ವಿಶ್ವಕ್ಕೆ ಕಾನೂನು ನೀಡಿದ ತಜ್ಞವಿಜ್ಞಾನೇಶ್ವರ….
ಹುಮನಾಬಾದ: ಆರನೆಯ ವಿಕ್ರಮಾದಿತ್ಯನ ಆಸ್ಥಾನದ ಗುರು ವಿಜ್ಞಾನೇಶ್ವರ ಅವರು ಮಿತಾಕ್ಷರಿ ಸಂಹಿತೆ ಹಿಂದೂ ಬಿಲ್ ಕೊಡ್ ಕೊಟ್ಟ ಕವಿ.ಪ್ರಕೃತಿಯ ಕುರಿತು ಸಮಾಜದ ವಿವಿಧ ಸ್ತರಗಳಲ್ಲಿ ಸಂಹಿತಿ ನೀಡಿದ ಕಾನೂನು ತಜ್ಞ ಮಾಸಿಮಾಡು ಗ್ರಾಮದವರು ನಮ್ಮ ಬೀದರ ಜಿಲ್ಲೆಯವರು ಎಂಬ ಹೆಮ್ಮೆ ಇದೆ.ವಿಶ್ವಕ್ಕೆ ಹಿಂದೂ ಕಾನೂನು ಇದಾಗಿದ್ದು ಇಂತಹ ಕಾನೂನು ನೀಡಿದ ಅಪೂರ್ವ ತಜ್ಞ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮಹಾಬಳೇಶ್ವರಪ್ಪ ನುಡಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಏರ್ಪಡಿಸಿದ ವಿಜ್ಞಾನೇಶ್ವರರ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ ಮಾತನಾಡಿದರು ಅವರು.ಸ್ತ್ರೀ ಆರ್ಥಿಕ ಸಬಲೀಕರಣ,ಪ್ರಕೃ ತಿ ಆರಾಧನೆ,ಸಂವಿಧಾನಕ್ಕೆ ಪೂರಕವಾದ ವಿಚಾರ ಗಳನ್ನು ವಿಜ್ಞಾನೇಶ್ವರ ಮಿತಾಕ್ಷರಿ ಸಂಹಿತೆದಲ್ಲಿ ನೀಡಿದ್ದಾನೆ ನಾವೆಲ್ಲ ಅವರ ವಿಚಾರಧಾರೆ ಅರಿತು ಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ವೀರಣ್ಣ ತುಪ್ಪದ ವಹಿಸಿ ನಮ್ಮ ಸಂಹಿತೆಗಳನ್ನು ನಾವು ಅರಿತುಕೊಳ್ಳಬೇಕು ಎಷ್ಟೋ ನಮ್ಮ ಜಿಲ್ಲೆಯ ಮಾಹಿತಿಗಳು ನಮಗಿಲ್ಲ.ವಿಜ್ಞಾನೇಶ್ವರರು ಕಾನೂನಿಗೆ ಕೊಟ್ಟ ಜೊಡುಗೆ ಅಪಾರ.ನಮ್ಮ ವಿದ್ಯಾರ್ಥಿಗಳು ನಾಲ್ಕು ಗೋಡೆ ಉಪನ್ಯಾಸದ ಜೊತೆ ಹಲವು ಶಾಖೆಗಳ ಜ್ಞಾನ ಬೇಕು ಇಂತಹ ಉಪನ್ಯಾಸ ಮಕ್ಕಳಿಗೆ ಅವಶ್ಯವೆಂದರು. ಹಿರಿಯ ವೈದ್ಯ ಡಾ.ಕರ್ಪೂರ ಮಲ್ಲಪ್ಪ,ಹಿರಿಯ ಜಾನಪದ ತಜ್ಞ ಎಚ್.ಕಾಶೀನಾಥ ರೆಡ್ಡಿ,ನೇತ್ರ ತಜ್ಞ ಡಾ.ಕೆ.ಚಂದ್ರಕಾಂತ,ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ,ಕವಿ ವಿಜಯಕುಮಾರ ಚಟ್ಟಿ, ಕನ್ನಡ ಸಿರಿ ಅಧ್ಯಕ್ಷ ಸಂಗಮೇಶ ಇದ್ದರು ಡಾ.ಜಯದೇವಿ ಗಾಯಕವಾಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಯಾಡಿದರು. ಡಾ.ಐಶ್ವರಿ ನಿರೂಪಿಸಿದರು ಪೂಜಾರಿ ವಂದಿಸಿದರು
ವರದಿ – ಸಂಗಮೇಶ ಎನ್ ಜವಾದಿ.