ಕುಷ್ಟಗಿ ಮಾಜಿ ಶಾಸಕ ಡಿ ಎಚ್ ಪಾಟೀಲರಿಂದ. ಜುಮಲಾಪೂರ SSLC ಪೂರ್ವ ಪರಿಕ್ಷಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ. ಹಾಗೂ ಬಿಳ್ಕೊಡುವ ಸಮಾರಂಭವನ್ನು ವೀರ ಯೋಧನಿಂದ ಉದ್ಘಾಟನೆ..

Spread the love

ಕುಷ್ಟಗಿ ಮಾಜಿ ಶಾಸಕ ಡಿ ಎಚ್ ಪಾಟೀಲರಿಂದ. ಜುಮಲಾಪೂರ SSLC ಪೂರ್ವ ಪರಿಕ್ಷಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ. ಹಾಗೂ ಬಿಳ್ಕೊಡುವ ಸಮಾರಂಭವನ್ನು ವೀರ ಯೋಧನಿಂದ ಉದ್ಘಾಟನೆ..

ಸರಕಾರಿ ಪ್ರೌಢ ಶಾಲೆ ಜುಮಲಾಪುರದಲ್ಲಿ ಇಂದು ಮಹಾಸರಸ್ವತಿ ಪೂಜೆ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಇದ್ಲಾಪುರ ಗ್ರಾಮದ ವೀರಯೋಧ, ಸೇನಾನಿ ಬಸವರಾಜ್ ಬಿಸ್ನಾಳ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ರಾಷ್ಟ್ರೀಯ ಸೇವೆ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನಕಪ್ಪ ನಾಯಕ್ ಎಸ್ಡಿಎಂಸಿ ಅಧ್ಯಕ್ಷರು ವಿದ್ಯಾರ್ಥಿಗಳಿಗೆ  ಉತ್ತಮ ರೀತಿಯಲ್ಲಿ ಅಭ್ಯಸಿಸಿ ಗುರುಗಳ, ಶಾಲೆಯ, ತಂದೆ-ತಾಯಿಗಳ, ಊರಿನ ಕೀರ್ತಿ ಹೆಚ್ಚಿಸಬೇಕೆಂದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಇವರು ಕೊಡಮಾಡಿದ್ದ ಪ್ರೋತ್ಸಾಹಧನವನ್ನು ರಾಜ್ಯಮಟ್ಟದ ಎಸೆಸೆಲ್ಸಿ  ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನಾಲ್ಕು ಜನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಖಂಡರಾದ ನಿಂಗಪ್ಪ ನಾಯಕ್ ಅಮರೇಗೌಡ ಬಿಸ್ನಾಳ್, ಗ್ರಾಮದ ಯುವಕರು ಶಿಕ್ಷಕರು ಭಾಗವಹಿಸಿದ್ದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕುಷ್ಟಗಿ ಬಿಆರ್ಸಿ ಸಂಪನ್ಮೂಲ ವ್ಯಕ್ತಿ ಜೀವನ್ ಸಾಬ್ ವಾಲಿಕಾರ್ ಮಾತನಾಡಿ ಜಾನಪದ ಸಾಹಿತ್ಯ ಹಳ್ಳಿಗಳಲ್ಲಿ ಅಡಗಿದೆ, ಮನೆ ಮನೆಯಲ್ಲಿ, ಬೀದಿ  ಬೀದಿಯಲ್ಲಿ ಅಡಗಿದೆ, ಅದನ್ನು  ಪೋಷಿಸಿ ಬೆಳೆಸುವ ಕರ್ತವ್ಯ ನಮ್ಮ-ನಿಮ್ಮೆಲ್ಲರಿಂದ ಆಗಬೇಕೆಂದರು. ಅನೇಕ ಜಾನಪದ ಗೀತೆಗಳನ್ನು ಗಾದೆಮಾತುಗಳನ್ನು ಒಗಟುಗಳು ಬೀಸುಕಲ್ಲು ಪದ ಗೀಗಿಪದ ಹಾಡಿ ಮಕ್ಕಳನ್ನು ರಂಜಿಸಿದರು. ಆ ಮೂಲಕ ತಾತ್ವಿಕ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಬೈಲ್ ಗೀಳು ಬಿಟ್ಟು ಚೆನ್ನಾಗಿ ಅಭ್ಯಸಿಸಲು ಹೆಚ್ಚಿನ ವ್ಯಾಸಂಗ ಮಾಡಿ ಎತ್ತರಕ್ಕೆ ಬೆಳೆಯಲು ಕಿವಿಮಾತು ಹೇಳಿದರು. ವರ್ಷವಿಡೀ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಕ್ಕಮ್ಮ ಶಿಕ್ಷಕಿ ನಿರ್ದೇಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ವಿದ್ಯಾರ್ಥಿಗಳು ಉತ್ತಮವಾಗಿ ಪ್ರದರ್ಶಿಸಿದರು. ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು  ಪಾಂಡಪ್ಪ ಮಲ್ಲಪ್ಪ ಗಂಗಾಮತ 10 ನೆಯ ತರಗತಿ ವಿದ್ಯಾರ್ಥಿಗೆ ಪ್ರಧಾನ ಮಾಡಲಾಯಿತು. ಮುಖ್ಯಗುರುಗಳಾದ ಸೋಮನಗೌಡ ಪಾಟೀಲ್  ಸಮಾರೋಪ ಭಾಷಣ ನೆರವೇರಿಸಿ  ಪ್ರತಿವರ್ಷದಂತೆ ಈ ವರ್ಷವೂ ಉತ್ತಮ ಫಲಿತಾಂಶ ಗಳಿಸಿ ಶಾಲೆಗೆ, ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ಉಚಿತವಾಗಿ ಪೆಂಡಾಲ್ ಸೇವೆ ನೀಡಿದ ಅಮರೇಶ್ ಗಂಗಾಮತ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಬಸವರಾಜ್ ಬಾಗಲಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್ ಗೊರೆಬಾಳ ಸ್ವಾಗತಿಸಿದರು. ಚಿದಾನಂದಪ್ಪ ವಂದಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *