ಮನೆ ಬಾಗಿಲಿಗೆ ಕಂದಾಯ ದಾಖಲಾತಿ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ…

Spread the love

ಮನೆ ಬಾಗಿಲಿಗೆ ಕಂದಾಯ ದಾಖಲಾತಿ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ…

ಕಂದಾಯ ದಾಖಲಾತಿಗಳು ತಮ್ಮ ಮನೆ ತಲುಪಿಸುವ ಯೋಜನೆಯಾಗಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾವರಗೇರಾ ಪಟ್ಟಣದ ಉಪ-ತಹಸೀಲ್ದಾರ ಕರೆ ನೀಡಿದರು. ಶನಿವಾರದಿನದೊಂದು ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ‌ಮನೆ ಬಾಗಿಲಿಗೆ ಕಂದಾಯ ದಾಖಲಾತಿಗಳನ್ನು ಮನೆ ಮನೆಗೆ ತೆರಳಿ ದಾಖಲಾತಿ ನೀಡುತ್ತಾ ಮಾತನಾಡಿದ ಉಪ-ತಹಶೀಲ್ದಾರರು, ತಮ್ಮ ದೈನಂದಿನ ದಿನದ ಕೆಲಸ ಕಾರ್ಯಗಳನ್ನು ಬಿಟ್ಟು ಕಛೇರಿಗಳಿಗೆ ಅಲೆದಾಟವನ್ನು ತಪ್ಪಿಸಲು ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಪ್ಲಾಸ್ಟಿಕ್ ಕವರ್ ನಲ್ಲಿನ ದಾಖಲಾತಿಗಳನ್ನು ಫಲಾನುಭವಿಗಳಿಗೆ ಉಪ-ತಹಸೀಲ್ದಾರ ನೀಡಿ ಚಾಲನೆ ನೀಡಿದರು. ಈ ಕಂದಾಯ ದಾಖಲಾತಿ ನೀಡಿಕೆ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಉಪ-ತಹಶೀಲ್ದಾರರಾದ ಶ್ರೀಮತಿ ವಿಜೇಯಲಕ್ಷ್ಮೀಯವರು, ಹಾಗೂ ಕಂಧಾಯ ಇಲಾಖೆಯ ಸೂರ್ಯಕಾಂತರವರು ಜೊತೆಗೆ ಶ್ರೀಶೈಲ್ ಮಲ್ಲಿಕಾರ್ಜುನರವರು, ಸಿಬ್ಬಂದಿ ವರ್ಗದವರು ಪಾಲ್ಗೊಂಡು ಪಟ್ಟಣದ ಹೋರಾಟಗಾರರ ಜೊತೆಗೆ ಹಳ್ಳಿಯ ರೈತರಿಗೆ ಮನೆ ಬಾಗಿಲಿಗೆ ಕಂದಾಯ ದಾಖಲಾತಿಗಳನ್ನು ನೀಡುವ ಮೂಖಂತರ ಚಾಲನೆ ನೀಡಿದರು. ಸಾಗರ ಬೇರಿ, ನಾಗರಾಜ ನಂದಾಪುರ, ಹೇಮರಾಜ್ ವೀರಾಪುರ, ಯಮನೂರಪ್ಪ ಬಿಳೆಗುಡ್ಡ, ಗೌತಮ್ ಭಮಡಾರಿ, ಮುದುಕಪ್ಪ ಕನ್ನಾಳ, ರಾಜುಗೌಡ ನಂದಾಪುರ, ಸಂಜೀವ್ ಚಲುವಾದಿ, ದುರಗೇಶ ದೇವರ ಮನಿ ಇತರರು ಸೇರಿದಂತೆ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು. ಉಪ-ತಹಶೀಲ್ದಾರರಾದ ಶ್ರೀಮತಿ ವಿಜೇಯ ಲಕ್ಷ್ಮೀಯವರು ವಿಶೇಷವಾಗಿ ಈ ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕು, ನಮ್ಮ ಇಲಾಖೆಯಲ್ಲಿ ಯಾರಾದರು ಕರ್ತವ್ಯದಲ್ಲಿ ನಿರ್ಲಕ್ಷವಹಿಸಿದರೆ ನಮ್ಮನ್ನು ನೇರವಾಗಿ ಸಂಪರ್ಕಿಸಿ ಎಂದು ರೈತರಿಗೆ ಭರವಶೆ ನೀಡಿದರು

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *