ನೊಂದ ಕುರಿಗಾಯಿಗಳು ಇದ್ದ ಸ್ಥಳಕ್ಕೇ ಹೋಗಿ ದೈರ್ಯ ತುಂಬಿದ ಸಿರಾ ಶಾಸಕ ರಾಜೇಶ್ ಗೌಡ್ರು..

Spread the love

ನೊಂದ ಕುರಿಗಾಯಿಗಳು ಇದ್ದ ಸ್ಥಳಕ್ಕೇ ಹೋಗಿ ದೈರ್ಯ ತುಂಬಿದ ಸಿರಾ ಶಾಸಕ ರಾಜೇಶ್ ಗೌಡ್ರು..

ಶಿರಾ: ತಾಲ್ಲೂಕಿನ ಕಾಡುಗೊಲ್ಲ ಸಮುದಾಯದ ಕುರಿಗಾಹಿಗಳು ತಮ್ಮ ಜೀವನೋಪಾಯಕ್ಕಾಗಿ ತಮ್ಮ ಕುರಿಗಳ ಪೋಷಣೆಗೆ ಮೇವು ಹರಸಿ ವಲಸೆ ಹೋಗುವ ಪದ್ಧತಿ ಇದೆ . ಇತ್ತೀಚೆಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹೊಲದ ಬಳಿ ಬೀಡು ಬಿಟ್ಟಿದ್ದ ಶಿರಾ ತಾಲ್ಲೂಕಿನ ದೊಡ್ಡಬಾಣಗೆರೆ ಗ್ರಾಮದ ಕುರಿಗಾಹಿಗಳ ಮೇಲೆ ದುರುಳ ಕಳ್ಳರ ಗುಂಪೊಂದು ಕುರಿಗಳನ್ನ ಕದಿಯುವ ಸಲುವಾಗಿ ಮಾರಕಸ್ತ್ರಗಳ ತೋರಿಸಿ ಹಲ್ಲೆ ನಡೆಸಿತ್ತು. ತಮ್ಮ ಪ್ರಾಣ ರಕ್ಷಣೆಗೆ ಮುಂದಾದಾಗ ಕಳ್ಳರ ಗ್ಯಾಂಗ್ ಒಬ್ಬನಿಗೆ ಪೆಟ್ಟಾಗಿ ಆಸ್ಪೆತ್ರೆ ಸೇರಿದ್ದಾನೆ . ಮಳವಳ್ಳಿ ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ ಕುರಿಗಾಯಿ ಮೂರು ಯುವಕರನ್ನ ಬಂಧನದಲ್ಲಿಟ್ಟಿದ್ದರು. ವಿಷಯ ತಿಳಿದು ಸಿರಾ ಶಾಸಕ ರಾಜೇಶ್ ಗೌಡ್ರು ಮೊನ್ನೆ ಕರೆ ಪೊಲೀಸ್ ಅಧಿಕಾರಿಗೆ ಮಾತನಾಡಿ ಬಿಡುಗಡೆಗೊಳಿಸುವಂತೆ ತಿಳಿಸಿದ್ರು.ಭಾನುವಾರ ಶಾಸಕರು ಖುದ್ದು ಮಳವಳ್ಳಿ dysp ಅವರನ್ನ ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದು,

ಅಮಾಯಕರಿಗೆ ಶಿಕ್ಷೆ ಆಗಬಾರದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಜೊತೆಗೆ ಇಂದೇ ಬಿಡುಗಡೆ ಮಾಡಿಸುವ ವ್ಯವಸ್ಥೆ ಮಾಡಿಸಿ, ಬೀಡು ಬಿಟ್ಟಿದ್ದ ಸ್ಥಳಕ್ಕೆ ತೆರಳಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿ ನಿಮ್ಮ ಜೊತೆ ನಾನು ಇದ್ದೇನೆ ಎಂದು ದೈರ್ಯ ತುಂಬಿದರು . ಇಂತಹ ಕಷ್ಟ ಸಂದರ್ಬದಲ್ಲಿ ಶಾಸಕ ರಾಜೇಶ್ ಗೌಡರು ಬಂದು ಸಹಾಯ ಮಾಡಿದ್ದು ನೋಡಿ ಕುಟುಂಬದವರ ಕುಷಿಗೆ ಪಾರವೇ ಇಲ್ಲದಂತಾಗಿತ್ತು . ನಾವು ದೇವರನ್ನ ನೋಡಿಲ್ಲ ನಮ್ಮ ಕಾಡುಗೊಲ್ಲರಿಗೇ ನಮ್ಮ ರಾಜೇಶ್ ಗೌಡರೇ ದೇವರು ಎಂದ ಮಹಿಳೆ ಮಾತಿಗೆ ಶಾಸಕರು ಇದು ನನ್ನ ಕರ್ತವ್ಯ ಎಂದು ತಮ್ಮ ಸರಳತೆ ಮೆರೆದರು.ಆದರೇ ಇಂತಹ ಸರಣತೆ ಶಾಸಕರು ಸಿಗುವುದು ಅಪರೂಪವಾಗಿದೆ. ಶಿರಾ ಜನತೆಯೆ ಭಾಗ್ಯವಂತರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *