ಕಂಪ್ಲಿ ಕೊಟ್ಟಾಲ್ ರಸ್ತೆಗೆ ಪುರಸಭೆಯಿಂದ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ನಿರ್ಣಯ, ಹೈ ಕೋರ್ಟ್ ಸಿಜಿಸಿಯಿಂದ ಅಭಿನಂದನೆ!
ಡಿ: 14 ಕಂಪ್ಲಿ, ಇತ್ತೀಚಿಗೆ ನಡೆದ ಕಂಪ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಂಪ್ಲಿಯ ಪ್ರಮುಖ ರಸ್ತೆ ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ಕೊಟ್ಟಾಲ್ ಗೆ ಹೋಗುವ ರಸ್ತೆಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರಸ್ತೆಯೆಂದು ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸಹಮತ ನೀಡಿ ನಿರ್ಣಯ ಹೊರಡಿಸಿದ ಕ್ರಮಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ. ಮೋಹನ್ ಕುಮಾರ್ ದಾನಪ್ಪನವರು ಅಭಿನಂದಿಸಿದ್ದಾರೆ ರಾಜ್ಯ ಮತ್ತು ದೇಶದ ಪ್ರಖ್ಯಾತ ನಟ ಕಲೆ, ಶಿಕ್ಷಣ ಮತ್ತು ಸಮಾಜ ಸೇವೆಯ ಮೂಲಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿ ಇತ್ತಿಚ್ಚೆಗೆ ಹೃದಯಘಾತದಿಂದ ಆಗಲಿದ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ ಸ್ಮರರ್ಣಾಥವಾಗಿ ಕಂಪ್ಲಿಯ ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ಕೊಟ್ಟಾಲ್‌ಗೆ ಹೋಗುವ ಪ್ರಮುಖ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡುವಂತೆ ದಿನಾಂಕ: 4-11-2021 ರಂದು ಒತ್ತಾಯಿಸಿ ಪುರಸಭೆ ಕಛೇರಿಗೆ ಮನವಿ ಪತ್ರ ಸಲ್ಲಿಸಿದ್ದರು, ಸದರಿ ಮನವಿ ಪತ್ರಕ್ಕೆ ಸ್ಪಂದಿಸಿ ದಿ: 9-3-2022 ರಂದು ನಡೆದ ಕಂಪ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸರ್ವಸದಸ್ಯರ ಸಹ ಮತ ಪಡೆದು ಕೊಟ್ಟಾಲ್ ರಸ್ತೆಗೆ ಪುನೀತ್ ರ ಹೆಸರನ್ನು ನಾಮಕರಣವನ್ನ ಮಾಡಲು ಅಧಿಕೃತವಾಗಿ ನಿರ್ಣಯ ಹೊರಡಿಸಿರುವುದು ವೈಯಕ್ತಿಕವಾಗಿ ಮತ್ತು ಕಂಪ್ಲಿ ನಗರದ ಪುನೀತ್ ರಾಜ್ ಕುಮಾರ್ ರವರ ಅಪಾರ ಅಭಿಮಾನಿ ಬಳಗಕ್ಕೆ ಸಂತಸ ನೀಡಿದ್ದು ಪುರಸಭೆಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ಕಾರ್ಯವನ್ನ ಮೆಚ್ಚಿ ಸಿಜಿಸಿ ಡಾ. ಮೋಹನ್ ಕುಮಾರ್ ದಾನಪ್ಪನವರು ಪತ್ರದ ಮೂಲಕ ಅಭಿನಂದನೆ ಸಲ್ಲಿಸಿ, ಇದೇ ತಿಂಗಳು ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ರವರ ಜನ್ಮದಿನದಂದು ಸದರಿ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರ ನಾಮವಿರುವ ಫಲಕವನ್ನ ಹಾಕುವ ಅಥವಾ ಈ ರಸ್ತೆಯ ಕೆಲವು ಮಳಿಗೆಗಳಿಗೆ ಪುನೀತ್ ರ ಹೆಸರನ್ನು ಬರೆಸುವ ಮುಖಾಂತರವಾಗಲಿ ಅಥವಾ ಈ ರಸ್ತೆಯ ಪ್ರಮುಖ ಗೋಡೆಗೆ ಹೆಸರನ್ನು ಬರೆಸುವ ಮುಖಾಂತರ ಅಧಿಕೃತವಾಗಿ ಚಾಲನೆಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
ವರದಿ – ಮಹೇಶ ಶರ್ಮಾ