*‘ಸ್ಕೂಲ್ ಡೇಸ್’ ಚಿತ್ರೀಕರಣ ಮುಕ್ತಾಯ*

Spread the love

*‘ಸ್ಕೂಲ್ ಡೇಸ್ ಚಿತ್ರೀಕರಣ ಮುಕ್ತಾಯ*

ಬೆಂಗಳೂರ : ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ   ಪ್ರಥಮ ಚಿತ್ರ ‘ಸ್ಕೂಲ್ ಡೇಸ್ ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರಿನ ವಿಜಯನಗರ ಸುತ್ತಮುತ್ತ ನಡೆದು ಮುಕ್ತಾಯಗೊಂಡಿದೆ. ಸುಮಾರು ಮೂವತ್ತು ದಿನಗಳ ಕಾಲ ಬೆಳಗಾವಿ, ಹಿರೇಬಾಗೇವಾಡಿ, ಬಿ.ಕೆ.ಇಟಗಿ, ಅನಂತಮ್ ಅಗ್ರೊ ಅರಣ್ಯ ರೆಸಾರ್ಟ ಬೆಳದಡಿ, ಸಿದೊಳ್ಳಿ ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಅಂತಿಮ ಹಂತದ ಚಿತ್ರೀಕರಣವನ್ನು ಮಾತ್ರ ಬೆಂಗಳೂರಲ್ಲಿ ಮಾಡುತ್ತಿದ್ದೇವೆ ಕಿತ್ತೂರ ಕರ್ನಾಟಕದ ಅಪ್ಪಟ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ .ಇಲ್ಲಿ ಪ್ರತಿಭಾನ್ವಿತ ಕಲಾವಿದರಿದ್ದು ಅವರಿಗೆ ಅವಕಾಶ ನೀಡಲಾಗಿದೆ ಎಂದು ನಿರ್ದೇಶಕ ಸಂಜಯ್ ಹೇಳಿದರು. ಪಾತ್ರವರ್ಗದಲ್ಲಿ ಪತ್ರಕರ್ತ ಸೋಮಶೇಖರ ಸೊಗಲದ, ವಿದ್ಯಾ ತಿರಕಿ, ಡಾ.ಸ್ಪೂರ್ತಿ ಎಸ್ ಮಾಸ್ತಿಹೊಳಿ,ಸಂದೀಪ ಎಸ್ ಎಂ, ಅನಿಕೇತಗೌಡ ಪಾಟೀಲ, ಸಂಗಮ ಮಠದ, ದಾನೇಶ್ ಎಂ.ಡಿ, ರೋಹನ್ ಪುರಾಣಿಕಮಠ, ಪ್ರಣವ್ ಪುರಾಣಿಕಮಠ, ರಮ್ಯಾ ಪುರಾಣಿಕಮಠ, ನಮ್ರತಾ ಅಗಸಿಮನಿ, ಸಾಕ್ಷಿ ಅಗಸಿಮನಿ, ಬಳ್ಳಾರಿ ಅರ್ಜುನ, ಪ್ರಿಯಾ, ನೇಹಾ, ಪ್ರತೀಕ, ಅನಿಲ, ಹನುಮಂತ, ವೀರೇಂದ್ರ , ವಿವೇಕ  ಮೊದಲಾದವರಿದ್ದಾರೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕಿದೆ .ಇದರಲ್ಲಿ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕರಾದ ಮದನ್ ಹರಿಣಿಯವರು ಮೂರು ಹಾಡುಗಳಿಗೆ ಅತ್ಯಂತ ಮನೋಜ್ಞವಾಗಿ ನೃತ್ಯ ಸಂಯೋಜಿಸಿದ್ದಾರೆ. ಪ್ರೇಕ್ಷಕರು ನಮಗೆ ಖಂಡಿತ ಬೆಂಬಲಿಸುತ್ತಾರೆ ಎಂದು ನಿರ್ಮಾಪಕ ಉಮೇಶ ಹೇಳುತ್ತಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಕೃಷ್ಣ  ಎ.ಆರ್. ಸಂಕಲನ ಕೆ ಗಿರೀಶ್, ಮೇಕಪ್ ಕೀರ್ತಿ ಮತ್ತು  ನಾಗೇಶ್ ಜೀವಾ, ಸಂಗೀತ  ಕೆ.ಎಂ.ಇಂದ್ರ, ಕೋರಿಯೋಗ್ರಫಿ ಖ್ಯಾತ ನೃತ್ಯ ನಿರ್ದೇಶಕರಾದ ಮದನ್ ಹರಿಣಿ,   ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ಸೋಮಶೇಖರ ಸೊಗಲದ, ವಿಶ್ವಪ್ರಕಾಶ ಮಲಗೊಂಡ, ಸಹ  ನಿರ್ದೇಶನ ಅಭಿಷೇಕ ಮೆರಕುಂಬಿ, ಕ್ರಿಯೇಟಿವ್ ಹೆಡ್ ರಂಜಿತ ತಿಗಡಿ,  ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ಯುವ ಉತ್ಸಾಹಿ ನಿರ್ದೇಶಕ ಸಂಜಯ್ ಎಚ್. ಅವರದಿದ್ದು, ನಿರ್ಮಾಪಕರು ಉಮೇಶ ಹಿರೇಮಠ ಆಗಿದ್ದಾರೆ.  ವರದಿ-ಡಾ.ಪ್ರಭು ಗಂಜಿಹಾಳ-9448775346

Leave a Reply

Your email address will not be published. Required fields are marked *