ಕುಂದಗೋಳ: ಮಹಿಳೆಯರೇ ಸ್ವಯಂ ಉದ್ಯೋಗ ಬಗ್ಗೆ ಯೋಚಿಸಿ..!
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳರ ದಿನ ಪ್ರತಿ ವರ್ಷ ಮಾರ್ಚ 8ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹಾಗೇ ಹೀರಿನರ್ತಿ ಗ್ರಾಮದ ಮಹಿಳೆಯರು ಸೇರಿ ಮಹಿಳಾ ದಿನಾಚರಣೆ ಹಾಗೂ ಸ್ತ್ರೀ ಶಕ್ತಿ ಒಕ್ಕೂಟ ಸಭೆ ಏರ್ಪಡಿಸಿದ್ದೀರು, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸತೀಶ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ, ಮಾನಸಿಕವಾಗಿ ಸದೃಡಗೂಳಬೇಕಂದರೆ ಸ್ವಯಂ ಉದ್ಯೋಗ ಆಯ್ದುಕೂಳ್ಳಬೇಕು ಅವುಗಳೆಂದರೆ. ಮೇಣದ ಬತ್ತಿ ತಯಾರಿಕೆ, ಹೊಲಿಗೆ ಯಂತ್ರ ತರಬೇತಿ, ಬಳಿ ವ್ಯಾಪರ, ಉಣ್ಣೆ ತಯಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೀಗೆ ಕಾರ್ಯಕ್ರಮಗಳು ಇವೆ.ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿವುದರಿಂದ ಆರ್ಥಿಕ ದಿಂದ ಸದೃಡಗೂಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಯಲ್ಲವ್ವ ದ್ಯಾಮಣ್ಣವರ, ಉಪಾಧ್ಯಕ್ಷೆ ತಡಸೂರ, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ