(ಹೆಣ್ಣು ತಾಯಿಯನ್ನುವರು)
ಹೆಣ್ಣಿನ ಗೋಳು ಕೇಳುವರಿಲ್ಲ
ಕಟುಕರು ತುಂಬಿದರು ಜಗದೊಳಗೆಲ
ಹೆಣ್ಣು ತಾಯಿಯೆಂದು ಸಾರುತರಲ್ಲ
ಹೆಣ್ಣಿಗಿಲ ಇಲ್ಲಿ ಆಸರೆಲ್ಲ
ಹೆಣ್ಣು ಎಂದರೆ ಕೀಳು ಮಾಡ್ಯಾರ
ಹೆಣ್ಣುಇಲ್ಲದ ಇವರು ಎಲ್ಲಿಂದಬಂದರು
ಹೆಣ್ಣು ತೋರುತ್ತಾರಾ ಗಾಳಿಗಿ
ಮಣ್ಣಾಗಿ ಹೋಗುತ್ತಾರೆ ನಾಳಿಗಿ
ಹೆಣ್ಣು ಎಂದರೆ ಅರಿವಿಲ್ಲಇವರಿಗೆ
ಕಾಂಚಾಣ ಕೈಯಾಗ ಹಿಡಿದವರಿಗೆ
ಹೆಣ್ಣು ಏನೆಂದು ಕೇಳಿದರೆ
ಕಾಂಚಾಣ ಹೆಸರು ಹೇಳುತಾರೆ
ಇಂಥವರು ತುಂಬಿದರು ಜಗದೊಳಗೆ
ಹೆಚ್ಚು ಆಗಿಹರು ಕಟುಕರು ಇಲ್ಲಿಗೆ
ಕಣ್ಣುಮುಚ್ಚಿ ಕುಳಿತಾವರೇ
ನಮ್ಮ ಕರುನಾಡ ದೇವರೇ
ನಾರಿನಾಳ ಮಾರುತಿ ದೇವರಿಗೆ
ಹೋಗೋಣ ಬನ್ನಿರಿ ಜೋಡಿಗೆ
ಭಕ್ತಿ ಹೊಂದಿಸಿ ಶಿರಬಾಗಿ
ಬರೋಣ ನಾವು ಒಂದಾಗಿ
ಮೌನೇಶ ಇಟಿಗಿ ತಾ.ಕುಷ್ಟಗಿ.ಜಿಲ್ಲಾ.ಕೊಪ್ಪಳ.