ತಾವರಗೇರಾ ಪಟ್ಟಣದಲ್ಲಿಂದು ಅಪ್ಪು ಅಭಿಮಾನಿ ಬಳಗದವತಿಯಿಂದ ಬಸವೇಶ್ವರ ಸರ್ಕಲ್ ನಲ್ಲಿ ಪುನೀತ್ ಹುಟ್ಟು ಹಬ್ಬದ ನಿಮಿತ್ಯ ಅಪ್ಪು ಭಾವ ಚಿತ್ರಕ್ಕೆ ಹೂವಿನ ಮಾಲೆ ಹಾಕುವದರ ಜೊತೆಗೆ, ಕೇಕ್ ಕಟ್ ಮಾಡುವ ಮೂಲಕ ಅನ್ನಸಂತರ್ಪಣೆ ಕಾರ್ಯಕ್ರಮ.
‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಜಗತ್ತಿನ ನಾನಾ ಭಾಗದಲ್ಲಿರುವ ಕನ್ನಡಿಗರು ಅಪ್ಪು ಅಗಲಿಕೆಯ ಸುದ್ದಿ ಕೇಳಿ ಕಣ್ಣೀರು ಹಾಕಿದ್ದರು. ಈಗಲೂ ಅವರು ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಸದ್ಯ ಪುನೀತ್ ಅವರ ಹುಟ್ಟುಹಬ್ಬ ಮತ್ತು ‘ಜೇಮ್ಸ್‘ ಬಿಡುಗಡೆ ಒಂದೇ ದಿನ ಬಂದಿರುವುದರಿಂದ ಅಭಿಮಾನಿಗಳಿಗೆ ಡಬಲ್ ಧಮಾಕಾ ಎಂದೇ ಹೇಳಬಹುದು. ವಿದೇಶದಲ್ಲೂ ಕೂಡ ‘ಜೇಮ್ಸ್’ ಜಾತ್ರೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ‘ಜೇಮ್ಸ್’ ಸಿನಿಮಾವು ಭಾರತ ಸೇರಿದಂತೆ ವಿಶ್ವಾದ್ಯಂತ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ನ್ಯೂ ಜೆರ್ಸಿಯಲ್ಲೂ ಸಾಕಷ್ಟು ಶೋಗಳನ್ನು ಬುಕ್ ಮಾಡಲಾಗಿದೆ. ಹಾಗಾಗಿ ಅಲ್ಲಿರುವ ಕನ್ನಡಿಗರು ಜೇಮ್ಸ್ ಜಾತ್ರೆ ಮಾಡಲು ನಿರ್ಧಾರ ಮಾಡಿದ್ದಾರೆ. ಅಪ್ಪು ಜನ್ಮದಿನದ ಸಲುವಾಗಿ ಸುಮಾರು 150ಕ್ಕೂ ಅಧಿಕ ಕಾರುಗಳಲ್ಲಿ 250ಕ್ಕೂ ಅಧಿಕ ಮಂದಿ ರ್ಯಾಲಿ ನಡೆಸಲಿದ್ದಾರೆ. ಅಪ್ಪು ಮೇಲಿನ ಅಭಿಮಾನವನ್ನು ತೋರಿಸಲಿದ್ದಾರೆ. ‘ಕಾಣದಂತೆ ಮಾಯವಾದ ನಮ್ಮ ರಾಜಕುಮಾರ ಎಂದೆಂದಿಗೂ ನಮ್ಮ ಮನ ಮನೆಗಳಲ್ಲಿ ಅಮರ..’ ಎಂದು ಹೇಳಿಕೊಂಡಿದ್ದಾರೆ. ‘ಬೆಟ್ಟದ ಹೂವು ಎಂದೆಂದಿಗೂ ಬಾಡುವುದಿಲ್ಲ..’ ಎಂದು ಆರಾಧಿಸುತ್ತಿದ್ದಾರೆ. ಅಂದಹಾಗೆ, ಅಪ್ಪು ಅವರ ಮೊದಲ ನಿರ್ಮಾಣದ ಸಿನಿಮಾ ‘ಕವಲುದಾರಿ’ ಟೀಸರ್ ಕೂಡ ಅಕ್ಕ ಸಮ್ಮೇಳನದಲ್ಲೇ ರಿಲೀಸ್ ಆಗಿತ್ತು ಅನ್ನೋದನ್ನು ನಾವು ಈ ಕ್ಷಣ ನೆನಪು ಮಾಡಿಕೊಳ್ಳಬಹುದು. ಪುನೀತ್ ರಾಜ್‌ಕುಮಾರ್ ಅವರು ನಮ್ಮೊಂದಿಗೆ ಇಲ್ಲವಾದರೂ, ಅವರ ನನೆಪು ಸದಾ ಹಸಿರಾಗಿತ್ತದೆ ಎಂದು ಅಭಿಮಾನಿಗಳು, ಅಪ್ಪು ಜನ್ಮದಿನವನ್ನ ಇಂದು ತಾವರಗೇರಾ ಪಟ್ಟಣದಲ್ಲಿಂದ ಪುನೀತ ಅಭಿಮಾನಿಗಳ ಬಳಗದವತಿಯಿಂದ ಶ್ರೀ ಬಸವೇಶ್ವರ ವೃತ್ತದಲ್ಲಿ ಪುನೀತ್ ರವರ ಭಾವ ಚಿತ್ರಕ್ಕೆ ಜೇಸಿಬಿಯಿಂದ ಹೋವಿನ ಮಾಲೆ ಹಾಕುವುದರ ಜೊತೆಗೆ ಕೇಕ್ ಕಟ್ ಮಾಡಲಾಯಿತು, ಇದರ ಜೊತೆಗೆ ಅನ್ನ ಸಂತರ್ಫಣೆ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಒಟ್ಟಿನಲ್ಲಿ ಅಪ್ಪು ಅಭಿಮಾನಿಗಳ ಹರ್ಷವನ್ನು ಇನ್ನಷ್ಟು ಹೆಚ್ಚಿಸಲು ‘ಜೇಮ್ಸ್’ ಕೂಡ ತೆರೆಗೆ ಬಂದಿದ್ದು, ಡಬಲ್ ಖುಷಿಯನ್ನು ನೀಡಿದೆ. ಅಲ್ಲದೆ, ಈಗಾಗಲೇ ಚಿತ್ರಮಂದಿರಗಳ ಎದುರು ದೊಡ್ಡ ಸಂಭ್ರಮಾಚರಣೆಯೇ ನಡೆಯುತ್ತಿದೆ.
ವರದಿ – ಶ್ಯಾಮ್ ದಾಸನೂರ