* ಕರಾಸ್ತ್ರ’ ಚಲನಚಿತ್ರ ಪತ್ರಿಕಾಗೋಷ್ಠಿ:ಪೋಸ್ಟರ್ ಬಿಡುಗಡೆ*
ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಮೂಲಕ ಪ್ರಥಮ ಕಾಣಿಕೆಯಾಗಿ “ಕರಾಸ್ತ್ರ” ಕನ್ನಡ ಚಲನಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ ಎಂದು ನಿರ್ದೇಶಕ ನಾರಾಯಣ ಪೂಜಾರ ಹೇಳಿದರು. ಹುಬ್ಬಳ್ಳಿಯ ಪತ್ರಿಕಾ ಗೋಷ್ಠಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕ ಕಲಾವಿದರನ್ನು ಸೇರಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ದ್ವಾಪರ ಯುಗದಲ್ಲಿ ಆದಂತಹ ಸಮಸ್ಯೆಗೆ ಕಲಿಯುಗದಲ್ಲಿ ಪರಿಹಾರ ಹುಡುಕಲು ಬಂದ ನಾಯಕಿ ಸಮಸ್ಯೆ ಬಗೆಹರಿಸುತ್ತಾಳೆಯೋ ಇಲ್ಲವೋ ಎಂಬ ಕತೆಯ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಸಿನಿಮಾ ಕೌಟುಂಬಿಕ, ಭಾವನಾತ್ಮಕ ಹಾಗೂ ಸಾಹಸಮಯವಾಗಿದ್ದು. ಎಲ್ಲ ವಯೋಮಾನದವರು ಕುಳಿತು ನೋಡುವಂತಹ ಕತೆ ಮಾಡಲಾಗಿದೆ. ಇದರಲ್ಲಿನ ಮುಖ್ಯ ಪಾತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಇದ್ದಾರೆ. ಇದರ ಕತೆ,ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದೇನೆ. ಸಹಾಯಕ ನಿರ್ದೇಶಕರಾಗಿ ಸತೀಶ ಕ್ಯಾತಘಟ್ಟ,ಕಣಿವೆಪ್ಪ .ಬಿ, ಪವನ ಕುಲಕರ್ಣಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣವನ್ನು ಶರಣು ಸುಗ್ನಳ್ಳಿ, ಲಕ್ಷ್ಮಣ, ಮೈಲಾರಿ ಗಗನ , ಸ್ಥಿರಚಿತ್ರಣ ವಿನ್ಸೆಂಟ್ ಪರೇರಾ , ಸಂಕಲನ ಶರಣು ಸುಗ್ನಳ್ಳಿ, ಅಮೀತ ಬಳ್ಳಾರಿ, ಸಂಗೀತ ಮಹಾರಾಜ್ , ಕರಾಟೆ ಮಂಜೆ,ಶಂಕರ ಶಾಸ್ತ್ರೀ ಸಾಹಸ, ವಿನಾಯಕ ನೃತ್ಯ, ಕಲಾ ನಿರ್ದೇಶನ ಶಾಂತಯ್ಯ ಪರಡಿಮಠ,ವಸ್ತ್ರಾಲಂಕಾರ ಹಾಗೂ ಪ್ರಸಾಧನವನ್ನು ಬಿ.ಎಚ್.ನಯನಾ ನಿರ್ವಹಿಸಿದ್ದಾರೆ. ಪತ್ರಿಕಾಸಂಪರ್ಕ ಡಾ. ಪ್ರಭು ಗಂಜಿಹಾಳ,ಡಾ.ವೀರೇಶ್ ಹಂಡಗಿ ಅವರದಿದೆ ಎಂದರು. ಪಾತ್ರವರ್ಗದಲ್ಲಿ ನಾರಾಯಣ ಪೂಜಾರ, ಕ್ಷಿತಿ ವೀರಣ್ಣ, ಬೇಬಿ ಸಾಕ್ಷಿ, ಕಾರ್ತಿಕ ಪೂಜಾರ, ಮನಿಷಾ ಕಬ್ಬೂರ, ಬೇಬಿ ಕೃಷ್ಣವೇಣಿ, ಹನುಮಂತ, ಮಾಲತೇಶ ಸುಂಕದ,ಅಬ್ದುಲ್ ಮುನ್ನಾ ಎರೇಸೀಮೆ, ಬಸವರಾಜ ಹೋಬಾಳೆ, ಭುವನಾ, ವಿದ್ಯಾ ಬೆಳಗಾಂವ, ಹೀತೇಶ, ವಿಜಯಕುಮಾರ ನಾಗರತ್ನ ಮೊದಲಾದ ಕಲಾವಿದರು ನಟಿಸಿದ್ದಾರೆ. ಇದೇಸಂದರ್ಭದಲ್ಲಿ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪತ್ತಿಕಾಗೋಷ್ಠಿಯಲ್ಲಿ ಮನಿಷಾ ಕಬ್ಬೂರ, ಪೂರ್ಣಾ,ಸ್ಟೆಪಿ, ಚೇತನ, ವಿನೋದ ಭಾಂಡಗೆ ಮತ್ತು ಚಿತ್ರ ತಂಡದವರು ಇದ್ದರು. * –ವರದಿ:ಡಾ.ಪ್ರಭು ಗಂಜಿಹಾಳ.ಮೊ-9448775346