ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ನ್ಯೂಸ್ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು…..

Spread the love

ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ನ್ಯೂಸ್ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು…..

ತಾವರಗೇರಾ ಹೋಬಳಿಯಲ್ಲಿ 2018ನೇ ಸಾಲಿನಲ್ಲಿ ತಾವರಗೇರಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆಯು ಉದಯವಾಗಿದ್ದು, ಪತ್ರಿಕೆಗಳಿಗೆ ಸುದ್ದಿ ನೀಡುವುದು ಕಷ್ಟದ ಕೆಲಸವಾಗಿರುತ್ತದೆ ಎಂದು ಜುಮಲಾಪುರ ಗ್ರಾಮದ ಕಲಾವಿದ ಬಸವರಾಜ ಬಡಿಗೇರ ಅಭಿಪ್ರಾಯ ವ್ಯಕ್ತಪಡಿಸಿದರು ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ’ ತಾವರಗೇರಾ ನ್ಯೂಸ್ (ವೆಬ್ ಪೋರ್ಟಲ್) ಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು} ಭೂತಕಾಲ ಹಾಗೂ ಭವಿಷ್ಯದ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಕೆಲಸವಾಗಿದೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಮೂರು ಕಾಲದ ಸುದ್ದಿಗಳನ್ನು ನೀಡುವುದು ಬಹಳಷ್ಟು ಕಷ್ಟವಾಗಿರುತ್ತದೆ ಎಂದರು. ಕೃಷಿ ಪ್ರಿಯ’ ಪತ್ರಿಕೆಯ ಸಂಪಾದಕ ಶರಣಪ್ಪ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಬೆಳಕ ಚೆಲ್ಲುವ ಕಾರ್ಯ ಮೊದಲು ಜರುಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ರಿಕೆ ಅಂದು, ಇಂದು ವಿಷಯ ಕುರಿತು ಹಿರಿಯ ವರದಿಗಾರ ವಿ.ಆರ್.ತಾಳಿಕೋಟಿ ಮಾತನಾಡಿದರು. ಯುವ ಚಿತ್ರ ನಟ ಅಜಯರಾವ್ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸದಸ್ಯ ಹಾಗೂ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಸಾಧಿಕ್ ಅಲಿ , ಎಸ್ಟಿಎಂಸಿ ಅಧ್ಯಕ್ಷ ಕನಕಪ್ಪ ಹುಡೇಜಾಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ.ಸದಸ್ಯ ಶಶಿಧರಗೌಡ ಪಾಟೀಲ್, ದುರಗೇಶ ಇದ್ಲಾಪೂರ, ಶಿಕ್ಷಕ ಬಸವರಾಜ ಬಾಗಲಿ, ಪತ್ರರ್ತರಾದ ತಿರುಪತಿ ಯಲಿಗಾರ, ಚಂದ್ರು ಕುಂಬಾರ, ಬೀಮನಗೌಡ ಪಾಟೀಲ. ಸುಭಾಸ ಜುಮಲಾಪೂರು, ಪ್ರಕಾಶ ಬೆದದೊಟ್ಟಿ, ಮಂಜುನಾಥ ಕೋಳೂರ, ಎನ್. ಶಾಮಿದ್, ಮಂಜುನಾಥ, ಹೆಚ್.ಜಿ.ಮ್ಯಾಗಳಮನಿ, ಹೇಮರಾಜ ವೀರಾಪೂರ, ಮುಖಂಡ ಅನಿಲಕುಮಾರ ಬೇಗಾರ, ಶರಣಪ್ಪ ಲೈನದ, ಹನುಮೇಶ ಗರ್ಜನಾಳ,ಬಾಳಪ್ಪ ಕೊಡಗಲಿ ಗ್ರಾ.ಪಂ ಸದಸ್ಯರು, ಡಿ.ಎಸ್.ಎಸ್.ಮುಖಂಡ ಶಂಕ್ರಪ್ಪ ಜುಮಲಾಪುರ, ತಾವರಗೇರಾ ನ್ಯೂಜ್ ಪತ್ರಿಕೆ ಸಂಪಾದಕ ಆರ್.ಬಿ. ಅಲಿ ಆದೀಲ್, ಉಪ ಸಂಪಾದಕ ಅಮಾಜಪ್ಪ ಜುಮಲಾಪೂರು, ತಾವರಗೇರಾ ನ್ಯೂಸ್ ಪತ್ರಿಕೆ ಬಳಗ, ಹಾಗೂ ಸಮಾಜೀಕ ಹೋರಾಟಗಾರರಾದ ರಾಜಾನಾಯಕ, ಯಮನೂರಪ್ಪ ಬಿಳೆಗುಡ್ಡ, ಇತರರು ಸೇರಿದಂತೆ ಇನ್ನಿತರರಿದ್ದರು. ಕ್ಯಾಲೆಂಡರ್ ಬಿಡುಗಡೆ: ತಾವರಗೇರಾ ನ್ಯೂಸ್ ಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ 2022ರ ಕ್ಯಾಲೆಂಡರ್ ಅನ್ನು ಈ ಸಮಾರಂಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹಾಗೂ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ. ಸಾಧಿಕ್ ಅಲಿ ಅವರು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮಕ್ಕೆ ಸಾಥ ನೀಡಿದ ಜುಮಲಾಪುರ ಗ್ರಾಮದ ಗುರು/ಹಿರಿಯರು, ಸರ್ಕಾರಿ ಪ್ರೌಡ ಶಾಲೆಯ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳ ಸಹಕಾರಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗವರು ಚಿರೃಣಿಯಾಗಿರುತ್ತಾರೆ, ಪ್ರತಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡದವರಿಗೆ ಮತ್ತೊಮ್ಮೆ ಧನ್ಯವಾದಗಳೊಂದಿಗೆ ಸಲ್ಲಿಸುತ್ತಿದ್ದೆವೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *