ಭೂ ಕಬಳಿಕೆ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ದ ಇಂದು ಸಂವಿಧಾನ ಹಿತಾ ರಕ್ಷಣಾ ಸಮಿತಿಯವರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆನಂದಸಿಂಗ್ ರವರಿಗೆ ಮನವಿ……
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು 88.66 ಲಕ್ಷ ಕೋಟಿ ವೆಚ್ಚದ ತುರ್ವಿಹಾಳ ಹತ್ತಿರವಿರುವ ತುಂಗಭದ್ರಾ ಎಡದಂಡೆ ಕಾಲುವೆ ಮೂಲದಿಂದ ಸರಬುರಾಜು ಯೋಜನೆಗೆ ಸಚಿವರ ದಂಡೇ ಆಗಮಿಸಿದ್ದು ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ , ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾದ ರಾಜು ಗೌಡ ಆಗಮಿಸಿದ್ದು, ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಆಗಮಿಸುವ ಸಂದರ್ಭದಲ್ಲಿ ಸರಕಾರಿ ಮತ್ತು ಅರೆ ಸರಕಾರಿ ಜಮೀನುಗಳಲ್ಲಿ ಅಕ್ರಮಗಳ ಕುರಿತು ಸಂವಿಧಾನ ಹಿತಾ ರಕ್ಷಣಾ ಸಮಿತಿ ತಾವರಗೇರಾ ಇವರಿಂದ ಪಟ್ಟಣದ ಸರ್ವೆ ನಂ 52,54,48,49 , ಜೊತೆಗೆ 221/1 ರ ಮದ್ಯ ಭಾಗದಲ್ಲಿ ಬರುವ ಈ ನಿ.ನಿ. ಜಮೀನು, ಅಂದರೆ (ಗೌಂವಠಾಣ) ಸರಕಾರಿ ಜಮೀನು ಇದ್ದು, ಹಾಗೂ ಸರ್ವೆ ನಂ 335,345,352 ರ ಸದರಿ ಜಮೀನಿಗಳು ಕೋಟಿ ಗಟ್ಟಲೆ ಬೆಲೆ ಬಾಳುತಿದ್ದು, ಕೆಲ ಪಟ್ಟಾಭದ್ರಾ ಹಿತಾಸಕ್ತಿಗಳು ತಮ್ಮ ಹೆಸರಿನಲ್ಲಿ ಖಾತೆ ಮಾಡಿಸಿಕೊಂಡಿರುತ್ತಾರೆ.
ಈ ಜಮೀನು ಮುಂದಿನ ಪೀಳಿಗೆಗಾಗಿ ಅತ್ಯವಾಶಕವಾಗಿದ್ದು, ಸದ್ಯ ತಾವರಗೇರಾ ಪಟ್ಟಣದಲ್ಲಿ ಈ ಸರಕಾರಿ ಜಮೀನು ಕೊಟಿಗಟ್ಟಲೆ ಬೆಲೆ ಬಾಳುತ್ತಿದ್ದು, ಈ ಜಮೀನಿನಲ್ಲಿ ಸಾಕಷ್ಟು ಜನರು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿ, ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದು, ರಾಜಕೀಯ ಪ್ರಭಾರಿಗಳು ಸರಕಾರಿ ಜಮೀನುಗಳನ್ನೆ ಗುರಿ (ಟಾರ್ಗೇಟ್) ಮಾಡಿಕೊಂಡು ಸಾಕಷ್ಟು ಬೇನಾಮಿ ಆಸ್ತಿ ಮಾಡಿಕೊಂಡಿರುವ ರಾಜಕೀಯ ಪ್ರಭಾವಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಸರಕಾರಿ ಆಸ್ತಿ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕು, ಗ್ರಾಮ ಪಂಚಾಯತಿಯ ಕಾಯಿದೆ ಪ್ರಕಾರ ಗ್ರಾಮ ಸಭೆ ಮಾಡಿ ಕಡು/ಬಡವ / ನಿರ್ಗತಿಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು , ಆದರೆ ಗ್ರಾಮ ಸಭೆ ಮಾಡದೆ, ಕೆವಲ ಸಾಮಾನ್ಯ ಸಭೆ ಮಾಡಿ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಠರಾವು ಪಾಸು ಮಾಡಿರುವುದು ಕಾನೂನು ಬಾಹಿರವಾಗಿದೆ.
ಈ ಕೂಡಲೇ ಅವರ ಹೆಸರಿನಲ್ಲಿರುವ ಆಸ್ತಿಯನ್ನು ರದ್ದು ಗೊಳಿಸಬೇಕು. ಜೊತೆಗೆ ಅಕ್ರಮವಾಗಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳನ್ನ ತೇರವುಗೊಳಿಸಬೇಕು. ಈ ಸರ್ಕಾರಿ ಜಮೀನನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ತಾವರಗೇರಾ ಪಟ್ಟಣದ ಪಂಚಾಯತಿ ಕಾರ್ಯಲಯಕ್ಕೆ, ಹಾಗೂ ನಾಡ ಕಚೇರಿ ಕಾರ್ಯಲಯಕ್ಕೆ ಜೊತೆಗೆ ತಾಹಶೀಲ್ದಾರ್ ಕಾರ್ಯಲಯಕ್ಕೆ ಹಾಗೂ ಜಿಲ್ಲೆಯ ನಗರಾಭಿವೃದ್ಧಿ ಕೋಶಾಧಿಕಾರಿಗಳ ಕಾರ್ಯಲಯಕ್ಕೆ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಹಲವು ಭಾರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ಮೆರೆಗೆ 07/09/2021 ರಂದು ತಹಶೀಲ್ದಾರ ಸಾಹೇಬರು ಆದೇಶದ ಪ್ರಕಾರ ಸರ್ವೇಯಾದರು ಸಹ ಇಲ್ಲಿಯವರೆಗೂ ಸರ್ವೇ ಮಾಡಿ, ಸ್ಥಳದ ವರದಿ ನಿಡುವಲ್ಲಿ ವಿಫಲರಾಗಿರುತ್ತಾರೆ. ಒಟ್ಟಿನಲ್ಲಿ ಈ ಸರ್ಕಾರಿ ಆಸ್ತಿಗೆ ಸಂಬಂಧಿಸಿದಂತೆ ಸುಮಾರು 5 ವರ್ಷಗಳಿಂದ ಅಂದರೆ 2016 ನೇ ಸಾಲಿನಿಂದ ನಮ್ಮ ಹೋರಾಟ ಹಮ್ಮಿಕೊಂಡಿದ್ದು, ಅಂದಿನಿಂದ ಇಲ್ಲಿಯವರೆಗೂ ಜಿಲ್ಲಾಡಳಿತದಿಂದ ಹಿಡಿದು ತಾಲೂಕು ಆಡಳಿತ ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಈ ವಿಷಯದಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ. ಜೊತೆಗೆ ಈ ಗೌಂವಠಾಣ ಜಮೀನನ್ನು ಉಳಿಸುವ ಸಂಪೂರ್ಣ ಜವಬ್ದಾರಿ ತಮ್ಮದು, ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಈ ಗೌಂವಠಾಣ ಜಮೀನಿನ ಮುಂದೆ ಸರಕಾರಿ ಆಸ್ಥಿ ಉಳಿವಿಗಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಮನವಿ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
ಹಕ್ಕೋತ್ತಾಯಗಳು :-
1)ತಾವರಗೇರಾ ಪಟ್ಟಣ ಪಂಚಾಯತಿಯ ಸದಸ್ಯರಾದವರು ಅಧೀಕಾರ ದುರುಪಯೋಗದಿಂದ ಬೇನಾಮಿ ಆಸ್ತಿ ಮಾಡುವಲ್ಲಿ ಮುಂದಾಗಿದ್ದು ಖಂಡನೀಯ, ತತಕ್ಷಣವೇ ಅಕ್ರಮ ಆಸ್ತಿಯನ್ನು ತಮ್ಮ ವಶಕ್ಕೆ ತಗೆದುಕೊಳ್ಳಬೇಕು.
2) ಸರ್ವೆ ನಂ 335,345,352 ಜಮೀನುಗಳನ್ನು ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ತಮ್ಮ ಹೆಸರಿಗೆ ಖಾತಾ ಮಾಡಿಕೊಂಡಿರುವ ಮೈಬೂಬ ನಾಡಗೌಡರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ಹೂಡಿ ಮೂಲ 11 ಜನ ಖಾತಾದರರ ಹೆಸರಿಗೆ ವರ್ಗಾಯಿಸುವುದು.
3) ಸರಕಾರಿ ಜಮೀನಿನಲ್ಲಿ ಅಂದರೆ 54 ಸರ್ವೇ ನಂಬರನಲ್ಲಿ ಹೋಸದಾಗಿ ಶೇಡು ಹಾಕಿರುವುದನ್ನು ಕೂಡಲೇ ತೆರವುಗೊಳಿಸಬೇಕು,
4) ಸರಕಾರಿ ಜಮೀನಿನಲ್ಲಿ ಅಂದರೆ ಸ.ನಂ 54 ರಲ್ಲಿ ಬರುವ 18 ಎಕರೆ 36 ಗುಂ ಜಮೀನು ಸರ್ವೇಯಾಗಿದೆ, ಕೂಡಲೆ ಹದ್ದು ಬಸ್ತು ಮಾಡಿ ತಮ್ಮ ಇಲಾಖೆ ವ್ಯಾಪ್ತಿಗೆ ವಶ ಪಡೆದುಕೊಳ್ಳಬೇಕು .
5) (ಗೌಂವಠಾಣ) ಸರಕಾರಿ ಜಮೀನಿನಲ್ಲಿ ಕಾನೂನು ಬಾಹೀರವಾಗಿ ಗ್ರಾಂ.ಪಂ ಅಡಿಯಲ್ಲಿ ಅಂದರೆ 2009 ರಲ್ಲಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ಆಸ್ಥಿಯನ್ನು ಪಂಚಾಯತಿ ಡಿಮಾಂಡ ಖಾತೆಯಿಂದ ರದ್ದುಗೊಳಿಸಬೇಕು, ಜೊತೆಗೆ ಈ ಆಸ್ತಿಯನ್ನು ಸರಕಾರಕ್ಕೆ ಒಪ್ಪಿಸಬೇಕು.
6) ಸ.ನಂ 54 ರಲ್ಲಿ ಈ ಹಿಂದೆ ಆದ ಮನೆಗಳನ್ನು ಹೊರತು ಪಡಿಸಿ ಸದ್ಯದಲ್ಲಿ ಅಂದರೆ 2009 ರಿಂದ 2022 ರಲ್ಲಿ ಆದ ಮನೆಗಳು & ಶೇಡ್ಡುಗಳನ್ನು ಕೂಡಲೇ ತೆರವುಗೊಳಿಸಬೇಕು.
7) ಸರ್ವೆ ನಂ 55 ರ ಗಾರಾಯಣ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡವರನ್ನು ತೆರವುಗೊಳಿಸಬೇಕು.
8) ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಭ್ರಷ್ಟರಿಗೆ ಸಾತ್ ನೀಡುವ ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದರು. ಈ ಹೋರಾಟದಲ್ಲಿ ಸಾಗರ ಬೇರಿ, ಮುದುಕಪ್ಪ ಕನ್ನಾಳ, ಗೌತಮ ಭಂಡಾರಿ, ಸಂಜೀವ ಚಲುವಾದಿ, ರಾಜಾ ನಾಯಕ, ರಾಜು ನಾಯಕ, ಹೇಮರಾಜ ವೀರಾಪೂರ, ನಾಗರಾಜ ನಂದಾಪೂರ, ಯಮನೂರಪ್ಪ ಬಿಳೇಗುಡ್ಡ , ದುರಗೇಶ ದೇವರಮನಿ, ಅಲಿ ಹಾದಿಲ್, ಶಂಕರ್ ಜುಮಲಾಪೂರ್, ವಿಜೇಯ ಚಲುವಾದಿ ಇತರರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯ