ಯಾರಿಗೂ ತೊಂದರೆಯಾಗದಂತೆ ಹೋಳಿ ಹಬ್ಬ ಆಚರಿಸಿ : ಸಿಪಿಐ–ಎಂ ನಾಗರೆಡ್ಡಿ..
ಯಲಬುರ್ಗ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ನಿಮಿತ್ಯ ಅನ್ಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪ್ರತಿಯೊಬ್ಬರೂ ಸೌಹಾರ್ದತೆ ಕಾಪಾಡುವ ಉದ್ದೇಶ ನಮ್ಮದಾಗಿರಬೇಕು ಮುಂಬರುವ ಹೋಳಿ ಹಬ್ಬವನ್ನು ಸಂಭ್ರಮದಿಂದ ಮನೆಯಲ್ಲಿ ಆಚರಿಸಿ ಯಾರಿಗೂ ಸಮಸ್ಯೆಯಾಗದಂತೆ ಮಾಡಬೇಡಿ ಏನಾದರೂ ಸಮಸ್ಯೆ ಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಲ್ಲದಕ್ಕೂ ಈ ಪೊಲೀಸ್ ಇಲಾಖೆ ನಿಮ್ಮ ಜೊತೆಗೆ ಇದೆ ಎಂದು ಯಲಬುರ್ಗಾ ಸಿಪಿಐ-ಎಂ ನಾಗರೆಡ್ಡಿ ಹೇಳಿದರು, ಹಬ್ಬದ ಆಚರಣೆ ಎಲ್ಲರ ಹಕ್ಕು ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಈ ಹೋಳಿ ಹಬ್ಬವೊ ನಡೆಯಬೇಕಿದೆ, ಎಲ್ಲರೂ ಆಸಕ್ತರಿಗೆ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಆಚರಿಸಿ ಇಲ್ಲವಾದಲ್ಲಿ ಸಾರ್ವಜನಿಕರಿಗೆ ಯಾರು ತೊಂದರೆ ನೀಡಬೇಡಿ, ಈಗಿನ ಯುವಕರು ಆರೋಗ್ಯಕ್ಕೆ ಮಾರಕ ಆಗುವಂತಹ ಬಣ್ಣಗಳನ್ನು ಬಳಸಬೇಡಿ ಹಾಗೂ ಮೊಟ್ಟೆ ತಮೋಟೋ ಬಳಕೆ ಮಾಡದೆ ಶಾಂತಿಯುತವಾಗಿ ಆಚರಿಸಿ ಎಂದು ಹೇಳಿದರು, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ್ ಬಾವಿಮನಿ ಪ್ರಾಸ್ತವಿಕವಾಗಿ ಮಾತನಾಡಿದರು, ಇದೇ ಸಂದರ್ಭದಲ್ಲಿ ಮುಖಂಡರಾದ ಪಪಂ ಅಧ್ಯಕ್ಷ ಅಮರೇಶ್ ಹುಬ್ಬಳ್ಳಿ ಅಂದನ ಗೌಡ ಉಳ್ಳಾಗಡ್ಡಿ ರವಿ ಕಲಬುರ್ಗಿ ಪಪಂ ಸದಸ್ಯ ಅಂದಯ್ಯ ಕಳ್ಳಿ ಮಠ ಮುಸ್ಲಿಂ ಕಮಿಟಿಯ ವಿವಿಧ ಮುಖಂಡರು ಸಂಘ-ಸಂಸ್ಥೆಗಳು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವರದಿ – ಹುಸೇನಬಾಷ ಮೊತೇಖಾನ್