ಜುಮಲಾಪೂರ ದುರ್ಗಾದೇವಿ ಜಾತ್ರಾ ಮಹೋತ್ಸವ. ಎಳೆದರೂ ಭಕ್ತರು ಸಂಭ್ರಮದಿ ಉತ್ಸವ…
ಜುಮಲಾಪೂರ ದುರ್ಗಾದೇವಿ ಜಾತ್ರಾ ಮಹೋತ್ಸವ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ದುರ್ಗಾದೇವಿ ಜಾತ್ರಾ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಭ್ರಮ ಸಡಗರ ಅತಿ ವಿಜೃಂಭಣೆಯಿಂದ ಜರುಗಿತು. ಕೊರೊನ ಮಹಾಮಾರಿಯಿಂದ ಸತತವಾಗಿ ಮೂರು ವರ್ಷಗಳ ಕಾಲ ಮಂಕಾಗಿದ್ದ ಜಾತ್ರೆಗಳಿಗೆ ಕಳೆ ಬಂದಂತಾಗಿದೆ. ಇಂದು ಶ್ರೀ ದುರ್ಗಾದೇವಿಗೆ ವಿಧಿವಿಧಾನದಂತೆ ಬೆಳಗಿನ ಜಾವದಲ್ಲಿ. ದುರ್ಗಾದೇವಿ ಪಲ್ಲಕ್ಕಿ ಯೊಂದಿಗೆ ಹಾಗೂ ಕಳಸದೊಂದಿಗೆ ಗಂಗಿ ಸ್ಥಳಕ್ಕೆ ಹೋಗಿ ಬಂದು ದೆವಾಸ್ಥಾನದಲ್ಲಿ ನಾನಾ ಧಾರ್ಮಿಕ ಪೂಜಾ ಪೂಜೆ ವಿಧಾನಗಳನ್ನು ಸಲ್ಲಿಸಿ ನಂತರ ದೇವಿಯ ಪೂಜಾರಿಗಳು ಅಗ್ನಿ ಪ್ರವೇಶ ಮಾಡಿದರು.
ಅಂದು ಸಾಯಂಕಾಲ ಶ್ರೀ ದುರ್ಗಾದೇವಿಯ ಪಲ್ಲಕ್ಕಿ ಹಾಗೂ ಉತ್ಸವವನ್ನು ಡೊಳ್ಳು ಭಜನೆ ವಾದ್ಯಗಳ ಜೋತೆಗೆ ಸಂಭ್ರಮ ಸಡಗರದಿಂದ ಭಕ್ತರು ಎಳೆದರು. ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾವರಗೇರಾ ಠಾಣೆಯ ಪಿ ಎಸ್ ಐ ಶ್ರೀ ಮತಿ ವೈಶಾಲಿ ಝಳಕಿ. ಎ ಎಸ್ ಐ ಮಲ್ಲಪ್ಪ ವಜ್ರದ ಹಾಗೂ ಸಿಬ್ಬಂದಿ ಇದ್ದರು. ಹಾಗೂ ಊರಿನ ಗುರು/ಹಿರಿಯರು ಯುವಕರು ಭಾಗಿಯಾಗಿದ್ದರು.
ವರದಿ – ಸಂಪಾದಕೀಯ