ಕೂಡ್ಲಿಗಿ  ನ್ಯಾಯಾಲಯ ಆವರಣದಲ್ಲಿ ವಕೀಲನ ಮೇಲೆ ಕೊಲೆ ಯತ್ನ ಆರೋಪಿ ಅಂದರ್, ಕ್ರಮಕ್ಕೆ ವಕೀಲರ ಆಗ್ರಹ-

Spread the love

ಕೂಡ್ಲಿಗಿ  ನ್ಯಾಯಾಲಯ ಆವರಣದಲ್ಲಿ ವಕೀಲನ ಮೇಲೆ ಕೊಲೆ ಯತ್ನ ಆರೋಪಿ ಅಂದರ್, ಕ್ರಮಕ್ಕೆ ವಕೀಲರ ಆಗ್ರಹ

ಕೂಡ್ಲಿಗಿ ನ್ಯಾಯಾಲಯದ ಒಳಾಂಗಣದಲ್ಲಿ.ಇಂದು ಬೆಳಿಗ್ಗೆ ವಕೀಲರೊಬ್ಬರ ಮೇಲೆ ವ್ಯಕ್ತಿಯೋರ್ವ ಚಾಕುವಿನಿದ ಕೊಲೆ ಮಾಡುವ ಪ್ರಯತ್ನ ನಡೆಸಿದ್ದಾನೆ.  ಆರೋಪಿ ಮೋತಿಕಲ್ ತಾಂಡದ ಹನುಮಾನಾಯ್ಕ ಎಂಬಾತನು,ಅದೇ ಗ್ರಾಮದವರಾದ ಯುವ ವಕೀಲರಾದ ಸ್ವರೂಪಾನಂದ ನಾಯ್ಕರ ಮೇಲೆ ಕೊಲೆಯತ್ನದ ಮೇಲೆ ಹಲ್ಲೆ ಮಾಡಿದ್ದಾರೆ. ಕಾರಣ ತಿಳಿದುಬಂದಿಲ್ಲ. ಆರೋಪಿಯು ಬೆಳಂಬೆಳಗ್ಗೆ ಚಾಕುವಿನಿಂದ ಹಲ್ಲೆ ನಡೆಸುವ ಸಲುವಾಗಿ ನ್ಯಾಯಾಲಯದಲ್ಲಿ,ಪ್ರಯತ್ನಿಸಿದ್ದಾನೆ ಸ್ವರೂಪಾನಂದರವ ಮೇಲೆ ಏಕಾಏಕಿ  ದಾಳಿಯಿಂದಾಗಿ ವಕೀಲರಾದ ಸ್ವರೂಪಾನಂದ ತಪ್ಪಿಸಿಕೊಂಡಿದ್ದಾರದರೂ ಹೊಟ್ಟೆಗೆ ಲಘು ಗಾಯವಾಗಿದೆ. ಮತ್ತು ಹೊಟ್ಟೆಯ ಮೇಲೆ ಚಾಕು ಹಾಕಿದಾಗ ಸ್ವರೂಪಾನಂದರವರು ಕೈ ಅಡ್ಡಗಟ್ಟಿದ್ದಾರೆ, ಪರಿಣಾಮ ಚಾಕು ಕೈಗೆ ನಾಟಿದೆ ಮತ್ತು ಅಲ್ಪ ಪ್ರಮಾಣದಲ್ಲಿ ಹೊಟ್ಟೆಗೆ ಗಾಯವಾಗಿದೆ ಈಗ ಅವರು ಕೂಡ್ಲಿಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯನ್ನ ಕೂಡ್ಲಿಗಿ  ವಕೀಲರ ಸಂಘ ಖಂಡಿಸಿದ್ದು, ನಿರ್ಧಾಕ್ಷಿಣ್ಯ ಕ್ರಮಕ್ಕಾಗಿ ವಕೀಲರು ಆಗ್ರಹಿಸಿದ್ದಾರೆ. ಇಂತಹಘಟನೆಗಳು ಜರುಗದಂತೆ ಸೂಕ್ತ ಕ್ರಮಕ್ಕಾಗಿ ವಕೀಲರು ಒತ್ತಾಯಿಸಿದ್ದಾರೆ. ವಕೀಲರ ಮೇಲೆ ಹಲ್ಲೆ ಮಾಡಿರುವ  ಆರೋಪಿಯನ್ನ ನ್ಯಾಯಾಲಯದ ಕೊಠಡಿಯೊಳಗೆ ಕೂಡಿಹಾಕಿ ನಂತರ ಪೋಲೀಸ ವಶಕ್ಕೆ ಒಪ್ಪಿಸಿದ್ದಾರೆ ಸ್ಥಳಕ್ಕೆ ಡಿವೈಎಸ್ಪಿ ಜಿ.ಹರೀಶ್ ಹಾಗೂ ಸಿಪಿಐ ವಸಂತಕುಮಾರ ಅಸೂದೆ ಹಾಗೂ ಕೊಟ್ಟೂರು ಸಿಪಿಐ ದಾವಿಸಿ ಪರಿಶೀಲಿಸಿ ಆರೋಪಿ ವಶಕ್ಕೆ ಪಡೆದಿದ್ದಾರೆ.

✍️- ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *