ಮನೆ ಮನೆ ಬಾಗಿಲಿಗೆ ಕಂದಾಯ ದಾಖಲೆ ಅನುಷ್ಠಾನ..

Spread the love

ಮನೆ ಮನೆ ಬಾಗಿಲಿಗೆ ಕಂದಾಯ ದಾಖಲೆ ಅನುಷ್ಠಾನ..

ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ತಲುಪಿಸುವ ಕಂದಾಯ ದಾಖಲೆಗಳ ಲಕೋಟೆಯನ್ನು ಗ್ರಾಮಲೆಕ್ಕಾಧಿಕಾರಿ ಕುಮಾರ್ ಪರಸಾಪುರ ಅವರು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ರೈತರ ಮನೆಗೆ ಕಂದಾಯ ದಾಖಲೆ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಮಾಹಿತಿ ತಿಳಿಸಿದರು, ಜಿಲ್ಲೆಯ 6000 ರೆವೆನ್ಯೂ ಗ್ರಾಮಗಳಲ್ಲಿ ಕಂದಾಯ ದಾಖಲೆಯನ್ನು ವಿತರಿಸಲಾಗುತ್ತದೆ ಒಂದು ವೇಳೆ ರೈತರ ಮನೆಗೆ ತಲುಪದೇ ಇರುವವರಿಗೆ ಒಂದು ವಾರದ ಒಳಗೆ ಉಚಿತವಾಗಿ ಹಂಚಿಕೆ ಮಾಡಲಾಗುತ್ತದೆ ಎಂದರು, ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ 1 ನೇಯ ವಾರ್ಡಿನ ನಲ್ಲಿ ಗ್ರಾಂ ಪಂಚಾಯಿತಿ ಅಧ್ಯಕ್ಷರು ಭಾರತಿ ಚಲವಾದಿ ಅವರು ಚಾಲನೆ ನೀಡುವ ಮೂಲಕ ಮಾತನಾಡಿ, ಕೊಪ್ಪಳ ಜಿಲ್ಲೆಯ ತಾಲೂಕಿನಾದ್ಯಂತ ಪಹಣಿಗಳು ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಜಮೀನು ನಕ್ಷೆ ಎನ್ವಲಪ್ ಕವರ್ ಗಳನ್ನು ಕಂದಾಯ ದಾಖಲೆಗಳು ಮನೆಬಾಗಿಲಿಗೆ ಬಂದಿದೆ ಎಂದು ಹೇಳಿದರು, ಇದೇ ಸಂದರ್ಭದಲ್ಲಿ ಗ್ರಾಂ ಉಪಾಧ್ಯಕ್ಷರು ಚಂದ್ರಬಾಯಿ ಕುದುರೆ, ಅಂಗನವಾಡಿ ಶಿಕ್ಷಕಿ ಲಲಿತ ಜಗ್ಗಲ್ ಶಿವಪ್ಪ ಸೂಡಿ ಮಂಜುನಾಥ್ ಮುರುಡಿ ಶಿಕ್ಷಕರು, ಶಿವರಡ್ದೆಪ್ಪ ರೆಡ್ಡೇರ ಎಸ್ಡಿಎಂಸಿ ಅಧ್ಯಕ್ಷ ಕಳಕಪ್ಪ ಹಿರೇಹಾಳ್ ಗ್ರಾಂ ಸದಸ್ಯ ಬಾಷುಸಾಬ್ ಆರಬಳ್ಳಿನ ಶಿವಾನಂದ ಚಲವಾದಿ, ಗ್ರಾಮ ಸಹಾಯಕ ಮಹಾಂತೇಶ್  ಪೀರ್ ಸಾಬ್ ಕಿನ್ನಾಳ, ಇನ್ನು ಹಲವಾರು ರೈತಾಪಿ ಬಂಧುಗಳು ಭಾಗವಹಿಸಿದ್ದರು,

ವರದಿ – ಹುಸೇನಬಾಷ್ ಮೊತೇಖಾನ್

Leave a Reply

Your email address will not be published. Required fields are marked *