ಪಂಚ ನದಿಗಳ ನಾಡಲ್ಲಿ ಎಎಪಿ ವಿಜಯ. ಗೋವಾದಲ್ಲಿ ಕಾಂಗ್ರೇಸ್ ಮತ್ತು ಎಎಪಿ ಸಮ್ಮೀಶ್ರ ಸರ್ಕಾರ ನಡೆಸುವ ಸಾದ್ಯತೆ….
ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಐದು ರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದ್ದು, ಈ ಬಾರಿಯೂ ಕಾಂಗ್ರೆಸ್ ಗೋವಾ ಹೊರತುಪಡಿಸಿ ಇತರ ಕಡೆಗಳಲ್ಲಿ pಹೀನಾಯ ಸೋಲು ಅನುಭವಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಮಣಿಪುರದಲ್ಲಿ ಸರಳ ಬಹುಮತ ಪಡೆದಿದೆ. ಗೋವಾದಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಗೋವಾದ 40 ಸ್ಥಾನಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 16, ಎಎಪಿ 2 ಮತ್ತು ಇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಇಲ್ಲಿ ಸರಕಾರ ರಚನೆ ಇತರರನ್ನು ಅವಲಂಬಿಸಿದೆ. ಉತ್ತರಾಖಂಡ್ ನ 70 ಸ್ಥಾನಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ 21 ಹಾಗೂ ಇತರರು 5 ಸ್ಥಾನಗಳನ್ನು ಪಡೆದಿದ್ದಾರೆ. ಪಂಜಾಬ್ ನಲ್ಲಿ 117 ಸ್ಥಾನಗಳ ಪೈಕಿ ಆಮ್ ಆದ್ಮಿ ಪಾರ್ಟಿ 85 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ದಾಖಲಿಸಿದೆ. ಕಾಂಗ್ರೆಸ್ 16, ಬಿಜೆಪಿ 6 ಮತ್ತು ಎಸ್ ಎಡಿ 9 ಸ್ಥಾನಗಳನ್ನು ಪಡೆದಿದೆ. ಮಣಿಪುರದ 60 ಸ್ಥಾನಗಳ ಪೈಕಿ 44 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 21, ಎನ್ ಪಿಪಿಇ 8, ಎನ್ ಪಿಎಫ್ 4ಮತ್ತು ಇತರರು 6 ಸ್ಥಾನಗಳನ್ನು ಪಡೆದಿದ್ದಾರೆ. ಚಂಡೀಗಢ, ಮಾರ್ಚ್ 10: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಮುನ್ನಡೆಯನ್ನು ಸಾಧಿಸಿದೆ.
ಕಾಂಗ್ರೆಸ್‌ನಿಂದ ಅಧಿಕಾರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವ ಎಲ್ಲಾ ಸಿದ್ಧತೆಯನ್ನು ಎಎಪಿ ಮಾಡಿಕೊಂಡಿದೆ. ಕಳೆದ ಏಳು ದಶಕಗಳಿಂದ ರಾಜ್ಯವನ್ನು ಆಳಿದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಎರಡು ಸಾಂಪ್ರದಾಯಿಕ ಪಕ್ಷಗಳಿಗಿಂತ ಎಎಪಿ ಮುನ್ನಡೆ ಸಾಧಿಸಿದೆ. ಎಎಪಿ ಸಂಭ್ರಮಾಚರಣೆಯನ್ನು ಆರಂಭ ಮಾಡಿದೆ. ಪಂಜಾಬ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ಎಎಪಿ ಅಧಿಕಾರ ಪಡೆಯುವ ಭರವಸೆಯನ್ನು ವ್ಯಕ್ತಪಡಿಸಿದೆ. ಅಷ್ಟು ಮಾತ್ರವಲ್ಲದೇ ಆಮ್ ಆದ್ಮಿ ಪಕ್ಷವು ಈಗಾಗಲೇ ಜಿಲೇಬಿ ಸಿದ್ಧಪಡಿಸಿದ್ದಾರೆ. ಪಕ್ಷದ ಕಚೇರಿಯ ಹೊರಗೆ ಭಗವಂತ್ ಮಾನ್ ಅವರ ಚಿತ್ರವಿರುವ ‘ಥ್ಯಾಂಕ್ಯೂ’ ಎಂಬ ಬ್ಯಾನರ್ ಹಾಕಲಾಗಿದೆ. ಆದರೆ, ಬ್ಯಾನರ್ ಅನ್ನು ಇನ್ನೂ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದೇ ವೇಳೆ ಕಚೇರಿಯನ್ನು ಹೂ, ಬಲೂನ್‌ಗಳಿಂದ ಅಲಂಕರಿಸಲಾಗಿದೆ. ಈ ನಡುವೆ ಪಂಜಾಬ್‌ನಲ್ಲಿ ಎಎಪಿ ಯಾಕೆ ಮುನ್ನಡೆಯಲ್ಲಿದೆ ಎಂಬ ಬಗ್ಗೆ ಪ್ರಶ್ನೆಗಳು ಮೂಡಬಹುದು. ಪಂಜಾಬ್‌ನಲ್ಲಿ ಎಎಪಿ ಮುನ್ನಡೆಗೆ ಬರಲು ಪ್ರಮುಖ ಐದು ಕಾರಣಗಳು ಇದೆ. ಈ ಬಗ್ಗೆ ಇಲ್ಲಿ ವಿವರಿಸಲಾಗಿದ
ಪಂಜಾಬ್ನಲ್ಲಿ ಬದಲಾವಣೆಯ ಕೂಗು
ಪಂಜಾಬ್‌ನಲ್ಲಿ, , ಅಧಿಕಾರವು ಸಾಂಪ್ರದಾಯಿಕವಾಗಿ 1997 ರಿಂದ 2001 ರವರೆಗೆ ಬಿಜೆಪಿಯ ಕೈಯಲ್ಲಿ ಇತ್ತು. 24 ವರ್ಷಗಳ ಮೈತ್ರಿಯಲ್ಲಿ ಎಸ್‌ಎಡಿ ಬಿಜೆಪಿ ಸರ್ಕಾರವನ್ನು ನಡೆಸಿತ್ತು. ಆದರೆ 2007 ಮತ್ತು 2012 ರಲ್ಲಿ ಗೆದ್ದ ಕಾಂಗ್ರೆಸ್ ಪಂಜಾಬ್ ಜನತೆಗೆ ಪರ್ಯಾಯವಾಗಿ ಕಂಡು ಬಂದಿತ್ತು. ರಾಜ್ಯದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಸರ್ಕಾರ ಇದ್ದ ಸಂದರ್ಭದಲ್ಲಿ ಬಾದಲ್ ವಿರುದ್ಧದ ಆರೋಪದ ವಿಚಾರದಲ್ಲಿ ಮೃದು ಧೋರಣೆ ಹೊಂದಿದ್ದರು ಎಂಬ ಆರೋಪವಿದೆ. ಹಾಗೆಯೇ ಅಕಾಲಿಗಳೊಂದಿಗೆ ಸಹಭಾಗಿತ್ವದಲ್ಲಿದೆ ಎಂದು ಆರೋಪಿಸಲಾಗಿದೆ. ಇದು ಕಾಂಗ್ರೆಸ್ ವಿರುದ್ಧದ ಅಲೆಗೆ ಕಾರಣವಾಗಿದೆ. ಬಿಜೆಪಿ, ಎಸ್‌ಎಡಿ, ಕಾಂಗ್ರೆಸ್ ಯಾವುದೇ ಸರ್ಕಾರದಿಂದ ಬದಲಾವಣೆ ಕಾಣದ ಜನರು ಈಗ ಸಾಮಾನ್ಯವಾಗಿ ಎಎಪಿಯತ್ತ ವಾಲಿದ್ದಾರೆ.
ದೆಹಲಿ ಮಾದರಿ ಎಂಬ ಅಲೆ
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಯ ಆಡಳಿತವು ಈಗ ದೇಶದ ಎಲ್ಲಾ ಚುನಾವಣೆಯಲ್ಲಿ ಎಎಪಿಯ ಪ್ರಚಾರದ ಕಾರ್ಯತಂತ್ರವಾಗಿದೆ. ದೆಹಲಿ ಮಾದರಿಯ ಆಡಳಿತದ ನಾಲ್ಕು ಆಧಾರ ಸ್ತಂಭಗಳಾದ ಗುಣಮಟ್ಟದ ಸರ್ಕಾರಿ ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ಅಗ್ಗದ ದರದಲ್ಲಿ ನೀರು ಎಂಬ ವಿಚಾರವನ್ನು ಜನರ ಮುಂದಿಡುವ ಮೂಲಕ ಎಎಪಿ ಈಗ ಗದ್ದುಗೆಯತ್ತ ಹೆಜ್ಜೆ ಇರಿಸಿದೆ. ಪಂಜಾಬ್‌ನಲ್ಲಿ ಮಿತಿಮೀರಿದ ಹೆಚ್ಚಿನ ದರಗಳು ಇರುವ ಈ ಸಂದರ್ಭದಲ್ಲಿ, ಆರೋಗ್ಯ ಮತ್ತು ಶಿಕ್ಷಣ ಖಾಸಗೀಕರಣದ ಸಂದರ್ಭದಲ್ಲಿ ಜನರು ಎಎಪಿಯೇ ಉತ್ತಮ ಆಯ್ಕೆ ಎಂದು ನಿರ್ಧಾರ ಮಾಡಿರುವ ಸಾಧ್ಯತೆ ಇದೆ.
ಯುವಕರು ಹಾಗೂ ಮಹಿಳೆಯರಿಂದ ಎಎಪಿಗೆ ಬೆಂಬಲ
ಎಎಪಿಯು ಪ್ರಮುಖವಾಗಿ ಹೊಸ ಪಕ್ಷ ಮತ್ತು ‘ಆಮ್ ಆದ್ಮಿ’ಗೆ ಅವಕಾಶ ನೀಡಲು ಬಯಸುವ ಯುವಜನರು ಮತ್ತು ಮಹಿಳಾ ಮತದಾರರಿಂದ ಬೆಂಬಲವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಸ್ಥಳೀಯವಾಗಿರುವ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುವ ಕೇಜ್ರಿವಾಲ್‌ರ ಭರವಸೆಯು “ವ್ಯವಸ್ಥೆಯನ್ನು ಬದಲಾಯಿಸಲು” ಉತ್ಸುಕರಾಗಿರುವ ಯುವಕರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಶಿಕ್ಷಣ ಮತ್ತು ಉದ್ಯೋಗದ ವಿಚಾರದಲ್ಲಿ ಎಎಪಿ ನೀಡಿದ ಭರವಸೆಯು ಎಎಪಿಗೆ ಸರ್ಕಾರ ನಡೆಸಲು ಅವಕಾಶ ನೀಡುವ ಎಲ್ಲಾ ಸಾಧ್ಯತೆ ಇದೆ. ಪ್ರತಿ ತಿಂಗಳು ರಾಜ್ಯದ ಮಹಿಳೆಯರ ಖಾತೆಗಳಿಗೆ ತಿಂಗಳಿಗೆ 1,000 ರೂಪಾಯಿಗಳನ್ನು ಜಮಾ ಮಾಡುವ ಎಎಪಿ ಭರವಸೆಯು ಕೂಡಾ ಈ ಸಂದರ್ಭದಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ. ಆದರೆ ಆ ಹೇಳಿಕೆಗಳು ಬರೀ ಚುನಾವಣೆ ಪ್ರಚಾರಕ್ಕೆ ಎಂದು ಕೂಡಾ ಹಲವರು ಟೀಕೆ ಮಾಡಿದ್ದಾರೆ. ಆದರೆ ಎಎಪಿ ಈವರೆಗೆ ಚುನಾವಣಾ ಭರವಸೆಯನ್ನು ಪೂರೈಸುವ ಪ್ರಯತ್ನ ಮಾಡಿರುವುದು ಯುವಕರು ಹಾಗೂ ಮಹಿಳೆಯರು ಎಎಪಿಗೆ ಬೆಂಬಲ ನೀಡಲು ಸಾಧ್ಯವಾಗಿರಬಹುದು.
ಭಗವಂತ್ ಮಾನ್ ಸಿಎಂ ಅಭ್ಯರ್ಥಿ ಆಗಿರುವುದು ಕೂಡಾ ಕಾರಣ..
ಭಗವಂತ್ ಮಾನ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಪಕ್ಷಕ್ಕೆ ತನ್ನ ಪ್ರತಿಸ್ಪರ್ಧಿಗಳು ನೀಡಿದ ಹೊರಗಿನ ಟ್ಯಾಗ್ ಅನ್ನು ತೊಡೆದುಹಾಕಲು ಸಹಾಯ ಮಾಡಿದೆ. ತನ್ನ ರಾಜಕೀಯ ಮತ್ತು ಸಾಮಾಜಿಕ ವಿಡಂಬನೆಯಿಂದ ಅನೇಕ ಪಂಜಾಬಿಗಳ ಹೃದಯದಲ್ಲಿ ಸ್ಥಾನ ಪಡೆದ ಜನಪ್ರಿಯ ಹಾಸ್ಯನಟ ಭಗವಂತ್ ಮಾನ್‌ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದು ಪ೦ಜಾಬ್‌ನಲ್ಲಿ ಎಎಪಿ ನೆಲೆಯೂರಲು ಕಾರಣವಾಗಲಿದೆ.
ವರದಿ – ಸಂಪಾದಕೀಯ