ಪ್ರಾಥಮಿಕ ಆರೋಗ್ಯ ಕೇಂದ್ರ.ದೋಟಿಹಾಳ ಗ್ರಾಮದಲ್ಲಿಂದು ರಾಷ್ಟ್ರೀಯ ಮಹಿಳಾ ದಿನಾಚರಣೆ ಜೊತೆಗೆ ರಕ್ತದಾನ ಶಿಬಿರ ಯಶಸ್ವಿ :-
ಕುಷ್ಟಗಿ :ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡುವುದರ ಜೊತೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಗೂ ಪಿ ಹೆಚ್ ಸಿ ವೈದ್ಯಾಧಿಕಾರಿಗಳಾದ ಶ್ರೀ ಸಂತೋಷ್ ಕುಮಾರ್ ಬಿರದಾರ. ಹಾಗೂ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಕರ್ನಾಟಕ ಪ್ರಮೋಷನ್ ಟ್ರಸ್ಟ ಸ್ವಯಂ ಸೇವಕರಾದ ಪ್ರಶಾಂತ್ ವಾಲಿಕರ್ ಮತ್ತು ಪ್ರಶಾಂತ್ ಇಲಕಲ್ ಹಾಜರಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹೆಣ್ಣುಮಕ್ಕಳ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು. ತಮ್ಮ ಬದುಕಿಗೆ ಜೀವನದ ಪ್ರತಿಯೊಂದು ಕ್ಷಣದಲ್ಲೂ ಬೆಂಬಲವಾಗಿ ನಿಂತ.ಅಕ್ಕರೆ ತೋರಿದ ನಿಮ್ಮ ಪ್ರೀತಿಪಾತ್ರರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಸಾಧನೆಗೆ ಸ್ಪೂರ್ತಿ ಬದುಕಿಗೆ ದಾರಿ ಕುಟುಂಬದ ಶಕ್ತಿ ಎಲ್ಲರ ಬದುಕಿನಲ್ಲೂ ಪ್ರಮುಖ ಸ್ಥಾನ ಪಡೆದವಳು ಈ ಮಹಿಳೆ ಇಲ್ಲದೆ ಬದುಕೆ ಇಲ್ಲಾ. ಅಮ್ಮನಿಲ್ಲದೆ ಯಾರು ಈ ಜಗತ್ತಿನ ಬೆಳಕು ನೋಡಲು ಸಾಧ್ಯವಿಲ್ಲ ಸೋದರಿಯ ಪ್ರೀತಿಯನ್ನು ಬಣ್ಣಿಸಲು ಪದವೇ ಇಲ್ಲ. ಸಂಗಾತಿ ಇಲ್ಲದೆ ಬದುಕೇ ಶೂನ್ಯ. ಅಮ್ಮ. ಸೋದರಿ. ಸಂಗಾತಿ. ಸ್ನೇಹಿತೆ. ಅಜ್ಜಿ ಶಿಕ್ಷಕಿ ಹೀಗೆ ಪ್ರತಿಯೊಬ್ಬರ ಬಾಳಿನಲ್ಲೂ ಹೆಣ್ಣು ಪ್ರತಿಯೊಂದು ಸ್ಥಾನವನ್ನು ತುಂಬುತ್ತಾಳೆ ಬದುಕಿಗೆ ಚೈತನ್ಯ ಬಲ ತರುತ್ತಾಳೆ ಎಂದು ಮಾತನಾಡಿದರು. ನಂತರ ಪಿ ಆರ್ ಓ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಶ್ರೀ ರವಿಕುಮಾರ್ ದಾನಿ ನಿರ್ದೇಶಕರು ಹಾಗೂ ತಾಲೂಕ್ ಘಟಕದ ಕಾರ್ಯದರ್ಶಿಯಾದ ಶ್ರೀ ಡಾ.ದೇವೇಂದ್ರಪ್ಪ ಇಟ್ನಾಳ ಹಾಗೂ ಸಿಬ್ಬಂದಿಗಳು ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು .ಕೆ ಹೆಚ್ ಪಿ ಟಿ ಸಂಸ್ಥೆಯ ಸ್ವಯಂ ಸೇವಕರಾದ ಶ್ರೀಜುಮ್ಮಣ್ಣ ನವರು ರಕ್ತದಾನವನ್ನು ಮಾಡಿದರು.ಹೀಗೆ ಹಲವಾರು ಜನರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ – ಸಂಪಾದಕೀಯ