ಮುದೇನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮ.
ಕುಷ್ಟಗಿ ತಾಲೂಕಿನ ಮುದೇನೂರುಗ್ರಾ ಸರಕಾರಿ ಪ್ರೌಢ ಶಾಲೆ ಎಸೆಸೆಲ್ಸಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಶಾರದಾ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು . ಶಾಲೆಯ ಆವರಣದ ತುಂಬೆಲ್ಲಾ ರಂಗೋಲಿ ಹಾಕಿ ಮಕ್ಕಳು ಸಂಭ್ರಮಿಸಿದರು ಶಾಲೆಯ ಎಲ್ಲಾ ಕೊಠಡಿಗಳಿಗೆ ತೋರಣವನ್ನು ಕಟ್ಟಿ ಮಕ್ಕಳು ಖುಷಿ ಹಂಚಿಕೊಂಡರು ಪ್ರತಿ ವರ್ಷ ಶಾಲೆಯ ಕೊನೆಯ ಹಂತದಲ್ಲಿ ಶಾರದಾ ಪೂಜೆ ಮಾಡುವುದು ನಾವು ಮೊದಲಿನಿಂದಲೂ ರೂಢಿ ಮಾಡಿಕೊಂಡು ಬಂದಿದ್ದೇವೆ ಇದು ಮಕ್ಕಳಿಗೆ ಒಂದು ರೀತಿ ಹಬ್ಬ ವಾಗಿರುತ್ತದೆ ಇನ್ನು .ಗ್ರಾಮ ಪಂಚಾಯತಿ ಸದಸ್ಯ ಹುಸೇನಪ್ಪ ಮುದೇನೂರು ಮಾತನಾಡಿ ಶಾಲೆಯ ಪ್ರಾರಂಭ ದಿನಗಳಿಂದ ಕೊನೆಯವರೆಗೂ ಮಕ್ಕಳಿಗೆ ಶಾರದ ಮಾತೆಯ ಕೃಪೆಯಿಂದ ಒಳ್ಳೆಯ ಶಿಕ್ಷಣ ಒಳ್ಳೆಯ ಸಂಸ್ಕೃತಿ ಉನ್ನತ ಶಿಕ್ಷಣವನ್ನು ಎಲ್ಲಾ ಮಕ್ಕಳು ಪಡೆಯಲೆಂದು ನಾನು ಶಾರದಾಮಾತೆ ಯಲ್ಲಿ ಪ್ರಾರ್ಥಿಸುತ್ತೇನೆ ಎಲ್ಲಾ ಮಕ್ಕಳಿಗೂ ಒಳ್ಳೆಯದಾಗಲಿ. ಶಿಕ್ಷಣ ನಮ್ಮ ವರ್ತನೆಯನ್ನು ಪರಿವರ್ತನೆ ಮಾಡಬೇಕು ಶಿಕ್ಷಣ ಏನು ಮಾಡಬೇಕೆಂದರೆ ನಿಮ್ಮನ್ನು ಬದಲಾಯಿಸಬೇಕು ನಡುವಳಿಕೆಯನ್ನು ವರ್ತನೆಯನ್ನು ಪರಿವರ್ತನೆ ಮಾಡಬೇಕು ಯಾವುದು ನಮ್ಮ ಮನಸ್ಸು ವಿಶಾಲ ಗೊಳಿಸುತ್ತದೆ ಅದು ನಿಜವಾದ ಶಿಕ್ಷಣ ಎಂದು ಸದಸ್ಯರು ಹುಸೇನಪ್ಪ ಮುದೇನೂರು ಮಕ್ಕಳಿಗೆ ತಿಳಿಸಿದರು. ಇನ್ನು ಶಿಕ್ಷಕರಾದ ಮುಖ್ಯಗುರುಗಳಾದ ಗುರುರಾಜ್ ಸಾವಿ ಮಾತನಾಡಿ ನಾವು ಶಾರದಾಮಾತೆ ಪೂಜೆಯನ್ನು ಶಾಲೆಯ ಕೊನೆಯ ಹಂತದಲ್ಲಿ ನಾವು ಒಂದು ದೊಡ್ಡ ಹಬ್ಬವನ್ನಾಗಿ ಮಾಡುತ್ತೇವೆ, ಎಲ್ಲಾ ಮಕ್ಕಳಿಗೆ ಶುಭವಾಗಲಿ ಎಂದರು. ವರದಿ – ಚಂದ್ರುಶೇಖರ ಕುಂಬಾರ ಮುದೇನೂರು.