುನಿನಲ್ಲಿ ಮಾತ್ರವಲ್ಲ ಸಾಮಾಜಿಕ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಮಾನ್ಯತೆ ನೀಡಬೇಕು, ಕೇವಲ ಭಾಷಣದಲ್ಲಿ ಕ್ಷೇಮಾಭಿವೃದ್ಧಿ ಯಾಗದೇ ನೈಜ್ಯವಾಗಿ ಕಾರ್ಯಗತವಾದಾಗ ಮಾತ್ರ ಸರ್ವತೋಮುಖ ಏಳ್ಗೆ ಸಾಧ್ಯ ಎಂದರು.ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಹಿರಿಯ ವಕೀಲರಾದ ಹೋಮ ಪಂಡಿತರಾಧ್ಯ,ಸರ್ಕಾರಿ ಸಹಾಕ ಅಭಿಯೋಜಕರಾದ ಹೊಸವಡ್ರು ಅಣ್ಣೇಶ,ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ,ಉಪಾಧ್ಯಕ್ಷ ಟಿ.ಪಾಪಯ್ಯ, ಕಾರ್ಯದರ್ಶಿ ಬಿ.ಸಿದ್ದಲಿಂಗಪ್ಪ,ಸಿಡಿಪಿಓ ಇಲಾಖಾಧಿಕಾರಿ ವೇದಿಕೆಯಲ್ಲಿದ್ದರು. ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ ನಿರೂಪಿಸಿದರು.ಪರಸಪ್ಪ ಸ್ವಾಗತಿಸಿದರು. ನ್ಯಾಯಾಲಯ ಸಿಬ್ಬಂದಿ ಪ್ರಾರ್ಥಿಸಿದರು,ಕಾನೂನು ಸೇವೆಗಳ ಸಮಿತಿ ಸಿಬ್ಬಂದಿ ಹಾಗೂ ನ್ಯಾಯಾಲಯ ಸಿಬ್ಬಂದಿ ಮತ್ತು ಅಂಗನವಾಡಿ ನೌಕರರು ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428