ಬೀದರ – ಯಶವಂತಪುರ ಎಕ್ಸಪ್ರೆಸ್ ರೈಲು ಹುಮನಾಬಾದ ಮಾರ್ಗದಿಂದ ಸಂಚರಿಸಬೇಕು : ಸಂಗಮೇಶ ಎನ್ ಜವಾದಿ.
ಚಿಟಗುಪ್ಪಾ : ಬೀದರ – ಯಶವಂತಪುರ ಎಕ್ಸಪ್ರೆಸ್ ರೈಲು ಹುಮನಾಬಾದ ಮಾರ್ಗದ ಮೂಲಕ ದಿನನಿತ್ಯವೂ ಸಂಚರಿಸಬೇಕು ಎಂದು ಸಾಹಿತಿ, ಸಮಾಜಿಕ ಸೇವಕ ಸಂಗಮೇಶ ಎನ್ ಜವಾದಿಯವರು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬೀದರ ಜಿಲ್ಲೆಯ ಹಾಗೂ ವಿಶೇಷವಾಗಿ ಹುಮನಾಬಾದ – ಕಮಲಾಪೂರ ಜನರ ಬಹು ದಿನಗಳ ಬೇಡಿಕೆ ಇದಾಗಿದೆ. ಇದಕ್ಕೆ ರೈಲ್ವೆ ಇಲಾಖೆಯು ಇತ್ತೀಚೆಗೆ ಈ ಮಾರ್ಗದ ಮೂಲಕ ಸಂಚರಿಸಲು ಹಸಿರು ನಿಶಾನೆ ತೋರಿಸಿದ್ದು ಸಂತೋಷಕರ ಬೆಳವಣಿಗೆ. ಆದರೆ ಇದನ್ನು ಸಹಿಸಿಕೊಳ್ಳದ ಕೆಲ ರಾಜಕೀಯ ನಾಯಕರ ಸ್ವಾರ್ಥ ಪ್ರತಿಷ್ಠೆಯಿಂದ ಸ್ವಲ್ಪ ಅಡಚಣೆಯಾಗುತ್ತಿದೆ. ಆದಕಾರಣ ಯಾವುದೇ ರಾಜಕೀಯ ಒತ್ತಡಗಳಿಗೆ ಕೇಂದ್ರ ರೈಲ್ವೇ ಸಚಿವರು, ಅಧಿಕಾರಿಗಳು ಮಣಿಯದೇ ಹುಮನಾಬಾದ – ಕಮಲಾಪೂರ ಮಾರ್ಗದ ಮೂಲಕ ಬೀದರ – ಯಶವಂತಪುರ ರೈಲು ಸಂಚರಿಸಬೇಕು.ಇದರಿಂದ ಇಲ್ಲಿನ ಜನಸಾಮಾನ್ಯರಿಗೆ ಬೆಂಗಳೂರು ನಗರಕ್ಕೆ ಬಂದು ಹೋಗಲು ಬಹಳ ಅನುಕೂಲವಾಗುತ್ತದೆ. ಈ ರೈಲ್ವೇ ಬಿಟ್ಟು ಬೇರೆ ಅನ್ಯ ರೈಲ್ವೆಗಳು ಇಲ್ಲಿಂದ ಹೋಗುವುದಿಲ್ಲ – ಬರುವುದಿಲ್ಲ. ಆದ್ದರಿಂದ ಬಹು ಬೇಗನೆ ಈ ರೈಲು ಸಂಚರಿಸಲಿ ಎಂದು ಸಂಗಮೇಶ ಎನ್ ಜವಾದಿಯವರು ತಿಳಿಸಿದ್ದಾರೆ.
ವರದಿ – ಸಂಪಾದಕೀಯ