ಮುದೇನೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೊವಿಡ್ ಲಸಿಕೆ. ಚಾಲನೆ ನೀಡಿದ ಎಸ್ಡಿಎಂಸಿ ಅಧ್ಯಕ್ಷರಾದ.. ಗೋವಿಂದಪ್ಪ ಉಳಾಗಡ್ಡಿ
ಮುದೇನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ.. ಗೋವಿಂದಪ್ಪ ಉಳಗಡ್ಡಿ ಕಾರ್ಯಕ್ರಮವನ್ನು ಚಾಲನೆ ನೀಡಿದರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ಚಾಲನೆ ನೀಡಿ ಮಾತನಾಡಿದರು 3ನೇ ಅಲೆಯ ಕೋವಿಡ್ ಸಮಯದಲ್ಲಿ ಹೆಚ್ಚಾಗಿ ಮಕ್ಕಳನ್ನೇ ಕೊರೋನ ಟಾರ್ಗೆಟ್ ಮಾಡಿತ್ತು ಆದರೆ ಅಷ್ಟೇ ಯಶಸ್ವಿಯಾಗಿ ಆ ಸಮಯವನ್ನು ನಿಯಂತ್ರಿಸಲಾಯಿತು. ಸರ್ಕಾರದಿಂದ ಪೂರೈಕೆಯಾಗಿರುವ ಲಸಿಕೆಯನ್ನು ಎಲ್ಲಾ ಮಕ್ಕಳು ಪಡೆದುಕೊಂಡು ಇನ್ನೂ ಹೆಚ್ಚು ಸ್ಟ್ರಾಂಗ್ ಆಗಿ ರೋಗಗಳನ್ನು ಎದುರಿಸಬೇಕೆಂದು ತಿಳಿಸಿದರು. ಈ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಬದಲಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು, ಮಕ್ಕಳು ಯಾವದೇ ಸಣ್ಣ ಅಳುಕಿಲ್ಲದೇ ಲಸಿಕೆಯನ್ನು ಪಡೆಯಬೇಕೆಂದು ಧೈರ್ಯ ತುಂಬಿದರು. ಗ್ರಾಮದ ಶಾಲೆಯ ವಿದ್ಯಾರ್ಥಿಗಳು, ಲಸಿಕೆಯನ್ನು ಅಭಿಯಾನದಲ್ಲಿ ಶಾಲೆಗಳ ಮುಖ್ಯಗುರುಗಳು, ಸಹಶಿಕ್ಷಕರು, ಪೋಷಕರು, ಆರೋಗ್ಯ ಇಲಾಖೆಯ ಫಾರ್ಮಸಿ ಸ್ಟಾಫ್‍ನರ್ಸ್ ಚಿದಂಬರ್ ಜೋಶಿ ಪ್ರತಿಭಾ ಹೊಸಮನಿ ಹಾಗೂ ಅಂಗನವಾಡಿ ಕಾರ್ಯಕರ್ತರು ಸಾವಿತ್ರಿ ಇಳಿಗೆರ್ ಆಶಾ ಚೆನ್ನಮ್ಮ ಹಿರೇಮಠ್ ಜೈಸಿಂಹ ಸುಬೇದಾರ್ ಹಾಗೂ ಎಸ್ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು ಕಾರ್ಯಕರ್ತರು ಮಕ್ಕಳಿಗೆ ಲಸಿಕೆ ಕೊಡಿಸಲು ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ – ಚಂದ್ರುಶೇಖರ ಕುಂಬಾರ ಮುದೇನೂರು