ಪ್ರಗತಿ ವಿದ್ಯಾಲಯದಲ್ಲಿ ದತ್ತಿನಿಧಿ, ಸಾಧನಾ ಪುರಸ್ಕಾರ..

Spread the love

ಪ್ರಗತಿ ವಿದ್ಯಾಲಯದಲ್ಲಿ ದತ್ತಿನಿಧಿ, ಸಾಧನಾ ಪುರಸ್ಕಾರ..

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರು ಪ್ರಗತಿ ವಿದ್ಯಾಲಯದಲ್ಲಿ ದತ್ತಿನಿಧಿ ಹಾಗೂ ಸಾಧನಾ ಪುರಸ್ಕಾರ ಕಾರ್ಯಕ್ರಮ ನೆರವೇರಿತು.ಮೂರೂರು ಪ್ರಗತಿ ವಿದ್ಯಾಲಯದ ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ವಿ ಆರ್ ಭಟ್ಟ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪುಟ್ಟದಾಗಿ ಪ್ರಾರಂಭವಾದ ಸಂಸ್ಥೆ ಎತ್ತರಕ್ಕೆ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂಸ್ಥೆಯ ವತಿಯಿಂದ ಇನ್ನು ಹೆಚ್ಚೆಚ್ಚು ಸಾಧಕರಿಗೆ ಪುರಸ್ಕರಿಸಿ ಗೌರವಿಸುವಂತೆ ಆಗಲಿ ಎಂದು ಶುಭ ಹಾರೈಸಿದರು. ಮೂರೂರು ಕಲ್ಲಬ್ಬೆ ಯ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಆರ್ ಜಿ ಭಟ್ಟ  ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಿಸರ್ಗದ ಮಡಿಲಲ್ಲಿ ಸಂಸ್ಕೃತಿಗೆ ಹೆಸರಾದ ಶಾಲೆಯಲ್ಲಿ ತಾವು ಸಹ ಕಲಿತಿರುವ ಘಳಿಗೆಗಳನ್ನು ನೆನೆಸಿಕೊಂಡು ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದು ತಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದ ಅತಿಥಿಗಳಾಗಿ  ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿ ಎಸ್ ಹೆಗಡೆ, ಕಾರ್ಯದರ್ಶಿಗಳಾದ ಶ್ರೀ ಟಿ ಎಸ್ ಭಟ್ಟ, ವಿದ್ಯಾರ್ಥಿನಿಲಯದ ಸಂಚಾಲಕರಾದ ಶ್ರೀ ಐ ಪಿ ಭಟ್ಟ ಉಪಸ್ಥಿತರಿದ್ದು ಮಾತನಾಡಿ ಇನ್ನಷ್ಟು ಹೆಚ್ಚೆಚ್ಚು ಪ್ರೋತ್ಸಾಹಕರು ದತ್ತಿನಿಧಿ ಹಾಗೂ ಸಾಧನಾ ಪುರಸ್ಕಾರಕ್ಕೆ ಸಿಗುವಂತಾಗಲಿ, ಸಾಧಕರಿಗೆ ಮಾರ್ಗದರ್ಶಕರಾಗಲಿ ಎಂದು ಶುಭಕೋರಿದರು. ಶಿಕ್ಷಣ ಸಮಿತಿಯ ಸಂಚಾಲಕರಾದ ಶ್ರೀ ಟಿ ಆರ್ ಜೋಷಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಪ್ರೋತ್ಸಾಹಿಸಿ ತುಂಬುವ ಕಾರ್ಯ ಇದಾಗಿದೆ ಎಂದರು. ಪ್ರಗತಿ ವಿದ್ಯಾಲಯ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.ವೇದಿಕೆಯ ಮೇಲೆ ಪ್ರಗತಿ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢ ವಿಭಾಗದ ಮುಖ್ಯಾಧ್ಯಾಪಕರಾದ ಶ್ರೀ ವಿವೇಕ ಆಚಾರಿ, ಪ್ರಗತಿ ವಿದ್ಯಾಲಯ ಕನ್ನಡ ಮಾಧ್ಯಮ ವಿಭಾಗದ ಮುಖ್ಯಾಧ್ಯಾಪಕರಾದ ಶ್ರೀ ವಿ ಎಸ್ ಗೌಡ ಉಪಸ್ಥಿತರಿದ್ದರು. ಸಂಸ್ಥೆಯ ಸರ್ವ ಸದಸ್ಯರು, ಶಾಲಾ ಶಿಕ್ಷಕ ವೃಂದ, ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು. ಶ್ರೀಧರ ಸಂಸ್ಕೃತ ಪಾಠಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಶ್ರೀಪಾದ್ ಭಟ್ಟ ರವರು ಸ್ವಾಗತಿಸಿದರು. ಪ್ರಗತಿ ವಿದ್ಯಾಲಯ ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿಯವರಾದ ಶ್ರೀಮತಿ ನಾಗವೇಣಿ ಭಟ್ಟ ರವರು ವಂದಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *