ದೆಹಲಿ ಕನ್ನಡ ಕಲಾ ಸಮ್ಮೇಳನಕ್ಕೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸಾಮಾಜೀಕ ಸೇವೆಗೈದ ಶ್ಯಾಮೀದಸಾಬ ಯು.ಮುಲ್ಲಾ ಆಯ್ಕೆ.

Spread the love

ದೆಹಲಿ ಕನ್ನಡ ಕಲಾ ಸಮ್ಮೇಳನಕ್ಕೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸಾಮಾಜೀಕ ಸೇವೆಗೈದ ಶ್ಯಾಮೀದಸಾಬ ಯು.ಮುಲ್ಲಾ ಆಯ್ಕೆ.

ಸಾಮಾಜ ಸೇವೆಯೆ ಈಶ ಸೇವೆ ಎಂದು ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಶ್ರಮಿಕ ಎಂದರು ತಪ್ಪಾಗಲಾರದು, ಶ್ಯಾಮೀದ್ ಸಾಬ ಯು.ಮುಲ್ಲಾ ರವರು ಮೂಲತ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದವರಾಗಿದ್ದು. ಮೂಲತ ಬಡತನ ಕುಟುಂಬದಲ್ಲಿ ಅರಳಿದ ಶ್ರಮಿಕರು, ಇವರು ಶಾಲಾ ಕಾಲೇಜಿನಿಂದಲು ಬಡ ವಿಧ್ಯರ್ಥಿಗಳಿಗೆ ಸಹಕಾರ ನೀಡುತ್ತ ಬೆಳೆದವರು, ಹಲವು ವರ್ಷಗಳಿಂದ ದಿನ,ದಲಿತರ, ಬಡ, ನಿರ್ಗತೀಕರ ಕುಟುಂಬದ ಏಳಿಗೆಗೆ ಪ್ರತಿ ನಿತ್ಯ ಹಲವು ಸಾಮಾಜೀಕ ಸೇವೆ ಸಲ್ಲಿಸುತ್ತ ಬಂದಿರುವುದು ಇವರ ಕಾಯಕವಾಗಿದೆ. ಈ ಕಾಯಕದ ಜೊತೆಗೆ ಹಲವು ವರ್ಷಗಳಿಂದ ಸರ್ಕಾರದಿಂದ ಬರುವು ಎಸ್ಸಿ, ಎಸ್ಟಿ ನಿಗಮದಲ್ಲಿ ಭೂ ಒಡೆತನ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ ಜಮೀನು ಕೊಡಿಸುವಲ್ಲಿ ಪ್ರತಿ ನಿತ್ಯ ಶ್ರಮಿಸುತ್ತಿದ್ದಾರೆ. ಈ ಎಲ್ಲಾ ಸಾಮಾಜೀಕ ಸೇವೆಯಲ್ಲಿ ನಿರತರಾಗಿರುವ ಶ್ಯಾಮೀದ್ಸಾಬ ಯು.ಮುಲ್ಲಾರವರನ್ನು ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಕಡೆಯಿಂದ ಹೆಮ್ಮೆಯ ಕನ್ನಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರಲ್ಲಿರುವ ಸಾಮಾಜೀಕ ಕಳಕಳಿಯೆ ಇವರಿಗೆ ಇಂದು ದೆಹಲಿಯಲ್ಲಿ ನಡೆಯಲಿರುವ ದೆಹಲಿ ಕನ್ನಡ ಕಲಾ ಸಮ್ಮೇಳನ‌ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿರುವ ಸಾಮಾಜ ಸೇವೆ ಇದರ ಜೊತೆಗೆ ಮುಂದಿನ ದಿನಮಾನಗಳಲ್ಲಿ ಸಮಾಜಸೇವೆಗೆಂದೆ ರಾಜಕೀಯ ರಂಗಕ್ಕೆ ಕರೆ ತರುವ ಸಾಧ್ಯತೆಗಳು ಇವೆ. ಇದರಿಂದಾಗಿ ಇವರನ್ನು ಸಾಮಾಜೀಕ ಕ್ಷೇತ್ರ ಪ್ರಶಸ್ತಿಯನ್ನು (ಅವಾರ್ಡ) ಪಡೆಯುತ್ತಿರುವುದು ಸಂತಸದ ವಿಷಯ. ಇದೆ ಮಾ.೨೦ ರಂದು ದೆಹಲಿಯಲ್ಲಿ ಹೈಬ್ರೀಡ್ ನ್ಯೂಸ್  ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ‌ ಆಯೋಜಿಸಿದ ದೆಹಲಿ ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ತಮ್ಮ ಮಡಲಿಗೆ ಭರಸಿಕೊಳ್ಳುವ ಸುದ್ದಿ. ಸುದ್ದಿ ತಿಳಿದ ಕುಟುಂಬಸ್ಥರು ಹಾಗೂ ಸ್ನೇಹ ಬಳಗ ಹರ್ಷ ವ್ಯಕ್ತ ಪಡಿಸಿದ್ದಾರೆ.

 ವರದಿ – ಸಂಪಾದಕೀಯ

Leave a Reply

Your email address will not be published. Required fields are marked *